ಮೈಸೂರು: ಜಿಲ್ಲೆಯ ಹುಣಸೂರಿನ ಹನುಮ ಜಯಂತಿ ಮೆರವಣಿಗೆಗೆ ಜಿಲ್ಲಾಡಳಿತ ಹಾಕಿದ ನಿರ್ಬಂಧನೆಗಳನ್ನು ಈದ್ ಮಿಲಾದ್ ಮೆರವಣಿಗೆಗೂ ಹಾಕಬೇಕು, ಹಿಂದೂಗಳನ್ನು ಅದರಲ್ಲಿ ಬಳಸಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಇಂದು ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹನುಮಜಯಂತಿಯಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ. ಜಿಲ್ಲಾಡಳಿತ ಹನುಮ ಜಯಂತಿ ಆಚರಣೆಗೆ ವಿಧಿಸಿರುವ ನಿರ್ಬಂಧನೆಗಳನ್ನು ಮುಂದಿನ ಎಲ್ಲಾ ಆಚರಣೆ ವೇಳೆ ಪಾಲನೆ ಮಾಡುಬೇಕು ಹಾಗೂ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಯ ನೇತೃತ್ವದಲ್ಲೇ ಈದ್ ಮಿಲಾದ್ ಮೆರವಣಿಗೆ ನಡೆಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಈ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಬಂದ ಪೊಲೀಸ್ ಅಧಿಕಾರಗಳನ್ನು ತರಾಟೆ ತೆಗೆದುಕೊಂಡ ಅವರು, ನೀವೇನು ಭಿಕ್ಷೆ ನೀಡಿ ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಪೊಲೀಸ್ ಅಧಿಕಾರಿಗಳು ಸೂಚಿಸಿದ ಮಾರ್ಗದಲ್ಲೇ ಮೆರವಣಿಗೆ ತೆರಳುತ್ತಿದ್ದೇವೆ. ನಮ್ಮ ಮೇಲೆ ಅನಗತ್ಯ ಒತ್ತಡ ಹಾಕಿದರೆ ನಾನು ರಸ್ತೆಯಲ್ಲೆ ಕೂರುತ್ತೇನೆ. ಮೆರವಣಿಗೆಯಲ್ಲಿ ಗಲಾಟೆ ನಡೆಯಲು ಅವಕಾಶ ಮಾಡಿಕೊಡಬೇಡಿ. ಶಾಂತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಡಿ. ನಾವು ಮಾಡುತ್ತಿರುವುದು ಮ್ಯಾರಥಾನ್ ಅಲ್ಲ, ಸುಮ್ಮನೆ ಓಡಿಕೊಂಡು ಹೋಗಬೇಕಾಗುತ್ತಾ ಎಂದು ಪ್ರಶ್ನಿಸಿದರು.
Advertisement
ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ ಹನುಮಜಯಂತಿಯ ಮೆರವಣಿಯಲ್ಲಿ ವಿಶೇಷವಾಗಿ ತಲೆಗೆ ಕೇಸರಿ ಪೇಟ ತೊಟ್ಟು ನಂದಿಕಂಬ ಹೊತ್ತು ಕುಣಿದರು. ಪ್ರಥಮ ಸಾಲಿನಲ್ಲಿ ನಂದಿಕಂಬ ಮೆರವಣಿಗೆಯನ್ನು ಹೊತ್ತು ಹನುಮ ಭಕ್ತರು ಸಾಗಿದ್ದರು.
Advertisement
ಹನುಮ ಜಯಂತಿಗೆ ಜಿಲ್ಲಾಡಳಿತ ವಿಧಿಸಿದ್ದ ಷರತ್ತುಗಳೇನು?
* ಹನುಮ ಜಯಂತಿಯಲ್ಲಿ ರಾಜಕೀಯ ವ್ಯಕ್ತಿಗಳ ವಿಶೇಷ ವಾಹನ ಇರುವಂತಿಲ್ಲ
* ರಾಜಕೀಯ ವ್ಯಕ್ತಿಗಳು ಕೇವಲ ಹನುಮ ಭಕ್ತರಾಗಿಯೇ ಜಯಂತಿಗೆ ಬರಬೇಕು
* ಹನುಮ ಜಯಂತಿಯಲ್ಲಿ ಎಂಪಿ/ಎಂಎಲ್‍ಎ ಯಾರು ಸಹ ಭಾಷಣ ಮಾಡುವಂತಿಲ್ಲ
* ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಎಂಪಿ/ಎಂಎಲ್‍ಎ ಹೆಸರು ಹಾಕುವಂತಿಲ್ಲ
* ಹನುಮ ಜಯಂತಿಗೆ ಶುಭಾಷಯ ಕೋರಿ ರಾಜಕಾರಣಿಗಳ ಫ್ಲೆಕ್ಸ್ ಹಾಕುವಂತಿಲ್ಲ
* ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಹನುಮಜಯಂತಿ ಆಚರಣೆ.. ಹೀಗೆ ಹಲವು ಷರತ್ತು ವಿಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.
https://www.youtube.com/watch?v=ds9xy0aLXCU