ಮೈಸೂರು: ಪಂಚರಾಜ್ಯಗಳ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಫೇಸ್‍ಬುಕ್ ಪೇಜಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವ ಪೋಸ್ಟ್ ಹಾಕಿದ್ದಾರೆ.
ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ಕಾರ್ಯಕರ್ತರೇ ಹಾಗೂ ಮೋದೀಜಿ ಬೆಂಬಲಿಗರೇ, ಸೋಲು ಖಂಡಿತ ಬೇಸರ ತರುತ್ತೆ. ಆದರೆ ಯಾಕಿಷ್ಟು ವಿಚಲಿತರಾಗಿದ್ದೀರಿ? ಯಾಕಿಂಥ ಭ್ರಮನಿರಸನ? ಜನರನ್ನೇ ದೂಷಿಸುವಂಥ ವೈರಾಗ್ಯದ ಮೆಸೇಜುಗಳೇಕೆ? ಈ ರೀತಿಯ defeatist ಮನಸ್ಥಿತಿ ಯಾಕೆ? 2004ರಿಂದ 2018ರವರೆಗೂ ಸತತ 15 ವರ್ಷ ಇದೇ ಮಧ್ಯಪ್ರದೇಶ, ಛತ್ತೀಸ್‍ಗಢದ ಜನರಲ್ಲವೇ ಯುಪಿಎ ಆರ್ಭಟದ ನಡುವೆಯೂ ನಮಗೆ ಅಧಿಕಾರ ನೀಡಿದ್ದು? 15 ವರ್ಷ ಒಂದೇ ಮುಖವನ್ನು ನೋಡುತ್ತಾ ಇದ್ದರೆ fatigue ಬಂದು ಸುಖಾಸುಮ್ಮನೆ ಬದಲಾವಣೆ ಬೇಕು ಅನ್ನಿಸಿಬಿಡೋ ಸಾಧ್ಯತೆ ಇರುತ್ತೆ. ಯಾಕೆ ದೂರುತ್ತಾ ಕಾಲಹರಣ ಮಾಡುತ್ತೀರಿ? ಇನ್ನು 4 ತಿಂಗಳು ಕಷ್ಟಪಡೋಣ, ಫೇಸ್ಬುಕ್- ಟ್ವಿಟ್ಟರ್-ವಾಟ್ಸಾಪ್ ಗಳ ಆಚೆಗಿನ ಜನತಾ ನ್ಯಾಯಾಲಯದ ಮುಂದೆ ಹೋಗಿ ಮಾಡಿರುವ ಕೆಲಸಗಳನ್ನ ಮನವರಿಕೆ ಮಾಡಿಕೊಡೋಣ, 2019ರಲ್ಲಿ ಮತ್ತೆ ಮೋದೀಜಿಯನ್ನ ಪ್ರಧಾನಿ ಮಾಡಿ ಖುಷಿಪಡೋಣ ಎಂದು ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.
Advertisement
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮೂರರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಮೀಜೋರಾಂ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಗೆಲ್ಲಿಸುವ ಮೂಲಕ ಅಲ್ಲಿಯ ಜನರು ರಾಷ್ಟ್ರೀಯ ಪಕ್ಷಗಳನ್ನು ದೂರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರು 2019ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸೋಣ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಖುಷಿಪಡೋಣ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv