Connect with us

ಬಿಗ್‍ಬಾಸ್‍ನಲ್ಲಿ ಗೆದ್ದ 50 ಲಕ್ಷ ರೂ. ಇನ್ನೂ ಪ್ರಥಮ್ ಕೈ ಸೇರಿಲ್ವಂತೆ!

ಬಿಗ್‍ಬಾಸ್‍ನಲ್ಲಿ ಗೆದ್ದ 50 ಲಕ್ಷ ರೂ. ಇನ್ನೂ ಪ್ರಥಮ್ ಕೈ ಸೇರಿಲ್ವಂತೆ!

ಬೆಂಗಳೂರು: ಬಿಗ್‍ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ತಾವು ಗೆದ್ದ 50 ಲಕ್ಷ ರೂ. ಹಣವನ್ನ ಸಮಾಜಮುಖಿ ಕೆಲಸಗಳಿಗಾಗಿ ಕೊಟ್ಟಿದ್ದು ನಿಮಗೆ ತಿಳಿದಿರೋ ವಿಷಯ. ಆದ್ರೆ ಪ್ರಥಮ್ ಅವರಿಗೆ ಈ ಬಹುಮಾನದ ಹಣ ಇನ್ನೂ ಕೈ ಸೇರಿಲ್ವಂತೆ.

ಬಿಗ್‍ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಇವತ್ತು ಫ್ಯಾಷನ್ ಶೋವೊಂದರಲ್ಲಿ ಸಖತ್ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದ್ರು. ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್‍ಚಂದ್ರ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ಪ್ರಥಮ್ ರೂಪದರ್ಶಿಯರ ಜೊತೆ ಹೆಜ್ಜೆ ಹಾಕಿದ್ರು. ಈ ಸಂದರ್ಭದಲ್ಲಿ ಮಾತಾಡಿದ ಪ್ರಥಮ್, ಬಿಗ್ ಬಾಸ್‍ನಲ್ಲಿ ತಾವು ಗೆದ್ದ 50 ಲಕ್ಷ ಹಣವನ್ನ ಇನ್ನೂ ಪಡೆದಿಲ್ಲ ಅಂದ್ರು.

ವಾಹಿನಿಯವರು ಬಹುಮಾನದ ಹಣ 50 ಲಕ್ಷ ರೂ. ಹಾಗೂ ನನ್ನ ಸಂಭಾವನೆ ಸೇರಿದಂತೆ ಒಟ್ಟು 56 ಲಕ್ಷ ರೂ. ಹಣ ಕೊಡೋಕೆ ರೆಡಿಯಾಗಿದ್ದಾರೆ. ಅದಕ್ಕೆಲ್ಲಾ ಕಾನೂನು ಪ್ರಕ್ರಿಯೆಗಳಿವೆ. ಹಣ ವರ್ಗಾವಣೆ ಮಾಡಲು ಪ್ಯಾನ್ ಕಾರ್ಡ್ ಇರಬೇಕು. ಆದರೆ ನಾನು ಪ್ಯಾನ್ ಕಾರ್ಡ್ ಇನ್ನೂ ಮಾಡಿಸಿಕೊಂಡಿಲ್ಲ. ಹೀಗಾಗಿ ಹಣ ವರ್ಗಾವಣೆಯಾಗಿಲ್ಲ. ಈಗ ಪ್ಯಾನ್ ಕಾರ್ಡ್‍ಗೆ ಅರ್ಜಿ ಹಾಕಿದ್ದೀನಿ. ನನ್ನ ಮುಂದಿನ ಶೂಟಿಂಗ್ ಫಾರಿನ್‍ನಲ್ಲಿದೆ. ಅದಕ್ಕೂ ಈಗ ಪಾಸ್‍ಪೋರ್ಟ್ ಮಾಡಿಸಿಕೊಳ್ತಿದ್ದೀನಿ ಅಂತಾ ಪ್ರಥಮ್ ತಿಳಿಸಿದ್ರು.

 

Advertisement
Advertisement