ಬೆಂಗಳೂರು: ಬಿಲ್ಲವ-ಈಡಿಗ ಸಮುದಾಯ ಬೇಸರದಲ್ಲಿ ಇದೆ. ನಮ್ಮ ಯುವಕರನ್ನು ಬಳಸಿಕೊಂಡು ಬಿಜೆಪಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರವೀಣ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಪ್ರವೀಣ್ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಇಲ್ಲದೆ ಹೋದ್ರೆ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಈಡಿಗ-ಬಿಲ್ಲವ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
Advertisement
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು. ಕೋಟಾ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್ ಭೇಟಿಯಾಗಿದ್ದೇನೆ. ಪ್ರವೀಣ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಹೆಂಡತಿಗೆ ಸರ್ಕಾರಿ ನೌಕರಿ ಸರ್ಕಾರ ನೀಡಲೇಬೇಕು ಎಂದು ಒತ್ತಾಯ ಮಾಡಿದ್ದೇನೆ. ಈಗಾಗಲೇ 21 ಜನ ನಮ್ಮ ಸಮುದಾಯದ ಯುವಕರು ಸತ್ತಿದ್ದಾರೆ. ಮಂಗಳೂರು, ಉಡುಪಿಯಲ್ಲಿ ನಮ್ಮ ಸಮುದಾಯದ 12 ಲಕ್ಷ ಜನರು ಇದ್ದಾರೆ. ಬಿಜೆಪಿ ನಮ್ಮ ಯುವಕರನ್ನು ಯೂಸ್ & ಥ್ರೋ ಮಾಡುತ್ತಿದ್ದಾರೆ. ಪೋಸ್ಟರ್ ಹಂಚೋಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಸ್ಥಾನ ಮಾನ ಕೊಡ್ತಿಲ್ಲ. ನಮ್ಮ ಹಿಂದುಳಿದ ವರ್ಗ ಯುವಕರು ಎಚ್ಚೆತ್ತು ಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕೊಲೆ ಖಂಡನೀಯ – 1 ಕೋಟಿ ರೂ. ಪರಿಹಾರ, ಪತ್ನಿಗೆ ಉದ್ಯೋಗ ಕೊಡಿ: ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹ
Advertisement
Advertisement
ಈ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕಾರ್ಖಾನೆಯಾಗಿದೆ. ಯುವಕರೇ ಪ್ರಚೋದನೆಗೆ ಜೀವನ ಕಳೆದುಕೊಳ್ಳಬೇಡಿ. ಪ್ರವೀಣ್‍ನ 16ನೇ ದಿನದ ಕಾರ್ಯ ಆಗಸ್ಟ್ 13ಕ್ಕೆ ನಡೆಯಲಿದೆ. ಪ್ರವೀಣ್‍ನ ಸಮಾಧಿಯ ಮುಂದೆ ನಾನು ನಮ್ಮ ಯುವಕರಿಗೆ ಪ್ರಮಾಣ ಮಾಡಿಸ್ತೀನಿ. ಕೋಮುಗಲಭೆ, ಸಾಮರಸ್ಯ ಹಾಳು ಮಾಡೋದಕ್ಕೆ ಹೋಗಬಾರದು ಎಂದು ಯುವಕರಿಗೆ ಶಪಥ ಮಾಡಿಸುತ್ತೇನೆ. ಆಗಸ್ಟ್ 13 ರಂದು ಗೋವಾ, ತೆಲಂಗಾಣ ಸೇರಿದಂತೆ ನಮ್ಮ ಸಮುದಾಯದ ಜನ ಇರುವ 12 ರಾಜ್ಯದಲ್ಲಿ ಪ್ರವೀಣ್‍ಗೆ ನ್ಯಾಯ ಕೇಳಿ ಹೋರಾಟ ಮಾಡ್ತೀವಿ ಎಂದಿದ್ದಾರೆ. ಇದನ್ನೂ ಓದಿ: ಮನೆ ಹಾನಿಗೆ ಒಂದು ಬಾರಿ ಮಾತ್ರ ಪರಿಹಾರ – ಷರತ್ತು ಏನು?
Advertisement
ಪರಿಹಾರ ರೂಪದಲ್ಲಿ ಕೇವಲ 25 ಲಕ್ಷ ರೂ. ಕೊಟ್ಟಿದ್ದಾರೆ. ಈಡಿಗ-ಬಿಲ್ಲವ ಸಮುದಾಯಕ್ಕೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. 7 ಜನ ಶಾಸಕರು, ಇಬ್ಬರು ಮಂತ್ರಿಗಳು ಇದ್ದಾರೆ. ಅವರು ಸಮುದಾಯಕ್ಕೆ ಏನು ಮಾಡ್ತಿಲ್ಲ. ನಾರಾಯಣಗುರು ಅಭಿವೃದ್ಧಿ ನಿಗಮ ಪ್ರಾರಂಭ ಮಾಡಿಲ್ಲ. ನಮ್ಮ ಕುಲ ಕಸುಬು ಶೇಂದಿ ಇಳಿಸೋದು ನಿಷೇಧ ಮಾಡಿದ್ದಾರೆ. ಈಡಿಗ-ಬಿಲ್ಲವ ಸಮುದಾಯ ಮುಗಿಸೋಕೆ ಈ ಸರ್ಕಾರ ಮುಂದಾಗಿದೆ. ಕೇವಲ ಒಂದು ಸ್ಥಾನ ನಮ್ಮ ಸಮುದಾಯಕ್ಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಮ್ಮವರು ಹೆಚ್ಚು ಜನ ಇದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲಿಲ್ಲ ಅಂದರೆ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸ್ತೀವಿ. ಕೋಟಾ ಶ್ರೀನಿವಾಸ್ ಪೂಜಾರಿ, ಸುನೀಲ್ ವಿರುದ್ಧವೂ ಸಮುದಾಯ ತಿರುಗಿ ಬೀಳುತ್ತದೆ. ಸಮಾಜದ ಕೆಲಸ ಮಾಡಬೇಕು. ಇಲ್ಲದೆ ಹೋದರೆ ನಿಮಗೆ ಪಾಠ ಕಲಿಸ್ತೀವಿ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಸಮುದಾಯ ಶಕ್ತಿ ತೋರಿಸುತ್ತೇವೆ ಎಂದು ಸರ್ಕಾರಕ್ಕೆ ಪ್ರಣವಾನಂದ ಸ್ವಾಮೀಜಿ ಚಾಟಿ ಬೀಸಿದ್ದಾರೆ.