ಬೆಂಗಳೂರು: ನಿಮ್ಮಪ್ಪ, ನಮ್ಮಪ್ಪ ಎಲ್ಲಾ ತಿನ್ನೋದು ಇದೇ ರೈತರು ಬೆಳೆದ ಅನ್ನವನ್ನ. ನೀವು ಮಹದಾಯಿ ಹೋರಾಟದ ನೇತೃತ್ವ ವಹಿಸಿಕೊಳ್ಳಿ. ಇದು ನನ್ನ ಮನವಿ ಎಂದು ನಟ ನಿರ್ದೇಶಕ ಪ್ರಥಮ್, ನಟ ಪ್ರಕಾಶ್ ರೈ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಮಹದಾಯಿ ರೈತರ ಪ್ರತಿಭಟನೆಗೆ ಬೆಂಬಲಿಸಿ ಮಾತನಾಡಿದ ಪ್ರಥಮ್, ನನ್ನದು ಪಕ್ಷಾತೀತವಾದ ಹೋರಾಟ, ರೈತರ ಪರವಾದ ಹೋರಾಟವಾಗಿದೆ. ರೈತರು ನ್ಯಾಯ ಕೇಳುವುದು ಅವರ ಹಕ್ಕು, ನೀರು ಕೇಳುವುದು ಅವರ ಜವಾಬ್ದಾರಿ. ಆದರೆ ಮುಗ್ಧ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಹಚ್ಚಿದ್ದಾರೆ. ಅದು ಸ್ವಲ್ಪ ಬೇಸರವಾಗಿದೆ ಎಂದು ಹೇಳಿದ್ರು.
Advertisement
Advertisement
ಸಾಮಾಜಿಕ ವಿಚಾರದಲ್ಲಿ ನೀವು ಬೆಳಕು ಚೆಲ್ಲಿದ್ದೀರಿ. ಗೌರಿ ಲಂಕೇಶ್ ಪ್ರಕರಣದಲ್ಲೂ ಬೆಳಕು ಚೆಲ್ಲಿದ್ದೀರಿ. ನಾವು, ನೀವು, ನಮ್ಮಪ್ಪ ತಿನ್ನೋದು ರೈತರು ಬೆಳೆದ ಅನ್ನವನ್ನು. ಈ ಸಂದರ್ಭದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ನೀವು ಬಂದು ನಾಯಕತ್ವ ವಹಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
Advertisement
ನಾನು ಅವರ ಖಾಸಗಿ ವಿಚಾರ ಮಾತನಾಡುತ್ತಿಲ್ಲ. ಅವರ ಹೇಳಿಕೆಯನ್ನು ವಿರೋಧಿಸುತ್ತೇನೆ ಅಷ್ಟೇ. ನಾನು ಕಾಂಗ್ರೆಸ್-ಬಿಜೆಪಿಯ ಪರ ಅಲ್ಲ, ನಾನು ರೈತ ಪರ. ರಾಜ್ಯದಲ್ಲಿ ಎಲ್ಲರೂ ಪಕ್ಷವನ್ನು ಮರೆತು ಒಟ್ಟೂಗೂಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಪ್ರಥಮ್ ಹೇಳಿದ್ರು.
Advertisement
ಸಿನಿಮಾ ನಟರು ರೈತರ ಬೆಂಬಲಕ್ಕೆ ಬಂದಿಲ್ಲ ಎಂಬ ವಿಚಾರಕ್ಕೆ, ದರ್ಶನ್ ಕರುಕ್ಷೇತ್ರ ಸಿನಿಮಾದಲ್ಲಿ, ಸುದೀಪ್ ದಿ ವಿಲನ್ ಮತ್ತು ಬಿಗ್‍ಬಾಸ್ ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಾಹಿತಿ ಕೊಡದೇ ತಕ್ಷಣ ಬರಬೇಕು ಎಂದರೆ ಸಾಧ್ಯವಿಲ್ಲ. ಆದರೆ ಎಲ್ಲರೂ ರೈತರ ಪರ ಇದ್ದಾರೆ. ಶಿವಣ್ಣ ಟಗರು ಆಡಿಯೋ ರಿಲೀಸ್ ಮಾಡಲು ಬಳ್ಳಾರಿಯಲ್ಲಿ ಬ್ಯುಸಿ ಇದ್ದರು. ಆದರೂ ಇಡೀ ಇಂಡಸ್ಟ್ರೀಯನ್ನೇ ಉತ್ತರ ಕನ್ನಡಕ್ಕೆ ಕರೆದುಕೊಂಡು ಹೋಗಿದ್ರು. ಶಿವಣ್ಣ ನಾನು ಯಾರ ಪರನೂ ಅಲ್ಲ. ರೈತರ ಪರ, ರೈತರ ನೀರಿನ ಪರ ಅಂತಾ ಹೇಳಿದ್ದಾರೆ ಎಂದು ಪ್ರಥಮ್ ಹೇಳಿದರು.