ಗಂಜಿ ಜೊತೆ ಸೂಪರ್ ಆಗಿರುತ್ತೆ ಸಿಗಡಿ ಚಟ್ನಿ

Public TV
2 Min Read
prawns chutney 2

ರಾವಳಿ ಭಾಗದಲ್ಲಿ ಅತ್ಯಂತ ಫೇಮಸ್ ಈ ಸಿಗಡಿ ಚಟ್ನಿ. ಉಪ್ಪು, ಹುಳಿ ಖಾರದೊಂದಿಗಿನ ಸ್ವಾದ ಯಾವ ರೆಸ್ಟೊರೆಂಟ್‌ನ ರುಚಿಯನ್ನೂ ಹಿಂದಿಕ್ಕಬಲ್ಲದು. ಕುಚಿಲಕ್ಕಿಯ ಗಂಜಿಯೊಂದಿಗಂತೂ ಈ ಚಟ್ನಿ ಇದ್ದರೆ ಬೇರೇನೂ ಬೇಡ. ನಿಮಿಷಗಳಲ್ಲಿ ನಿಮ್ಮ ಬಟ್ಟಲು ಖಾಲಿ ಆಗೋದು ಗ್ಯಾರೆಂಟಿ. ನಾನ್‌ವೆಜ್ ಪ್ರಿಯರು ಟ್ರೈ ಮಾಡಲೇ ಬೇಕಾದ ಸಿಗಡಿ ಚಟ್ನಿಯ ರೆಸಿಪಿ ಇಲ್ಲಿದೆ ನೋಡಿ.

prawns chutney

ಬೇಕಾಗುವ ಪದಾರ್ಥಗಳು:
* ಎಳೆ ಹಾಗೂ ಒಣ ಸಿಗಡಿ – 1 ಕಪ್
* ತೆಂಗಿನಕಾಯಿ – 1
* ಈರುಳ್ಳಿ – 1
* ಬೆಳ್ಳುಳ್ಳಿ, ಲವಂಗ – 8 ರಿಂದ 10
* ಅರಿಶಿನ ಪುಡಿ – 4 ಟೀಸ್ಪೂನ್
* ಕೆಂಪು ಮೆಣಸಿನಕಾಯಿ – 2
* ಎಣ್ಣೆ – 2 ಟೀಸ್ಪೂನ್
* ಕರಿಬೇವಿನ ಎಲೆ

prawns chutney 1

ಮಾಡುವ ವಿಧಾನ:
* ಎಳೆಯ ಹಾಗೂ ಒಣ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ತೊಳೆದು ಒಣಗಿಸಿ.
* ಸಣ್ಣ ಉರಿಯಲ್ಲಿ 1/4 ಟೀಸ್ಪೂನ್ ಅರಿಶಿನ ಪುಡಿಯನ್ನು ತವಾದಲ್ಲಿ ಹಾಕಿ, ಒಂದೆರಡು ನಿಮಿಷಗಳ ಕಾಲ ಸುವಾಸನೆ ಬರುವವರೆಗೂ ಹುರಿಯಿರಿ.
* ಒಂದು ಪ್ಯಾನ್ ತೆಗೆದುಕೊಂಡು, 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ, ಈರುಳ್ಳಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವಿನ ಎಲೆಗಳು, 2 ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ಮೃದುವಾದ ಮೇಲೆ ಪಕ್ಕಕ್ಕೆ ಸರಿಸಿ.
* ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ 2 ಟೀಸ್ಪೂನ್ ನೀರನ್ನು ಹಾಕಿ ಒರಟಾದ ಪೇಸ್ಟ್ ಆಗುವತನಕ ರುಬ್ಬಿ.
* ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ತೆಂಗಿನ ತುರಿ ಸೇರಿಸಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಅದಕ್ಕೆ ಹುಣಸೆ ಹಣ್ಣಿನ ರಸ, ರುಬ್ಬಿದ ಮಿಶ್ರಣ, ಹಾಗೂ ಒಣಗಿಸಿದ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ. ತೇವಾಂಶ ಆರುವವರೆಗೂ ಹುರಿಯಿರಿ.

– ಇದೀಗ ಒಣ ಸಿಗಡಿ ಚಟ್ನಿ ಸಿದ್ಧವಾಗಿದ್ದು, ಬಿಸಿ ಬಿಸಿ ಗಂಜಿಯೊಂದಿಗೆ ಬಡಿಸಿ, ಸವಿಯಿರಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *