ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ನಟಿಸಿ, ನಿರ್ದೇಶನ ಮಾಡಿರುವ ‘ನಟ ಭಯಂಕರ’ (Nata Bhayankar) ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈವರೆಗೂ ಕೇವಲ ನಟನಾಗಿ ಪ್ರೇಕ್ಷಕರ ಮುಂದೆ ನಿಂತಿದ್ದ ಪ್ರಥಮ್, ಈ ಬಾರಿ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾ (Movie) ಪೂರ್ತಿ ನಗಿಸುತ್ತಲೇ ಒಂದು ಹಾರರ್ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ನಗುವುದಕ್ಕಾಗಿ ಥಿಯೇಟರ್ ಗೆ ಬನ್ನಿ ಎಂದು ಅವರು ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ.
ಇದೊಂದು ಪಕ್ಕಾ ಹಾರರ್ ಹಾಗೂ ಥ್ರಿಲ್ಲರ್ ಮಿಶ್ರಿತ ಸಿನಿಮಾವಾಗಿದ್ದರೂ, ಭರ್ಜರಿ ಮನರಂಜನೆಯೂ ಇದೆಯಂತೆ. ನಗಿಸುವುದಕ್ಕಾಗಿ ಪ್ರಥಮ್ ಜೊತೆ ಓಂ ಪ್ರಕಾಶ್ ರಾವ್ (Om Prakash Rao), ಕುರಿ ಪ್ರತಾಪ್, ಮಜಾ ಟಾಕೀಸ್ ಪವನ್, ಬಿರಾದಾರ ಹಾಗೂ ರಾಕ್ ಲೈನ್ ಸುಧಾಕರ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸಾಯಿ ಕುಮಾರ್ (Sai Kumar) ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಾಗಿ ಇದೊಂದು ಪಕ್ಕಾ ಮನರಂಜನೆಯ ಸಿನಿಮಾ ಎನ್ನುವುದು ಪ್ರಥಮ್ ಮಾತು. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
ಪ್ರಥಮ್ ಈ ಚಿತ್ರದಲ್ಲಿ ಸಿನಿಮಾ ಕಲಾವಿದನ ಪಾತ್ರವನ್ನು ಮಾಡಿದ್ದಾರಂತೆ. ಕಲಾವಿದ ಮತ್ತು ಭಯಂಕರ ದೆವ್ವದ ನಡುವೆ ನಡೆಯುವ ರೋಚಕ ಕಥೆಯೇ ಈ ಸಿನಿಮಾವಂತೆ. ಓಂ ಪ್ರಕಾಶ್ ರಾವ್ ಈ ಸಿನಿಮಾದಲ್ಲಿ ನಿರ್ದೇಶಕನ ಪಾತ್ರವಂತೆ. ನಟ ಮತ್ತು ನಿರ್ದೇಶಕನ ನಡುವೆ ಇರುವ ಬಾಂಧವ್ಯವನ್ನೂ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಕೂಡ ನೋಡುಗರ ನಿರೀಕ್ಷೆಯನ್ನು ಹುಸಿಗೊಳಿಸಲಾರದು ಎನ್ನುತ್ತಾರೆ ಪ್ರಥಮ್.
ಈ ಸಿನಿಮಾದಲ್ಲಿ ಎರಡು ಬಗೆಯ ಕತೆಗಳಿವೆಯಂತೆ. ದೃಷ್ಟಿ ಇಲ್ಲದ ದೆವ್ವದ ನಡುವೆ ನಡೆಯುವಂತಹ ಪ್ರೇಮಕಥೆಯು ಥ್ರಿಲ್ ನೀಡಲಿದೆ ಎನ್ನುವುದು ಪ್ರಥಮ್ ಮಾತು. ಅಹಂಕಾರ ಇರುವ ಒಬ್ಬ ವ್ಯಕ್ತಿ ಮಾತು ಕೊಟ್ಟ ಮೇಲೆ ಹೇಗೆಲ್ಲ ಬದಲಾಗುತ್ತಾನೆ ಎನ್ನುವುದು ಕೂಡ ಸಿನಿಮಾದಲ್ಲಿ ಕತೆಯಾಗಿ ಬರಲಿದೆ. ಹಾರರ್ ಸಿನಿಮಾ ಇದಾದರೂ, ಮನರಂಜಿಸುವಂತಹ ಎಲ್ಲ ಅಂಶಗಳು ಚಿತ್ರದಲ್ಲಿ ಇವೆಯಂತೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k