ಮೈಸೂರು: ಹೆರಿಟೇಜ್, ಡೂಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳುನಾಡು ಮತ್ತು ಆಂಧ್ರದಿಂದ ಬಂದ ಸೊಸೆ, ಅಳಿಯಂದಿರಾ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.
ಕೆಎಂಎಫ್‍ನಲ್ಲಿ ಅಮುಲ್ ವಿಲೀನ ಎಂಬ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಘಂಟಾ ಘೋಷವಾಗಿ ಹೇಳಿದೆ ವಿಲೀನ ಇಲ್ಲ ಅಂತಾ. ಆದರೂ ಸುಳ್ಳು, ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ (Congress), ಜೆಡಿಎಸ್ (JDS) ಸುಳ್ಳು ಆರೋಪವನ್ನೇ ಪುನರಾವರ್ತನೆ ಮಾಡುತ್ತಿವೆ. ಮೊದಲು ಹಿಂದಿ ಹೇರಿಕೆ ಅಂದರು, ಈಗ ಅಮುಲ್ ಹೇರಿಕೆ ಅಂತಾ ಸುಳ್ಳು ಹರಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಹೆರಿಟೇಜ್, ಡೂಡ್ಲ, ಆರೋಕ್ಯ ಎಂಬ ಹಾಲಿನ ಬ್ರಾಂಡ್ಗಳು ನಂದಿನಿಯ ಅಕ್ಕತಂಗಿಯರಾ? ಅಥವಾ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದ ಬಂದ ಸೊಸೆ, ಅಳಿಯಂದಿರಾ? ಇಷ್ಟು ವರ್ಷದಿಂದ ಈ ಬ್ರಾಂಡ್‍ಗಳು ಕರ್ನಾಟಕದಲ್ಲಿ ಮಾರಾಟ ಆಗುತ್ತಿಲ್ವಾ? ಬಿಜೆಪಿ ಬಂದ ಮೇಲೆ ಇವು ರಾಜ್ಯಕ್ಕೆ ಬಂದವಾ? ಕೆಎಂಎಫ್ (KMF) ಬಗ್ಗೆ ನಿಜವಾದ ಕಾಳಜಿ ಬಿಜೆಪಿಗೆ (BJP) ಇದೆ ಎಂದರು. ಇದನ್ನೂ ಓದಿ: ಹ್ಯಾಟ್ರಿಕ್ ಸಾಧನೆ ಮಾಡ್ತಾರಾ ಹೆಚ್‍ಕೆ ಪಾಟೀಲ್? – ಕಾಂಗ್ರೆಸ್ ಕೋಟೆ ಛಿದ್ರ ಮಾಡುತ್ತಾ ಬಿಜೆಪಿ?
Advertisement
Advertisement
ಕಾಂಗ್ರೆಸ್, ಜೆಡಿಎಸ್‍ನಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಯಾವ ಹಸು ಹಾಲು ಕೊಡುತ್ತಾದೋ ಅದನ್ನು ಕಡಿಯುವವರ ಪರ ಇರುವುದು ಸಿದ್ದರಾಮಯ್ಯ. ಸಿದ್ದರಾಮಯ್ಯರಿಗೆ (Siddaramaiah) ಅಧಿಕಾರ ಕೊಟ್ಟರೆ ಗೋವು ತಿನ್ನೋರೆ ಜಾಸ್ತಿ ಆಗುತ್ತಾರೆ. ಸಿದ್ದರಾಮಯ್ಯ ಅವರು ಗೋಹತ್ಯೆ ಮಾಡುವವರ ಪರ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಂದಿನಿ ಹಾಲಿಗೆ ಪ್ರೋತ್ಸಾಹ ಧನ ಕೊಟ್ಟವರು ಯಡಿಯೂರಪ್ಪ. ಸಿದ್ದರಾಮಯ್ಯಗೆ ಹಾಲು ಕೊಡುವ ಗೋವು ಬೇಕಾಗಿಲ್ಲ. ಗೋವು ತಿನ್ನುವವರ ಮತ ಬೇಕು ಅಷ್ಟೆ ಎಂದು ಗುಡುಗಿದರು. ಇದನ್ನೂ ಓದಿ: ನಾಲ್ಕು ಬಾರಿ ಗೆದ್ದರೂ ಮಂತ್ರಿಯೇ ಆಗದ ಮಹಾರಾಜ!