Connect with us

Cinema

ನಟ ಭುವನ್ ತೊಡೆ ಕಚ್ಚಿದ ಪ್ರಥಮ್- ಕೋರ್ಟ್‍ಗೆ ಒಳ್ಳೆ ಹುಡ್ಗ ಹಾಜರು

Published

on

ಬೆಂಗಳೂರು: ನಟ ಭುವನ್ ತೊಡೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ವಿನ್ನರ್ ಪ್ರಥಮ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಪ್ರಥಮ್‍ನಿಂದ ಕಚ್ಚಿಸಿಕೊಂಡ ಭುವನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಮೆಡಿಕಲ್ ರಿಪೋರ್ಟ್ ಪಡೆದ ನಂತರ ನಿರ್ಮಾಪಕರೂಂದಿಗೆ ನಿನ್ನೆ ತಲಘಟ್ಟಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಥಮ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಪೊಲೀಸರ ಕಣ್ಣುತಪ್ಪಿಸಿ ಪ್ರಥಮ್ ಎರಡನೇ ಎಸಿಜೆಎಂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅಲ್ಲದೇ ಪ್ರಥಮ್ ಪರ ವಕೀಲರು ಜಾಮೀನಿಗಾಗಿ ಅರ್ಜಿಹಾಕಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಭಾನುವಾರ ಪ್ರಥಮ್ ಪೊಲೀಸರ ಜೊತೆ ಮಾತನಾಡಿ, ಧಾರಾವಾಹಿ ಸೆಟ್ ನಲ್ಲಿ ನಡೆದ ಘಟನೆಯ ಬಗ್ಗೆ ವಿವರಣೆ ನೀಡಿದ್ದರು. ಚಿತ್ರೀಕರಣದ ವೇಳೆಯಲ್ಲಿ ಆನ್ ಶೂಟ್ ಮತ್ತೆ ಆಫ್ ಶೂಟ್‍ನಲ್ಲಿ ಸಂಜನಾ ಭುವನ್ ಜೊತೆ ಚೆನ್ನಾಗಿ ಮಾತಾನಾಡುತ್ತಿದ್ದಳು. ಆದ್ರೆ ನನ್ನ ಜೊತೆ ಆನ್ ಶೂಟ್ ಮತ್ತೆ ಆಫ್ ಶೂಟ್ ನಲ್ಲಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಕೈ ಹಿಡಿದು ಮಾತಾನಾಡುವ ದೃಶ್ಯದ ಚಿತ್ರೀಕರಣ ಇತ್ತು. ಆನ್ ಶೂಟ್ ನಲ್ಲಿ ಕೈ ಹಿಡಿದು ಮಾತನಾಡಿಸಿದ್ರು ಆಕೆ ನನ್ನನ್ನ ತಿರಸ್ಕಾರ ಮಾಡುತ್ತಿದ್ದಳು. ಮತ್ತೆ ಆಫ್ ಶೂಟ್ ನಲ್ಲಿ ಸಹ ಅದೇ ರೀತಿ ಮಾಡುತ್ತಿದ್ದಳು. ಆದ್ದರಿಂದ ಆಕೆಯನ್ನು ನಾನು ಬೈದಿದ್ದೆ. ಆಗ ಭುವನ್ ಬಂದು ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಟ್ಟು ಮಾತನಾಡು ಅಂತ ಹೇಳಿದ್ದನು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನಡೆದಿತ್ತು ಅಂತ ಫೋನ್ ಮುಖಾಂತರ ಹೇಳಿಕೆ ನೀಡಿದ್ದಾರೆ.

ಬಳಿಕ ನಾಳೆ ಪೊಲೀಸ್ ಠಾಣೆಗೆ ಹಾಜರಾಗಿ ವಿವರಣೆ ನೀಡುವುದಾಗಿ ಹೇಳಿದ್ದರು. ಅದ್ರೆ ಆನಂತರದಿಂದ ಪ್ರಥಮ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಪ್ರಥಮ್ ಹಾಗೂ ಭುವನ್ ಗಲಾಟೆಯನ್ನು ಸೆಟ್ ನಲ್ಲಿದ್ದ ಸಿಬ್ಬಂದಿ ಬಿಡಿಸಿದ್ದಾರೆ.

ಇದನ್ನೂ ಓದಿ: ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

Click to comment

Leave a Reply

Your email address will not be published. Required fields are marked *