BollywoodCinemaLatest

ಬಾಲಿವುಡ್ ನಟ ಪ್ರತೀಕ್ ಈಗ ಗಾಂಧೀಜಿ ಪಾತ್ರಧಾರಿ

ಹಾಲಿವುಡ್ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ನಟ ಪ್ರತೀಕ್ ಗಾಂಧಿ ಇದೀಗ ಬಾಲಿವುಡ್ ಚಿತ್ರಗಳ ಮೂಲಕ ಗುರುತಿಸಿಕೊಳ್ತಿದ್ದಾರೆ. ಇತ್ತೀಚೆಗಷ್ಟೇ `ಸ್ಕ್ಯಾಮ್ 1992ʼ ವೆಬ್ ಸಿರೀಸ್ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ನಟ ಈಗ ಹೊಸ ಸಿರೀಸ್‌ನಲ್ಲಿ ಮಹತ್ಮಾ ಗಾಂಧಿಯವರ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಹಾಲಿವುಡ್, ಬಾಲಿವುಡ್, ಗುಜರಾತಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪ್ರತಿಭಾವಂತ ಕಲಾವಿದ ಪ್ರತೀಕ್ ಗಾಂಧಿ, 2020ರಲ್ಲಿ `ಸ್ಲ್ಯಾಮ್ 1992′ ಹರ್ಷದ್ ಮೆಹ್ತಾ ಎಂಬ ಪಾತ್ರದ ಮೂಲಕ ಕಮಾಲ್ ಮಾಡಿದ್ದರು. ಈಗ ಹೊಸ ಸಿರೀಸ್‌ನಲ್ಲಿ ಮಹಾತ್ಮ ಗಾಂಧಿ ಅವರ ಪಾತ್ರಕ್ಕೆ ಜೀವ ತುಂಬಲು ಸಜ್ಜಾಗಿದ್ದಾರೆ.

ಇನ್ನು ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರ ಮಹತ್ಮಾ ಗಾಂಧೀಜಿಯವರ ಕುರಿತ ಪ್ರಸಿದ್ಧ ಪುಸ್ತಕಗಳಾದ `ಗಾಂಧಿ ಬಿಫೋರ್ ಇಂಡಿಯಾ’ ಮತ್ತು `ಗಾಂಧಿ- ದಿ ಇಯರ್ಸ್ ಚೇಂಜ್ಡ್ ದ ವರ್ಲ್ಡ್’ ಎಂಬ ಪುಸ್ತಕಗಳ ಮೇಲೆ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಅಪ್ಲೌಸ್ ಎಂಟರ್‌ಟೇನ್‌ಮೆಂಟ್ಸ್ ಈ ಸಿರೀಸ್‌ನ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಅಂತಿಂಥ ಹೆಣ್ಣು ಇವಳಲ್ಲಾ ಎಂದು ಪತ್ನಿಯನ್ನು ಹೊಗಳಿದ ನವರಸ ನಾಯಕ ಜಗ್ಗೇಶ್

ಇನ್ನು ಗಾಂಧಿಜೀ ಅವರ ಆರಂಭದ ಜೀವನ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಮೊದಲಾದವುಗಳನ್ನು ಸಿರೀಸ್ ಒಳಗೊಂಡಿರಲಿದೆ. ಸಾಕಷ್ಟು ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿರೋ ನಟ ಪ್ರತೀಕ್, ಹೊಸ ವೆಬ್ ಸರಣಿಯಲ್ಲಿ ಮಹಾತ್ಮ ಗಾಂಧಿ ಅವರ ಪಾತ್ರದಲ್ಲಿ ಹೇಗೆ ಮೋಡಿ ಮಾಡ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Leave a Reply

Your email address will not be published.

Back to top button