ಮುಂಬೈ: ಟೀಂ ಇಂಡಿಯಾದ ವಿಜಯೋತ್ಸವದಲ್ಲಿ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ತಂಡ ಜಯಗಳಿಸಿದ ನಂತರ ವೀಲ್ ಚೇರ್‌ನಲ್ಲಿ ಪ್ರತಿಕಾ ರಾವಲ್ ಮೈದಾನಕ್ಕೆ ಆಗಮಿಸಿದರು. ಭಾರತದ ಧ್ವಜವನ್ನು ಹಿಡಿದು ಮೈದಾನಲ್ಲಿ ಉಳಿದ ಸದಸ್ಯರ ಜೊತೆ ವಿಜಯೋತ್ಸವದಲ್ಲಿ ಭಾಗಿಯಾದರು. ಇದರ ಜೊತೆ ಟೀಂ ಇಂಡಿಯಾ ಆಟಗಾರ್ತಿಯರು ಪ್ರತಿಕಾ ರಾವಲ್ ಅವರ ಜೊತೆಗೆ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡರು. ಇದನ್ನೂ ಓದಿ: ಆಡಿದ್ದು ಎರಡನೇ ಪಂದ್ಯವಾದರೂ ಭಾರತವನ್ನು ಗೆಲ್ಲಿಸಿದ ಶಫಾಲಿ!
ಒಟ್ಟು 6 ಪಂದ್ಯವಾಡಿದ ಪ್ರತಿಕಾ ರಾವಲ್ 51.33 ಸರಾಸರಿಯಲ್ಲಿ 308 ರನ್ ಹೊಡೆಯುವ ಮೂಲಕ ಭಾರತ ಟೂರ್ನಿಯಲ್ಲಿ 4ನೇ ಅತಿ ಹೆಚ್ಚು ರನ್ ಹೊಡೆದಿದ್ದಾರೆ. ಭಾರತ ಪರ ಸ್ಮೃತಿ ಮಂಧನಾ 434 ರನ್ ಹೊಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

