ಮಂಗಳೂರು: ನನ್ನ ಪತಿಯ ಕಾರ್ಯ ಮುಗಿಯುವ ಮುಂಚೆಯೇ ಹತ್ಯೆ ಮಾಡಿದ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪತಿ ತುಂಬಾ ಒಳ್ಳೆಯವರು. ಸಣ್ಣಪುಟ್ಟ ಕೋಪ ತಾಪಗಳಿತ್ತು. ಆದರೆ ಅವರಿಗೆ ಯಾರ ಮೇಲೂ ದ್ವೇಷವಿರಲಿಲ್ಲ. ಆದರೂ ಅವರನ್ನು ಹತ್ಯೆ ಮಾಡಲಾಗಿದೆ. ಅವರಿಗೆ ಆದ ರೀತಿ ಮತ್ಯಾರಿಗೂ ಆಗಬಾರದು. ಅದಕ್ಕೆ ಬೇಕಾದ ಶಿಕ್ಷೆಯನ್ನು ಕಾನೂನಿನ ಮೂಲಕ ಆಗಬೇಕು. ನನ್ನ ಪತಿಯ ಕಾರ್ಯ ಮುಗಿಯುವುದರೊಳಗೆ ಘಟನೆಗೆ ಸಂಬಂಧಿಸಿ ಕಾನೂನಿನಲ್ಲಿ ಯಾವ ಶಿಕ್ಷೆ ಇದೆಯೋ ಅದು ಆಗಬೇಕು ಎಂದರು.
Advertisement
Advertisement
ನನ್ನ ಗಂಡ ಯಾರಿಗೂ ಕೇಡು ಬಯಸುವವರಲ್ಲ. ಎಲ್ಲಾ ವರ್ಗದ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಯಾರಾದರೂ ಸಮಸ್ಯೆಯಿದೆ ಎಂದರೆ ರಾತ್ರಿಯಾದರೂ ಹೋಗುತ್ತಿದ್ದರು. ನನ್ನ ಗಂಡ ಕೊಲೆ ಮಾಡುವಷ್ಟು ಯಾವ ತಪ್ಪು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಪಂಚಭೂತಗಳಲ್ಲಿ ಲೀನ
Advertisement
Advertisement
ನನ್ನ ಮದುವೆಗೂ ಮುಂಚೆಯೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿಯೂ ಅವರು ಅನ್ಯೋನ್ಯತೆಯಿಂದ ಇದ್ದರು. ಕೊಲೆ ಮಾಡುವಷ್ಟು ಪಕ್ಷದಲ್ಲಿ ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ. ಮೊನ್ನೆ ನಡೆದ ಮುಸ್ಲಿಂ ಹತ್ಯೆಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಅವರು ಪರಿಚಯನೂ ಇಲ್ಲ. ಅವರಿಗೆ ಇವರಿಗೆ ಯಾವುದೇ ಒಡನಾಟವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ರೆ ರಾಜೀನಾಮೆ: ರೇಣುಕಾಚಾರ್ಯ