ಮಂಗಳೂರು: ಮುಸ್ಲಿಂ ಎನ್ನುವ ಕಾರಣಕ್ಕೆ ಅನುಮಾನದಿಂದ ನೋಡಲಾಗುತ್ತಿದೆ ಎಂಬ ಸಚಿವ ಯು.ಟಿ ಖಾದರ್ ಹೇಳಿಕೆಗೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಪೇಜ್ನಲ್ಲಿ ಬರೆದುಕೊಂಡಿರುವ ಪ್ರಥಮ್, ನಿಮಗೆ ಅಷ್ಟೊಂದು ಅನುಮಾನ, ಅವಮಾನ ಆಗುತ್ತಿದ್ದರೆ ಬೇರೆ ಧರ್ಮಕ್ಕೆ ಮತಾಂತರವಾಗಿಬಿಡಿ. ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿ. ಯಾಕೆ ಪಾಪ ಕಷ್ಟಪಟ್ಟು ಮುಸ್ಲಿಂ ಆಗಿರುತ್ತೀರಾ. ಭಾರತದಲ್ಲಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರ ಆಗಬಹುದು ಎಂದು ಹೇಳಿದ್ದಾರೆ.
Advertisement
ಅಷ್ಟೇ ಅಲ್ಲದೇ ನೀವೇನಾದರೂ ಹಿಂದೂ ಧರ್ಮಕ್ಕೆ ಬರೋದಾದರೆ ಬನ್ನಿ. ಆದರೆ ನಮ್ಮ ಟರ್ಮ್ಸ್ ಆಂಡ್ ಕಂಡಿಷನ್ ಗೆ ಒಪ್ಪಬೇಕು. ನಿಮ್ಮ ಜೊತೆ ಸೆಲ್ಫಿ ತಗೊಂಡ ಆರೋಪಿಗಳಿಗೆ ಎಂಟ್ರಿ ಇಲ್ಲ. ಜೊತೆಗೆ ಮೋಸ್ಟ್ ಇಂಪಾರ್ಟೆಂಟ್, ಪೇಜಾವರ ಶ್ರೀಗಳ ಆಶೀರ್ವಾದ ತಗೆದುಕೊಂಡು, ನಡೆದಾಡುವ ದೇವರ ಪಾದಕ್ಕೆ ವಂದಿಸಿ, ನಿರ್ಮಾಲಾನಂದರಿಗೆ ಹಿತವಚನ ಕೇಳಿ ಆಮೇಲೆ ಹಿಂದೂಧರ್ಮಕ್ಕೆ ಬನ್ನಿ. ಇನ್ನು ಹಿಂದು ಧರ್ಮದಲ್ಲಿ ಯಾವ ಜಾತಿಗೆ ಸೇರಬೇಕಂಕೊಂಡಿದ್ದೀರೋ ಆ ಆಯ್ಕೆ ನಿಮಗೆ ಬಿಟ್ಟುಬಿಡ್ತೀನಿ. ಇದನ್ನೂ ಓದಿ: ಮುಸ್ಲಿಂರನ್ನು ಎಲ್ಲ ಕಡೆ ಅನುಮಾನದಿಂದ ನೋಡ್ತಾರೆ: ಯು.ಟಿ.ಖಾದರ್
Advertisement
Advertisement
ನನ್ನ ಪ್ರೀತಿಯ ದಲಿತರಾಗಿ, ನಾಯಕ, ಕುರುಬರಾದರೂ ಆಗಿ. ಫುಲ್ ಫ್ರೀಡಮ್ ಇದೆ. ನಾನು ಗ್ಯಾರಂಟಿ ಕೊಡ್ತೀನಿ. ಹಿಂದು ಧರ್ಮದಲ್ಲಿ ಯಾರೂ ನಿಮ್ಮನ್ನ ಅನುಮಾನದಿಂದ ನೋಡಲ್ಲ. ಆರಾಮಾಗಿ ಬನ್ನಿ ಖಾದರ್ ಅವ್ರೇ ಎಂದು ಪ್ರಥಮ್ ಹೇಳಿದ್ದಾರೆ.
Advertisement
ಆಮೇಲೆ ಪ್ರೀತಿಯ ಮುಸ್ಲಿಂ ಸಹೋದರರೇ ಪ್ಲಿಸ್ ನನ್ನ ಮೇಲೆ ಕೋಪ ಮಾಡ್ಕೋಬೇಡಿ. ನನ್ನ ಪ್ರೀತಿಯ ಧರ್ಮ. ಆದರ ಮೇಲೆ ಯಾರೇ ಅನುಮಾನಪಟ್ಟರೂ ನನ್ನ ಮನಸ್ಸಿಗೆ ನೋವಾಗುತ್ತೆ. ನಾನು ಹೇಳಿದ್ದು ತಪ್ಪಾ? ಒಮ್ಮೆ ಯೋಚಿಸಿ. ಯಾರೂ ಸಿಂಪತಿ ತಗೊಳೋ ಡೈಲಾಗ್, ಧರ್ಮಾಧಾರಿತವಾಗಿ ಎಮೋಷನಲಿ ಡಿರ್ಸ್ಟಬ್ ಮಾಡೋ ಮಾತು ಹೇಳಬಾರದು. ಅದಷ್ಟೇ ನನ್ನ ಕಳಕಳಿ. ನಿಮಗೆ ಇಷ್ಟವಾಗ್ಲಿಲ್ವಾ? ಉರ್ಕೊಳಿ ಎಂದು ಪ್ರಥಮ್ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಸಚಿವ ಖಾದರ್ ಧಾರವಾಡದಲ್ಲಿ ಮಾತನಾಡುತ್ತಾ, ವಿಮಾನ ನಿಲ್ದಾಣದಲ್ಲಿ ತನ್ನನ್ನು ಎರಡೆರಡು ಬಾರಿ ತಪಾಸಣೆ ಮಾಡುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ ಹೇಳಿಕೆಗೆ ಕ್ಷಮೆ ಕೋರಿದ ಸಚಿವ ಯು.ಟಿ.ಖಾದರ್