– ಸುಗ್ರೀವಾಜ್ಞೆ ಅಡಿಯಲ್ಲಿ ಶಿಕ್ಷೆ ಆಗಬೇಕು
ಮೈಸೂರು: ಲಾಕ್‍ಡೌನ್ ವೇಳೆ ಮಾಧ್ಯಮದವರು ವೈದ್ಯರು ಮತ್ತು ಪೊಲೀಸರ ರೀತಿ ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಅಂತವರ ಮೇಲೆ ಗೌರವ ಭಾವನೆ ಇಟ್ಟುಕೊಳ್ಳುವುದು ಬಿಟ್ಟು, ದೌರ್ಜನ್ಯ ಎಸಗುವುದು ಸರಿಯಲ್ಲ. ಅವರ ಮೇಲೆಯೇ ಶ್ರೀಕಂಠೇಗೌಡರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಮಂಡ್ಯದಲ್ಲಿ ಎಂಎಲ್‍ಸಿ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಮಾಧ್ಯಮಗಳ ಪ್ರತಿನಿಧಿಗಳ ಜೊತೆ ನಡೆದುಕೊಂಡ ರೀತಿ ನಾಗರೀಕ ಸಮಾಜವೇ ಒಂದು ರೀತಿ ತಲೆ ತಗ್ಗಿಸುವಂತಾಗಿದೆ. ಇಡೀ ದೇಶದ ಜನರು ಮೋದಿ ಅವರ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಪೊಲೀಸರು ನಿರ್ವಹಿಸುತ್ತಿರುವ ಕರ್ತವ್ಯದಿಂದ ಇಡೀ ದೇಶಾದ್ಯಂತ ಲಾಕ್‍ಡೌನ್ ಯಶಸ್ವಿಯಾಗುತ್ತಿದೆ ಎಂದರು. ಇದನ್ನೂ ಓದಿ: ದುಡುಕಿ ಮಾತನಾಡಿಲ್ಲ – ಕೊರೊನಾ ಕಿರಿಕ್‍ಗೆ ಶ್ರೀಕಂಠೇಗೌಡ ಸಮರ್ಥನೆ
Advertisement
Advertisement
ಅದೇ ರೀತಿ ಕೊರೊನಾ ಬಗ್ಗೆ ಮಾಹಿತಿ ನೀಡುವಲ್ಲಿ, ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಲಾಕ್‍ಡೌನ್ ನಿಮಯ ಉಲ್ಲಂಘಿಸುವರಿಗೆ ಏನು ಶಿಕ್ಷೆ ಎಂಬುದನ್ನು ಮಾಧ್ಯಮಗಳು ಜನರಿಗೆ ತಿಳಿಸುತ್ತಿದ್ದಾರೆ. ಈ ಮೂಲಕ ಮಾಧ್ಯಮಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಬಹು ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿವೆ. ಇಂತಹ ಮಾಧ್ಯಮಗಳ ಬಗ್ಗೆ ಗೌರವ ಭಾವನೆ ಇಟ್ಟುಕೊಳ್ಳುವುದು ಬಿಟ್ಟು, ಅವರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಅವರ ಮೇಲೆಯೇ ಶ್ರೀಕಂಠೇಗೌಡರು ದರ್ಪ ಅಹಂಕಾರದಿಂದ ವರ್ತಿಸಿದ್ದಾರೆ ಎಂದು ಪ್ರತಾಪ್ ಸಿಂಹ ಖಂಡಿಸಿದರು. ಇದನ್ನೂ ಓದಿ: ಗೂಂಡಾಗಿರಿ ಮಾಡಿ ಎಂಎಲ್‍ಸಿ ಆಗಿ ಮುಂದುವರಿಯೋಕೆ ಯಾವ ಅರ್ಹತೆ ಇದೆ: ಶ್ರೀಕಂಠೇಗೌಡ ವಿರುದ್ಧ ಸುಮಲತಾ ಕಿಡಿ
Advertisement
ಇವತ್ತು ಇಡೀ ದೇಶಾದ್ಯಂತ ಆಶಾ ಕಾರ್ಯಕರ್ತೆರಿಂದ ಹಿಡಿದು ಆರೋಗ್ಯ ಅಧಿಕಾರಿಗಳವರೆಗೂ ಸೋಂಕು ಪೀಡಿತರ ಆರೋಗ್ಯ ನೋಡಿಕೊಂಡು ಅವರ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಆರ್ಶಾ ಕಾರ್ಯಕರ್ತೆಯರು, ವೈದ್ಯರು ಮತ್ತು ಪೊಲೀಸರ ವಿರುದ್ಧ ದೌರ್ಜನ್ಯ ಮಾಡಿದವರಿಗೆ ಸುಗ್ರೀವಾಜ್ಞೆ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಹೀಗಾಗಿ ಪತ್ರಕರ್ತರ ಮೇಲಿನ ದೌರ್ಜನ್ಯವನ್ನು ಸುಗ್ರೀವ್ರಾವಾಜ್ಞೆ ಅಡಿಗೆ ತರಬೇಕು. ಅವರಿಗೂ ರಕ್ಷಣೆ ಕೊಡಬೇಕು ಎಂದರು.
Advertisement
ಶ್ರೀಕಂಠೇಗೌಡ ಹಾಗೂ ಅವರ ಮಗನ ವಿರುದ್ಧ ಇದೇ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಬೇಕು. ಇಂದು ಲಾಕ್‍ಡೌನ್ ನಿಯಮದ ಬಗ್ಗೆ ಮಾಧ್ಯಮಗಳು ವರದಿ ಕೊಡುತ್ತಿದೆ. ನಾವೆಲ್ಲರೂ ಮನೆಯಲ್ಲಿದ್ದೇವೆ. ಆದರೆ ವೈದ್ಯರು, ಪೊಲೀಸರು ಮತ್ತು ಪತ್ರಕರ್ತರು ಮಾತ್ರ ಮನೆಯಲ್ಲಿರದೆ ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಅಂತವರ ಮೇಲೆ ದೌರ್ಜನ್ಯ ಮಾಡುವುದು ತಪ್ಪು. ದೌರ್ಜನ್ಯ ಮಾಡಿದವರಿಗೆ ಸುಗ್ರಿವಾಜ್ಞೆ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.