ನವದೆಹಲಿ: ವಿಹೆಚ್‍ಪಿಯ 52 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನವಣೆಯಲ್ಲಿ ವಿಷ್ಣು ಸದಾಶಿವ ಕೊಕ್ಜೆ ಅವರು ಜಯಗಳಿಸಿದ್ದಾರೆ.
273 ಮತದಾರರಲ್ಲಿ 192 ಜನರು ಮಾತ್ರ ವಿಶ್ವ ಹಿಂದೂ ಪರಿಷತ್ ಚುನಾವಣೆಯಲ್ಲಿ ವೋಟ್ ಮಾಡಿದ್ದರು. ಕೊಕ್ಜೆ 131 ಮತಗಳನ್ನು ಗಳಿಸಿದ್ರೆ ಎದುರಾಳಿ ರಾಘವ್ ರೆಡ್ಡಿ 60 ಮತಗಳನ್ನು ಪಡೆದಿದ್ದಾರೆ. 1964ರಲ್ಲಿ ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್‍ಗೆ ಮೊದಲ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿದೆ.
Advertisement
ಸದ್ಯದ ಪರಿಸ್ಥಿತಿಯಲ್ಲಿ ಪ್ರವೀಣ್ ತೊಗಡಿಯಾ ಮತ್ತು ಪ್ರಧಾನಿ ಮೋದಿ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಮೂಲಕ ಪ್ರವೀಣ್ ತೊಗಡಿಯಾರನ್ನು ಕುಗ್ಗಿಸುವ ರಣತಂತ್ರಗಳು ಅಡಗಿವೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.
Advertisement
ಕೊಕ್ಜೆ ಅವರು ಈ ಮೊದಲು ಮಧ್ಯ ಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಾಗಿ ಸೇವೆಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
Advertisement
1939, ಡಿಸೆಂಬರ್ 6 ರಂದು ಮಧ್ಯಪ್ರದೇಶದಲ್ಲಿ ಕೊಕ್ಜೆ ಅವರು ಜನಿಸಿದ್ದಾರೆ. ಇಂಧೋರ್ ನಲ್ಲಿ ಎಲ್ ಎಲ್ ಬಿ ಮುಗಿಸಿದ ಬಳಿಕ 1964 ರಲ್ಲಿ ಕಾನೂನು ಅಭ್ಯಾಸ ಶುರು ಮಾಡಿದ್ದಾರೆ. ಹಾಗಾಗಿ ಹಿಂದುತ್ವಕ್ಕೂ ಕೊಕ್ಜೆ ಅವರಿಗೂ ಏನೂ ಸಂಬಂಧ ಇಲ್ಲ ಎಂದು ಪ್ರವೀಣ್ ತೊಗಾಡಿಯ ಆರೋಪ ಮಾಡಿದ್ದಾರೆ. ಈ ವಿಜಯದ ನಂತರ ತೊಗಾಡಿಯ ಅವರು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಾರಾ ಎಂದು ನೋಡಬೇಕಿದೆ.