ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಟ್ವಿಟ್ಟರಿನಲ್ಲಿ ಕರ್ನಾಟಕದ ಜನು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ ಎನ್ನುವ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರಿಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸದ್ದು ಮಾಡುತ್ತಿದೆ. 4-1 ಗೆಲುವು ಸಾಧಿಸಿ ಬಿಜೆಪಿಯನ್ನು ಹೊಡೆದು ಕಳುಹಿಸಿದೆ. ಕರ್ನಾಟಕದ ಜನರು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ. ಜನರ ಸಮಸ್ಯೆ ಬಗೆ ಹರಿಸುವುದರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಎಲ್ಲ ವಿಜೇತರಿಗೆ ನನ್ನ ಅಭಿನಂದನೆಗಳು ಎಂದು ಎಂದು ದಿನೇಶ್ ಗುಂಡುರಾವ್ ಟ್ವೀಟ್ ಮಾಡಿದ್ದರು.
Advertisement
Resounding win for the @INCIndia & @JanataDal_S coalition in Karnataka. 4-1 thrashing to BJP.
People have rejected the negative politics of BJP in Karnataka and the abject failure of Modi govt in addressing people’s issues.
Congrats to all the winners.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 6, 2018
Advertisement
ಈ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ರೀ-ಟ್ವೀಟ್ ಮಾಡಿ, “ಮೊದಲು ಸತ್ಯವನ್ನು ತಿಳಿದುಕೊಳ್ಳಿ. 4-1ರ ಗೆಲುವು ಅಲ್ಲ ಅದು 1-1ರ ಗೆಲುವು. ನಾವು ಬಳ್ಳಾರಿಯಲ್ಲಿ ಸೋತಿದ್ದರೂ ಶಿವಮೊಗ್ಗವನ್ನು ಉಳಿಸಿಕೊಂಡಿದ್ದೇವೆ. ನೀವು ಬಳ್ಳಾರಿಯನ್ನು ಗೆದ್ದುಕೊಂಡು ಜಮಖಂಡಿಯನ್ನು ಉಳಿಸಿಕೊಂಡಿದ್ದೀರಿ. ಜೆಡಿಎಸ್ ರಾಮನಗರ, ಮಂಡ್ಯವನ್ನು ಗೆದ್ದುಕೊಂಡರೂ ಶಿವಮೊಗ್ಗದಲ್ಲಿ ವಿಫಲವಾಗಿದೆ. ಆದರೆ ಈ ಸಂಭ್ರಮಕ್ಕೆ ಮೊದಲು ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಮರೆಯಬೇಡಿ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.
Advertisement
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಉಗ್ರಪ್ಪ, ಶಿವಮೊಗ್ಗದಲ್ಲಿ ರಾಘವೇಂದ್ರ, ಮಂಡ್ಯದಲ್ಲಿ ಶಿವರಾಮೇಗೌಡ ಜಯಗಳಿಸಿದ್ದಾರೆ. ವಿಧಾನಸಭಾ ಉಪಚುನಾವಣೆ ನಡೆದ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡ ಗೆದ್ದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv