ನಾವು ಒಳ್ಳೆ ರೀತಿಯಲ್ಲಿ ದುಡ್ಡು ಕೊಟ್ಟಿದ್ದೀವಿ, ನೀವು ನಮ್ಮನ್ನ ಚೀಪ್ ಆಗಿ ನೋಡುತ್ತಿದ್ದೀರಾ. ನೀವು ಸೆಲೆಬ್ರಿಟಿ ಅನ್ನೋದನ್ನ ಮರಿಬೇಡಿ.. ಮೋಸ ಮಾಡಿರುವವರು ಉದ್ಧಾರ ಆಗೋಲ್ಲ ಎಂದು ನಟಿ ಸಮೃದ್ಧಿ ರಾಮ್ (Samriddhi Ram) ವಿರುದ್ಧ ಪ್ರತಿಭಾ ಶೆಟ್ಟಿ (Pratibha Shetty) ಆಕ್ರೋಶ ಹೊರಹಾಕಿದ್ದಾರೆ.
ಅವತ್ತು ನೀವು ಇಎಂಐಗೆ ದುಡ್ಡಿಲ್ಲ. ಕಷ್ಟ ಅಂತಾ ಸುಳ್ಳು ಹೇಳಿದ್ರಿ. ಬ್ಯುಸಿನೆಸ್ ಚೆನ್ನಾಗಿ ರನ್ ಆಗ್ತಿಲ್ಲ ಅಂತೆಲ್ಲಾ ಹೇಳಿದ್ರಿ, ಅದೆಲ್ಲಾ ನಿಜ ಆಗ್ಲಿ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ದುಡ್ಡು ಕೊಡಿ ನಾನು ನನ್ನ ಕುಟುಂಬದ ಜೊತೆ 3 ಜನರ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ತಾಯಿ ಹಾಸಿಗೆ ಹಿಡಿದಿದ್ದಾರೆ. ಇದನ್ನೇ ದೊಡ್ಡದು ಮಾಡಬೇಡಿ ಪ್ಲೀಸ್. ತಿಂಗಳಿಗೆ 10 ಸಾವಿರ ಕೊಡಿ. ತುಂಬಾ ಜನರಿಗೆ ನೀವು ಸಹಾಯ ಮಾಡಿದ್ದೀರಿ. ನನ್ನ ಬಗ್ಗೆಯೂ ಯೋಚಿಸಿ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: `ಬೆಟ್ಟಿಂಗ್‌ನಿಂದ ನನ್ನ ಫ್ಯಾಮಿಲಿ ಕಥೆ ಹೀಗಾಯ್ತು’: ಕೊನೆಗೂ ಸತ್ಯ ಬಾಯ್ಬಿಟ್ಟ ಕಾರುಣ್ಯ ರಾಮ್?
ನನ್ನ ತಂದೆ ಸತ್ತಿದ್ದ ದಿನ ನಾನು ಸಾಲ ಕೊಟ್ಟಿದ್ದೆ. ಸಮೃದ್ಧಿ ನನ್ನ ಡಿಗ್ರಿ ಫ್ರೆಂಡ್, ಫ್ರೆಂಡ್‌ಗೆ ಉಪಯೋಗ ಆಗಲಿ ಅಂತ ಬೇರೊಬ್ಬರ ಬಳಿಯಿಂದ ಬಡ್ಡಿಗೆ ತಂದು ಸಾಲ ಕೊಡಿಸಿದ್ದೆ. ಸ್ಟುಡಿಯೋ ಮತ್ತು ಬಿಸಿನೆಸ್ ಅಂತಾ 3 ಲಕ್ಷ ರೂ. ಹಣ ಸಾಲ ಪಡೆದಿದ್ರು. 2023 ರಿಂದ ಹಣ ವಾಪಸ್ ಮಾಡಿಲ್ಲ. ಹಣ ಕೇಳಿದ್ರೆ ನನ್ನ ಗಂಡನ ಕೊಲೆ ವಿಚಾರ ಹೇಳಿ ಹೀಯಾಳಿಸ್ತಾರೆ. ಅಪ್ಪ ಇಲ್ಲ, ಗಂಡ ಇಲ್ಲ, ತಾಯಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಹಣ ಕೊಡಿ ಅಂತಾ ಗೋಗರೆದ್ರು ಕೂಡ ಕೊಟ್ಟಿಲ್ಲ.
ನಾನು ಹಣ ಕೊಟ್ಟಿರುವ ವಿಚಾರ ಕಾರುಣ್ಯಗೆ ಗೊತ್ತು. ಎರಡು ಮೂರು ಬಾರಿ ಅವರ ಮನೆಗೆ ಹೋಗಿದ್ದೆ. ಸ್ವಲ್ಪ ಸಮಯ ಕೊಡುವಂತೆ ಕಾರುಣ್ಯ (Karunya Ram) ಕೇಳಿಕೊಂಡ್ರು. ಉಪಕಾರ ಮಾಡಿದ್ರೆ ಈಗ ನನ್ನ ಮೇಲೆ ದೂರು ನೀಡಿದ್ದಾರೆ. ನನ್ನ ಸ್ನೇಹಿತರು ಸೇರಿದಂತೆ ಹಲವರಿಂದ ಸಮೃದ್ಧಿ ಹಣ ಪಡೆದಿದ್ದಾಳೆ. ಹತ್ತಿರತ್ತಿರ ಮೂರುವರೆ ಕೋಟಿ ರೂ. ಹಣ ಪಡೆದಿರಬಹುದು. ಆನ್ ಲೈನ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದಾಳೆ ಅಂತಾ ಅವರ ಅಕ್ಕನೇ ಹೇಳಿದ್ದಾರೆ.
ನಾನು ಕಷ್ಟಪಟ್ಟು ಒಳ್ಳೆ ಮನಸ್ಸಿನಿಂದ ಕೊಡಿಸಿದ್ದೆ. ನಾನು ಸಿಸಿಬಿ ಪೊಲೀಸ್ರು ಕರೆದಾಗ ದಾಖಲಾತಿ ನೀಡ್ತಿನಿ. ಕಾಸು ಕೊಟ್ಟು ಕೇಸ್ ಹಾಕಿಸಿಕೊಳ್ಳುವಂತೆ ಆಗಿದೆ ಎಂದು ಹೇಳಿದ್ದಾರೆ. ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಾ ದೂರು ನೀಡಿದ್ದರು. ಪೊಲೀಸರು ಎನ್ ಸಿ ಆರ್ ದಾಖಲಿಸಿ ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವಂತೆ ಹಿಂಬರಹ ನೀಡಿದ್ದರು. ಇದನ್ನೂ ಓದಿ: 25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್ ದೂರು

