ಮೈಸೂರು: ಕರ್ನಾಟಕ ಅತಿ ದೊಡ್ಡ ಕೂಗುಮಾರಿ ಅಂದರೆ ಅದು ಸಿದ್ದರಾಮಯ್ಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ತನ್ನ ವಿರುದ್ದ ಕೂಗು ಮಾರಿ ಗಳನ್ನು ಬಿಟ್ಟಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನ ಬೆಳಗೆದ್ದು ಅರುಚುತ್ತಲೇ ಇರುತ್ತಾರೆ. ದಿನ ಮಾತನಾಡುವವರನ್ನೇ ಕೂಗುಮಾರಿ ಅಂತ ಹೇಳುವುದು. ಸಿದ್ದರಾಮಯ್ಯ ಕರ್ನಾಟಕಕ್ಕೆ ಅದು ಕೊಟ್ಟೆ, ಇದು ಕೊಟ್ಟೆ ಅಂತಾರೆ. ಅದನ್ನು ಹೇಳುವುದನ್ನು ಬಿಟ್ಟರೆ ದಿನಾ ಆರ್‍ಎಸ್‍ಎಸ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದ ಬಿಗ್ಗೆಸ್ಟ್ ಕೂಗುಮಾರಿ ಅಂದರೆ ಅದು ಸಿದ್ದರಾಮಯ್ಯ. ಸಿದ್ದರಾಮಯ್ಯ ಒಂದು ವಾರ ಸುಮ್ಮನ್ನಿದ್ದರೆ ರಾಜ್ಯ ಶಾಂತವಾಗಿ ಇರುತ್ತದೆ. ದಿನಬೆಳಗಾದರೆ ಟ್ವಿಟರ್‌ನಲ್ಲಿ ಕುಟ್ಟುವುದನ್ನು ನಿಲ್ಲಿಸಬೇಕು. ನಾವು ಇನ್ನೂ ಕಠಿಣವಾಗಿ ಮಾತಾಡಬಹುದು. ಅಸಂವಿಧಾನಿಕ ಅಂತ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿ ಬಸವಣ್ಣನ ವಿಚಾರಕ್ಕೆ ಧಕ್ಕೆ – ಪಂಡಿತಾರಾದ್ಯ ಶ್ರೀಗಳಿಂದ ಹೋರಾಟದ ಎಚ್ಚರಿಕೆ
Advertisement
Advertisement
ಆರ್ಯ ದ್ರಾವಿಡ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜವಾಹರಲಾಲ್ ನೆಹರು, ಇಂದಿರಾಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆರ್ಯನ್ನಾರಾ.. ದ್ರಾವಿಡರಾ.. ಎಂದು ಮೊದಲು ಹೇಳುವುದಕ್ಕೆ ಹೇಳಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದ ಹಾರ್ದಿಕ್ ಪಟೇಲ್ ಶೀಘ್ರವೇ ಬಿಜೆಪಿಗೆ ಸೇರ್ಪಡೆ
Advertisement
Advertisement
ಇದೇ ವೇಳೆ 8ನೇ ವಿಶ್ವ ಯೋಗ ದಿನಾಚರಣೆ ಕುರಿತಂತೆ ಮಾತನಾಡಿದ ಅವರು, ಇದು ಸಂಪೂರ್ಣ ಕೇಂದ್ರ ಸರ್ಕಾರದ ಕಾರ್ಯಕ್ರಮ. ಇದರಲ್ಲಿ ರಾಜ್ಯ ಸರ್ಕಾರದ್ದು ಪೋಷಕ ಪಾತ್ರವಷ್ಟೇ. ಇಲ್ಲಿ ನಾವು ವಿಶ್ವ ಯೋಗ ದಿನ ಆಚರಣೆ ಮಾಡುತ್ತೇವೆ. ಅದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊಡುತ್ತದೆ. ಅಲ್ಲದೇ ನಾವು ಯಾವುದೇ ಗಿನ್ನೀಸ್ ರೆಕಾರ್ಡ್‍ಗಾಗಿ ಯೋಗ ಮಾಡುತ್ತಿಲ್ಲ. ರೆಕಾರ್ಡ್ ಬೇಕಾದರೆ ಮುಂದಿನ ವರ್ಷವೂ ಮಾಡಬಹುದು. ಈ ಬಾರಿ ಅಚ್ಚುಕಟ್ಟಾಗಿ ಯೋಗ ಕಾರ್ಯಕ್ರಮ ನಡೆಸುತ್ತೇವೆ. 1 ಲಕ್ಷ, 2 ಲಕ್ಷ ಜನ ಸೇರಿಸಬೇಕು ಎಂಬ ಆಸೆ ಹಲವರಿಗೆ ಇರಬಹುದು. ಆದರೆ ಆರೋಗ್ಯಕ್ಕಾಗಿ ಯೋಗ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.