ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ

Public TV
1 Min Read
PRATHAP SIMHA

ಮೈಸೂರು: ತನ್ವೀರ್ ಸೇಠ್ ಅವರ ಪೂರ್ವಜರು ಮೆಕ್ಕಾ ಅಥವಾ ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡು ಶಾಸಕ ತನ್ವೀರ್ ಸೇಠ್ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದು ನಮ್ಮ ತಾತನದ್ದೇ ದೇಶ. ಅವರು ಕೂಡಾ ಹಿಂದೂ ಆಗಿದ್ದರು. ಇಲ್ಲಿಗೆ ಯಾರೂ ರೋಮ್ ಅಥವಾ ಬೆಥ್ಲೆಹೇಮ್‍ನಿಂದ ಬಂದಿಲ್ಲ ಎಂದರು. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್‌ ತುಕ್ಡೆ ತುಕ್ಡೆ ಗ್ಯಾಂಗ್‌ ಲೀಡರ್‌: ನರೇಂದ್ರ ಮೋದಿ

PRATHAP SIMHA

ಸೇಠ್ ಪೂರ್ವಜನರು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಮತಾಂತರಗೊಂಡಿದ್ದಾರೆ. ತನ್ವೀರ್ ಸೇಠ್ ಈ ಎಲ್ಲಾ ವಿಚಾರವನ್ನು ಅರ್ಥಮಾಡಿಕೊಂಡು ಮಾತನಾಡಿದರೆ ಉತ್ತಮ ಎಂದು ಪ್ರತಾಪ ಸಿಂಹ ಟಾಂಗ್ ನೀಡಿದರು. ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ

ಈ ಮೊದಲು ಮಾತನಾಡಿದ್ದ ತನ್ವೀರ್ ಸೇಠ್, ಪ್ರತಾಪ್ ಸಿಂಹ ಅವರು ಮತಾಂತರ ಆಗಬಹುದು ಎಂದು ಹೇಳಿದ್ದರು.

Share This Article