ಬೆಳಗಾವಿ: ಚಂದ್ರಯಾನ-2 (Chandrayaan-3) ಯಶಸ್ವಿಯಾಗಿ ಚಂದ್ರನ (Moon) ಅಂಗಳಕ್ಕೆ ಇಳಿಯುವಂತೆ ಪ್ರಾರ್ಥಿಸಿ ಬೆಳಗಾವಿಯ (Belagavi) ಕಪಿಲೇಶ್ವರ ಮಂದಿರದಲ್ಲಿ (Kapileshwar Temple) ಮಹಾರುಧ್ರಾಭಿಷೇಕ ಪೂಜೆ ನೆರವೇರಿಸಿದರು.
Advertisement
ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಚಂದ್ರಯಾನ-2 ಚಂದ್ರನ ಕಕ್ಷೆಗೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಇದು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇವಸ್ಥಾನಗಳಲ್ಲಿ ಪ್ರಾರ್ಥಿಸಲಾಗುತ್ತಿದೆ. ಹೀಗಾಗಿ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಸಾರ್ವಜನಿಕರು ಕೂಡ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
Advertisement
Advertisement
ಅರ್ಚಕ ನಾಗರಾಜ ಕಟ್ಟಿ ಪಬ್ಲಿಕ್ ಟಿವಿ ಜತೆಗೆ ಮಾತನಾಡಿ, 140 ಕೋಟಿ ಭಾರತೀಯರ ಬಯಕೆ ಈಡೇರಲಿ ಎಂದು ಕಪಿಲೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಶತರುದ್ರಾಭಿಷೇಕ, ಲಘುರುದ್ರಾಭಿಷೇಕ, ರುದ್ರಾಕ್ಷಿ, ಏಕಾದಶಿ ಪೂಜೆಗಳನ್ನು ಮಾಡಿದ್ದೇವೆ. ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಲಿ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಲಿ. ಇದರಲ್ಲಿ ನಮ್ಮ ಬೆಳಗಾವಿಯ ಇಬ್ಬರು ವಿಜ್ಞಾನಿಗಳು ಕೈ ಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದರು. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?
Advertisement
ನಗರಸೇವಕ ಶಂಕರಗೌಡ ಪಾಟೀಲ್ ಮಾತನಾಡಿ, ಇದು ಕೇವಲ ವಿಜ್ಞಾನಿಗಳ ಸಾಧನೆ ಅಲ್ಲ, ಇಡೀ ದೇಶದ ಸಾಧನೆ. ಚಂದ್ರನ ಮೇಲೆ ಇಳಿಯುತ್ತಿರುವ 4ನೇ ಮತ್ತು ಸೌತ್ ಪೋಲ್‌ನಲ್ಲಿ ಇಳಿಯುತ್ತಿರುವ ಮೊದಲ ದೇಶ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸುರಕ್ಷಿತವಾಗಿ ವಿಕ್ರಮ ಇಳಿಯಲಿ ಎಂದು ಹಾರೈಸಿದರು. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್ ಮಾಜಿ ಸಚಿವ
Web Stories