ಮೈಸೂರು: ಮುಸ್ಲಿಮರದ್ದು ವಿಶ್ವ ಭ್ರಾತೃತ್ವ ಅಲ್ಲ, ಇಸ್ಲಾಂ ಭ್ರಾತೃತ್ವ ಅಂತ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೆಯೇ ಹೇಳಿದ್ದರು. ಅವರೊಟ್ಟಿಗೆ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಲ್ಲರೂ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಕಿಲಾಫತ್ ಚಳವಳಿ ನಡೆಸುತ್ತಿದ್ದರು. ಆ ಮೂಲಕ ಖಲೀಫನ ಪರವಾಗಿ ಇದ್ದರು. ಇವರ (ಮುಸಲ್ಮಾನರು) ನಿಷ್ಠೆ ಭಾರತದ ಗಡಿಯಾಚೆಗಿದೆ ಎಂಬುದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮೊದಲೇ ತಿಳಿಯಬೇಕಿತ್ತು. ಅದನ್ನು ಅಂಬೇಡ್ಕರ್ ಒಬ್ಬರೇ ಅರಿತಿದ್ದರು. ಥಾಟ್ಸ್ ಆನ್ ಪಾಕಿಸ್ತಾನ್ (Pakistan or partition of India ಮರುಶೀರ್ಷಿಕೆಯಿಂದ ಪುಸ್ತಕ ಬಂದಿದೆ) ಪುಸ್ತಕದಲ್ಲಿ ಮುಸಲ್ಮಾನರು ಖಲೀಫನ ಪರವಾಗಿ ಹೋರಾಡುತ್ತಿದ್ದಾರಲ್ಲ. ಇವರ ಜೊತೆ ನಾವು ಒಟ್ಟಿಗೆ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯವಿಲ್ಲ ಅಂತ ಅಂಬೇಡ್ಕರರಿಗೆ ಅರ್ಥವಾಗಿತ್ತು ಎಂದು ತಿಳಿಸಿದ್ದಾರೆ.
Advertisement
Advertisement
ಅಂಬೇಡ್ಕರ್ ಅವರಿಗೆ ಹಿಂದೂಗಳ ಮನಸ್ಥಿತಿ ಗೊತ್ತಿತ್ತು. ಮಕ್ಕಳು ಹುಟ್ಟಿದ ತಕ್ಷಣ ಕುರಾನ್ ಬೈಬಲ್ ಕೊಡುತ್ತಾರೆ. ನಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಗಣಿತ, ವಿಜ್ಞಾನ, ಪುಸ್ತಕ ಕೊಡುತ್ತಾರೆ. ನಾವು ದಿನದಲ್ಲಿ 5 ದಿನ ಅಲ್ಲಾ ಒಬ್ಬನೇ ದೇವರು ಅಂತ ಹೇಳುವುದಿಲ್ಲ. ಆದರೆ ಅವರು ಅಲ್ಲಾ ಒಬ್ಬನೇ ದೇವರು ಏಸು ಒಬ್ಬನೇ ದೇವರು ಅಂತ ಬೋಧಿಸುತ್ತಾರೆ. ಇದರಿಂದ ಮಗು ಮುಂದೆ ಏನು ಕಲಿಯುತ್ತದೆ. ಎಷ್ಟೇ ವಿದ್ಯಾವಂತರಾದರೂ ಇದು ತಲೆಯಲ್ಲೇ ಇರುತ್ತದೆ. ನಮ್ಮ ಮಕ್ಕಳಿಗೆ ಈ ರೀತಿ ಹೇಳುವುದಿಲ್ಲ. ಇವರು ನಮಗೆ ಜಾತ್ಯಾತೀತೆಯ ಪಾಠ ಹೇಳುವ ಅವಶ್ಯಕತೆ ಇಲ್ಲ. ನಮ್ಮ ನಡುವಳಿಕೆಯಲ್ಲೇ ಜಾತ್ಯಾತೀತತೆ ಇದೆ. ಇದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಗೊತ್ತಿತ್ತು. ನಮ್ಮ ಧರ್ಮ ಒಬ್ಬ ವ್ಯಕ್ತಿಯ ಚಿಂತನೆಯಿಂದ ಬಂದಿರುವುದಿಲ್ಲ ಎಂದು ಹೇಳಿದ್ದಾರೆ.
Advertisement
ಬಜೆಟ್ ಬಂದರೆ ಸಾಕು ಲಾ ಪಾಸ್ ಮಾಡಿರುವವರು ಬಿಎ ಪಾಸ್ ಮಾಡಿರುವವರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯೆ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ದೇಶದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಟ್ರೈನ್‌ಗಳು ಸಂಚಲನ ಹುಟ್ಟಿಸಲಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್‍ಗಳು ಸಂಚಾರ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.
ಸಾಲ ಇಲ್ಲದ ದೇಶ ಯಾವುದಿದೆ ಹೇಳಿ?
ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ. ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅರ್ಥ ವ್ಯವಸ್ಥೆಯೇ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾ ಪಾಸ್ ಮಾಡಿರುವವರು ಬಿಎ ಪಾಸ್ ಮಾಡಿರುವವರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಸಿದ್ದರಾಮಯ್ಯ ಅವರಿಗೆ ಆರ್ಥಿಕ ವ್ಯವಸ್ಥೆಯೇ ಅರ್ಥವಾಗಲ್ಲ. ಹೀಗಾಗಿ ಅವರು ಸುಮ್ಮನೆ ಸಾಲದ ಬಜೆಟ್ ಅಂತ ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡಿಸಿದ್ದಾರೆ ಅಷ್ಟೇ. ಅವರಿಗೆ ಆರ್ಥಿಕ ವ್ಯವಸ್ಥೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ನಾವು ಸಾಲ ಮಾಡಿದ ಹಣವನ್ನು ದೇಶದ ಅಭಿವೃದ್ಧಿಗೆ ಬಳಸುತ್ತೇವೆ. ಕಾಂಗ್ರೆಸ್‍ನವರು ಸಾಲ ಮಾಡಿ ತಮ್ಮ ಖಜಾನೆ ತುಂಬಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ – ರಾಜ್ಯದಲ್ಲಿ ಏನೇನಾಗಿದೆ ಎಂಬುದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಗೋ ಹತ್ಯೆ ನಿಷೇಧ ಜಾರಿಗೆ ತಂದಿದ್ದಕ್ಕೆ ಕೋಮುವಾದಿ ಪಟ್ಟ. ಹಾಗಾದರೆ ಗೋ ಹತ್ಯೆ ವಿರೋಧಿಸಿದ ಗಾಂಧಿ ಕೋಮುವಾದಿನಾ? ನಾನು ಏಸುವನ್ನು ಒಪ್ಪುತ್ತೇನೆ. ಆದರೆ ಮಿಷನರಿಗಳು ಮಾಡುವ ಮತಾಂತರ ಒಪ್ಪುವುದಿಲ್ಲ. ಇದು ಕೇವಲ ಹಿಜಬ್ ವಿಚಾರ ಅಲ್ಲ. ಮುಸಲ್ಮಾನರು ವಿಶ್ವ ಭ್ರಾತೃತ್ವ ಅಲ್ಲ, ಇಸ್ಲಾಂ ಭ್ರಾತೃತ್ವ. ಇವರ ಜೊತೆ ಬದುಕಲು ಸಾಧ್ಯವಿಲ್ಲ ಅಂತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೂರ ದೃಷ್ಟಿಯಿಂದ ಹೇಳಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಹಿಜಬ್ ಗಲಾಟೆಯ ಹಿಂದೆ ಕೆಎಫ್‍ಡಿ, ಪಿಎಫ್‍ಐ ಇದೆ. ಶಾಂತಿ ಕದಡಬೇಡಿ ಎಂದು ಮನವಿ ಮಾಡಬೇಡಿ. ಶಾಂತಿ ಕದಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲೇಬೇಕು. ಕೇರಳದ ಮುಸ್ಲಿಂ ಸಂಘಟನೆಗಳಿಂದ ಪ್ರಭಾವಿತರಾಗಿರುವವರು ಶಾಂತಿಯ ಮನವಿಗೆ ಬಗ್ಗುವುದಿಲ್ಲ. ಮೊದಲು ಕೆಎಫ್‍ಡಿ, ಪಿಎಫ್‍ಐ ಸಂಘಟನೆ ಬಂದ್ ಮಾಡಿ. ಹಿಜಬ್, ಹಿಜಬ್ ಅಂತ ಹೋಗಿ ಮಕ್ಕಳನ್ನು ಹೇರುವ ಯಂತ್ರವಾಗಬೇಡಿ. ಹಿಜಬ್ ಬಿಟ್ಟು ಕಿತಾಬ್ ಹಿಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಹಿಜಬ್ ಅವರು ಬಿಟ್ಟು ಬಂದರೆ ಆ ಕ್ಷಣವೇ ಕೇಸರಿ ಶಾಲಿನ ಪ್ರಸ್ತಾಪವೇ ಇರುವುದಿಲ್ಲ.
ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ
ನೀಲಿ ಶಾಲು ಹಾಕುವವರೆಲ್ಲ ಥಾಟ್ಸ್ ಆನ್ ಪಾಕಿಸ್ತಾನ ಪುಸ್ತಕ ಓದಿ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಈ ದೇಶದ ಮುಸ್ಲಿಮರ ಬಗ್ಗೆ ಅಂದೇ ತಿಳಿದಿತ್ತು. ನೀಲಿ ಶಾಲು ಧರಿಸುವ ಮೊದಲು ವಾಸ್ತವ ತಿಳಿದುಕೊಳ್ಳಿ. ಅಂಬೇಡ್ಕರ್ ಅವರು ಬರೆದಿರುವ ಥಾಟ್ಸ್ ಆನ್ ಪಾಕಿಸ್ತಾನ್ ಓದಿಕೊಳ್ಳಿ. ಆ ಪುಸ್ತಕದಲ್ಲಿ ಎಲ್ಲ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದಾರೆ. ನೀಲಿ ಶಾಲು ಧರಿಸುವ ಮುನ್ನ ಓದಿಕೊಂಡರೆ ಒಳ್ಳೆಯದು ಎಂದಿದ್ದಾರೆ.