– ದರಿದ್ರ ಕಾಂಗ್ರೆಸ್ ಮೊದಲು ತೊಲಗಲಿ
ಮೈಸೂರು: ಹಸುವಿನ ಕೆಚ್ಚಲು ಕೊಯ್ದದ್ದು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಬಲವಂತದಿಂದ ಕೆಳಗೆ ಇಳಿಸಿದರೆ ಕಾಂಗ್ರೆಸ್ ಇಬ್ಭಾಗ ಮಾಡುತ್ತಾರೆ. ಇಬ್ಭಾಗವಾದ ಕಾಂಗ್ರೆಸ್‌ಗೆ ಹಸುವಿನ ಕೆಚ್ಚಲು ಕೊಯ್ಯುವ ಸಾಬಿಯ ಚಿತ್ರವನ್ನೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ. ಪರಮೇಶ್ವರ್ ಈ ರಾಜ್ಯದ ಅಸಹಾಯಕ ಗೃಹ ಸಚಿವ. ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನ ರಕ್ಷಣೆಗೆ ನಿಂತವರ ಮೆದುಳಿನಲ್ಲಿ ಮಾನಸಿಕ ಅಸ್ವಸ್ಥತೆ ಇದೆ ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ತಲೆಎಣಿಗೆ ಅಸ್ತ್ರಕ್ಕೆ ಡಿಕೆಶಿ ಕೆಂಡಾಮಂಡಲ
ಹಲಾಲ್ ಕೋರ್ ಸಾಬರ್ ಮಾಡಿರುವ ಕೃತ್ಯ ಇದು. ಹಲಾಲ್ ಕೋರ್ ಸಾಬಿ ಹಿಂದೂಗಳ ಭಾವನೆ ಕೆರಳಿಸಲು ಮಾಡಿರುವ ಕೃತ್ಯ ಇದು. ತಾಲಿಬಾನ್ ಆಡಳಿತದ ಲಕ್ಷಣ ಇದು. ದರಿದ್ರ ಕಾಂಗ್ರೆಸ್ ಮೊದಲು ತೊಲಗಲಿ. ಹಸುವಿನ ಕೆಚ್ಚಲು ಕೊಯ್ದ ಸಾಬಾಣ್ಣ ಮಾನಸಿಕ ಅಸ್ವಸ್ತ ಅಲ್ಲ. ಒಬ್ಬ ಹಲಾಲ್ ಕೋರ್ ಸಾಬಿ. ಜಮೀರ್ ಅವರೇ ಮೂರು ಹಸು ಖರೀದಿ ಮಾಡಿ ಕೊಟ್ಟ ತಕ್ಷಣ ಎಲ್ಲಾ ಮುಗಿದು ಹೋಯ್ತಾ? ಇವರು ಮನೆಯವರನ್ನು ಕೊಚ್ಚಿ ಆಮೇಲೆ ಪರಿಹಾರ ಕೊಟ್ಟರೆ ಸುಮ್ಮನೆ ಇರುತ್ತಾರಾ? ನಂಜನಗೂಡಿನಲ್ಲಿ ಗೋಮಾಂಸ ಭಕ್ಷಕರು ಹಸು ಕದಿಯಲು ಬಂದು ಗೋವಿನ ಬಾಲ ಕಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಜಯಪುರ ಡಿಸಿಗೆ ಸಿಎಂ ಗದರಿದ ಪ್ರಕರಣ ಕುರಿತು ಮಾತನಾಡಿ, ಈ ಹಿಂದೆ ಮೈಸೂರು ಡಿಸಿ ಆಗಿದ್ದ ಶಿಖಾ ಅವರನ್ನು ಸಿದ್ದರಾಮಯ್ಯ ಶಿಷ್ಯ ಮರೀಗೌಡ ಅವಮಾನ ಮಾಡಿದ್ದರು. ಮರೀಗೌಡನಂಥವರನ್ನು ಛೂ ಬಿಟ್ಟು ಅವಮಾನ ಮಾಡ್ತಿದ್ದರು. ಈಗ ಸಿದ್ದರಾಮಯ್ಯ ಅವರೇ ಅವಮಾನ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕ ಸಮಾರಂಭ ವೇದಿಕೆ ಮೇಲೆ ಡಿಸಿ ಕುಳಿತರೆ ಸಿಎಂಗೆ ಏನಾದರೂ ಚುಚ್ಚುತ್ತಾ? ವಿಜಯಪುರ ಡಿಸಿಯ ಜಾತಿ ನೋಡಿ ಸಿದ್ದರಾಮಯ್ಯ ಟಾರ್ಗೆಟ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಪಟ್ಟಕ್ಕಾಗಿ ನಾನು ಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೆ: ಪರಮೇಶ್ವರ್
ಸಿದ್ದರಾಮಯ್ಯಗೆ ಲಿಂಗಾಯತ, ಒಕ್ಕಲಿಗ ಅಧಿಕಾರಿಗಳ ಕಂಡರೆ ಮೊದಲಿಂದ ಆಗಲ್ಲ. ಇದೇ ಕಾರಣಕ್ಕೆ ಈ ಎರಡು ಸಮುದಾಯದ ಅಧಿಕಾರಿಗಳ ಬಡ್ತಿಯನ್ನೇ ಸಿದ್ದರಾಮಯ್ಯ ತಪ್ಪಿಸಿದ್ದರು. ಸಿದ್ದರಾಮಯ್ಯಗೆ ಸದಾ ಜಾತಿಯ ಹುಳ ಕಾಡುತ್ತಿರುತ್ತದೆ. 39 ಜನ ಲಿಂಗಾಯತ ಶಾಸಕರು ಇರದಿದ್ದರೆ ಸಿದ್ದರಾಮಯ್ಯ ಸಿಎಂ ಆಗ್ತಿದ್ರಾ? ಯಾಕೆ ನಿಮಗೆ ಈ ಜಾತಿ ಮೇಲೆ ಇಷ್ಟು ಸಿಟ್ಟು. ಐಎಎಸ್ ಒಕ್ಕೂಟ ಸಿಎಂ ನಡೆಯನ್ನು ಖಂಡಿಸಬೇಕು. ಮುಖ್ಯ ಕಾರ್ಯದರ್ಶಿ ಸರ್ಕಾರದ ಬಾಲ ಬಡಿಯುವ ಕೆಲಸ ಮಾಡುವುದನ್ನು ಬಿಟ್ಟು, ಈ ಪ್ರಕರಣದಲ್ಲಿ ತಮ್ಮ ಸಹೋದ್ಯೋಗಿ ಪರ ನಿಲ್ಲಲಿ ಎಂದು ಒತ್ತಾಯಿಸಿದ್ದಾರೆ.