– ಮಹಾಕುಂಭಕ್ಕೆ ಬರಲಾಗದವರಿಗೆ ವ್ಯವಸ್ಥೆ ಎಂದ ಪ್ರಯಾಗ್ ಎಂಟರ್‌ಪ್ರೈಸಸ್ ಮಾಲೀಕ
ಪ್ರಯಾಗ್‌ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ಪುಣ್ಯಸ್ನಾನ ಮಾಡಲು ಸಾಧ್ಯವಾಗದವರಿಗೆ ಆಫರ್‌ವೊಂದು ಸಿಕ್ಕಿದೆ. 1100 ರೂ. ಕೊಟ್ಟರೆ ಡಿಜಿಟಲ್ ಫೋಟೋ ಸ್ನಾನದ ವ್ಯವಸ್ಥೆಯೊಂದಿದೆ.
Advertisement
ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ‘ಡಿಜಿಟಲ್ ಫೋಟೋ ಸ್ನಾನ’ (ವರ್ಚುವಲ್ ಹೋಲಿ ಡಿಪ್) ಸೇವೆಯನ್ನು ನೀಡುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ
Advertisement
Advertisement
ವಾಟ್ಸಪ್‌ನಲ್ಲಿ ಫೋಟೋ ಕಳಿಸಿ, ಅದನ್ನು ಪ್ರಿಂಟ್ ತೆಗೆದು ಫೋಟೋಗೆ ತ್ರಿವೇಣಿ ಸಂಗಮದ ನೀರಿನಲ್ಲಿ ಅಮೃತಸ್ನಾನ ಮಾಡಿಸಲಾಗುವುದು. ಮಹಾಕುಂಭಕ್ಕೆ ಬರಲಾಗದವರಿಗೆ ವ್ಯವಸ್ಥೆ ಎಂದು ಪ್ರಯಾಗ್ ಎಂಟರ್‌ಪ್ರೈಸಸ್ ಮಾಲೀಕ ತಿಳಿಸಿದ್ದಾರೆ.
Advertisement
ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಜ.13 ರಂದು ಚಾಲನೆ ಸಿಕ್ಕಿತು. ಫೆ.26 ರಂದು ಕುಂಭಮೇಳಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್
144 ವರ್ಷಗಳ ನಂತರ ನಡೆಯುತ್ತಿರುವ 45 ದಿನಗಳ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹರಿದುಬರುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ.