ಮೈಸೂರು: ರೌಡಿಶೀಟರ್ (Rowdy Sheeter) ಬೆತ್ತನಗೆರೆ ಸೀನನ ಸಹೋದರನಾದ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ನೇತೃತ್ವದಲ್ಲಿ 2022ರ ಮೇ ತಿಂಗಳಲ್ಲಿ ಬೆತ್ತನಗೆರೆ ಶಂಕರ (Bettanagere Shankar), ನೆಲ್ಲೂರು ಶಂಕರೇಗೌಡ ಎಂದು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ. ಇದನ್ನೂ ಓದಿ: ತನ್ನಿಂದಲೇ ವಂಶ ಬೆಳೆಯಲೆಂದು ಸೊಸೆಯ ಮೇಲೆ ಕಣ್ಣಿಟ್ಟ ಮಾವನ ಕೊಲೆʼ
Advertisement
Advertisement
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯ ಜಿಲ್ಲಾ ಪಂಚಾಯತಿ ಕ್ಷೇತ್ರದ ಆಕಾಂಕ್ಷಿಯಾಗಿದ್ದನು. ಇತ್ತೀಚೆಗೆ ಸಚಿವ ಆರ್.ಅಶೋಕ್ (R Ashok), ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದಾಗಲೂ ಸ್ವಾಗತದ ಬೋರ್ಡ್ ಹಾಕಿದ್ದರು ಎಂದು ತಿಳಿದುಬಂದಿದೆ. ಇದನ್ನೂಓದಿ: ಸ್ಕ್ಯಾನಿಂಗ್ ಎಡವಟ್ಟು – ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂ. ದಂಡ
Advertisement
Advertisement
ಇತ್ತೀಚೆಗೆ 30ಕ್ಕೂ ಹೆಚ್ಚು ಕೇಸ್‌ಗಳಲ್ಲಿ ರೌಡಿಶೀಟರ್ (Rowdy Sheeter) ಆಗಿದ್ದ ಸೈಲೆಂಟ್ ಸುನೀಲ್ ಬಿಜೆಪಿ ಪ್ರಮುಖರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದರಿಂದ ಬಿಜೆಪಿ ವಿರುದ್ಧ ಪ್ರತಿ ಪಕ್ಷಗಳು ಮುಗಿಬಿದ್ದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಜೆಪಿ ನಾಯಕರು ರೌಡಿಶೀಟರ್‌ಗಳಿಗೆ ಹಾಗೂ ಸಮಾಜಘಾತುಕ ಹಿನ್ನೆಲೆಯುಳ್ಳವರಿಗೆ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ರೌಡಿಶೀಟರ್ ಹೆಸರು ಬದಲಾವಣೆ ಮಾಡಿಕೊಂಡು ಪಕ್ಷ ಸೇರಿಕೊಂಡಿರುವುದು ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಿದೆ.