ಮೈಸೂರು: ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸುವುದು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
Advertisement
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡುವವರಿಗೂ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್‍ನವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಸುರ್ಜೆವಲಾಗೆ ಸಿದ್ದರಾಮಯ್ಯ – ಡಿಕೆಶಿ ನಡುವಿನ ಗಲಾಟೆ ಬಿಡಿಸಲು ಆಗುತ್ತಿಲ್ಲ. ಹೀಗಾಗಿ, ಸುರ್ಜೆವಲಾ ದೆಹಲಿಯಲ್ಲೇ ಕೂತು ಸುದ್ದಿಗೋಷ್ಠಿ ನಡೆಸಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ದಯವಿಟ್ಟು ಹೇಳಿ ಈ ಬಿಟ್ ಕಾಯಿನ್ ಅಂದರೇ ಏನೂ ಅಂತ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
Advertisement
Advertisement
ರಾಜಕಾರಣದಲ್ಲಿ ಕೆಲವರು ಮಾಧ್ಯಮಗಳ ಕೂಡ ಸುದ್ದಿಗಳನ್ನು ಪ್ಲಾಂಟ್ ಮಾಡಿಸುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಎಂದು ಕೆಲವರು ಸುದ್ದಿ ಪ್ಲಾಂಟ್ ಮಾಡಿಸುತ್ತಿದ್ದಾರೆ. ಕಾಲು, ಬಾಲ ಇಲ್ಲದ ಸುದ್ದಿಗಳನ್ನು ಕಾಂಗ್ರೆಸ್ ಹರಡಿಸುತ್ತಿದೆ. ಶ್ರೀಕಿಯನ್ನು ಬಂಧಿಸಿದವರ ಮೇಲೆ ಯಾಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಶ್ರೀಕಿಗೆ ವ್ಯವಹಾರ ಇರೋದು ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಮರಿ ಖರ್ಗೆ ಹಾಗಾಗ ಮಾಧ್ಯಮಗಳ ಮುಂದೆ ಬಂದು ಕಾಕಾ ಎನ್ನುತ್ತಿದ್ದಾರೆ. ದಿನವೂ ರಂಗು ರಂಗಾದ ಕಥೆಗಳನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ. ಯಾವ ಜನಧನ್ ಅಕೌಂಟ್ ಹ್ಯಾಕ್ ಆಗಿದೆ? ಯಾರ ಅಕೌಂಟ್‍ನಿಂದ ಹಣ ಕದಿಯಲಾಗಿದೆ. ಒಂದು ಫ್ರೂಪ್ ಕೊಡಿ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕೆಲವರು ಭ್ರಷ್ಟಾಚಾರ ಮಾಡಿ ಅಕೌಂಟ್‍ಗೆ ಹಾಕಿಕೊಂಡಿರಬೇಕು. ಶ್ರೀಕಿ ಇಂತಹ ಅಕೌಂಟ್‍ಗಳನ್ನು ಹ್ಯಾಕ್ ಮಾಡಿ ಹಣ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಬಾಯಿ ಬಡಿದುಕೊಳ್ಳುತ್ತಿರಬೇಕು. ಸಿದ್ದರಾಮಯ್ಯನವರದು ಉಗಿದು ಓಡಿ ಹೋಗುವ ಪ್ರವೃತಿ ಎಂದಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು
Advertisement
ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸೋದು. ಬರೀ ಉಗಿದು ಓಡಿ ಹೋಗುವ ರಾಜಕಾರಣ ಮಾಡಿ, ಬೊಮ್ಮಾಯಿ ವಿರುದ್ಧ ಬಾಹ್ಯ, ಆಂತರಿಕ ಶತೃಗಳು ಕಾಲ್ಪನಿಕ ಭ್ರಷ್ಟಾಚಾರ ಸೃಷ್ಟಿ ಮಾಡಿ ಆರೋಪ ಮಾಡಲಾಗುತ್ತಿದೆ. ಬೊಮ್ಮಾಯಿ ನೆಮ್ಮದಿಯಾಗಿ ಆಡಳಿತ ನಡೆಸಬಾರದು ಎಂಬುದು ಕೆಲವರ ಷಡ್ಯಂತ್ರ. ಸಿದ್ದರಾಮಯ್ಯ ಅವರೇ ನೀವು ಭ್ರಷ್ಟಾಚಾರ ದಲ್ಲಿ ಮಾಡಿದ ಹಣ ಕಳೆದುಕೊಂಡು ಈಗ ಸಂಕಟ ಪಡುತ್ತಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಅವರಿವರ ಹೆಸರಿನಲ್ಲಿ ಇಟ್ಟ ಹಣವನ್ನು ಶ್ರೀಕಿ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಸಂಕಟದಲ್ಲಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಭವಿಷ್ಯದ ಚಿಂತೆ ನಿಮಗೆ ಬೇಡ. ನಿಮ್ಮ, ನಿಮ್ಮ ಭವಿಷ್ಯ ನೀವು ಮೊದಲು ನೋಡಿಕೊಳ್ಳಿ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದ್ವಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ
Siddaramaiah, Pratap simha, Bit Coin, pressmeet, Mysuru