ಬೆಂಗಳೂರು: ಎಸ್.ಟಿ.ಸೋಮಶೇಖರ್ (S T Somashekhar) ಅವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಟ್ಟು ಮೈಸೂರಿನಲ್ಲಿ ಮುಡಾದಿಂದ (MUDA) ನೂರಾರು ಸೈಟ್‌ಗಳನ್ನು ಪಡೆದಿರುವ ಶಾಸಕರ ಹೆಸರು ಹೇಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಸವಾಲೆಸೆದರು.
ಸಿದ್ದರಾಮಯ್ಯ (Siddaramaiah) ಮೇಲೆ ಮಾತ್ರ ತನಿಖೆ ಏಕೆ, ನೂರಾರು ಸೈಟ್ ಪಡೆದ ಮೈಸೂರಿನ (Mysuru) ಶಾಸಕರ ಮೇಲೆ ತನಿಖೆ ಯಾಕಿಲ್ಲ ಎಂದು ಎಸ್.ಟಿ.ಸೋಮಶೇಖರ್ ನಿನ್ನೆ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ 14 ಸೈಟ್ ಸಿದ್ದರಾಮಯ್ಯ ಪಡೆದಾಗ ಇದೇ ಸೋಮಶೇಖರ್ ಮೈಸೂರು ಉಸ್ತುವಾರಿ ಸಚಿವರಾಗಿದ್ದರು. ಸೋಮಶೇಖರ್ ಅವರು ಮುಡಾದಲ್ಲಿ ಎಂಎಲ್‌ಎ, ಎಂಎಲ್‌ಸಿಗಳು ನೂರಾರು ಸೈಟ್‌ಗಳನ್ನು ತೆಗೆದುಕೊಂಡಿದ್ದಾರೆ ಅಂದಿದ್ದಾರಲ್ಲಾ. ಅವರು ಯಾರೆಲ್ಲಾ ಎಂದು ಅವರಿಗೇ ಗೊತ್ತಿರಬೇಕಲ್ಲ. ಅವರ ಹೆಸರು ಹೇಳಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್ ದುಬೆ
ಸೋಮಶೇಖರ್ ಯಾರಿಗೆಲ್ಲಾ ಕೊಡಿಸಿದ್ರು ಅಂತ ಅವರಿಗೇ ಗೊತ್ತಿರುತ್ತೆ. ಸೋಮಶೇಖರ್ ಇರುವಾಗಲೇ ಸಿದ್ದರಾಮಯ್ಯಗೆ 14 ಸೈಟು ಕೊಟ್ರಲ್ಲ. ಹಾಗಾದ್ರೆ ಪ್ರಕರಣದಲ್ಲಿ ಸೋಮಶೇಖರ್ ಸಹ ಭಾಗಿಯಾಗಿದ್ರು ಅಂತ ಹೇಳೋಕ್ಕಾಗುತ್ತಾ? ಸೋಮಶೇಖರ್ ಅವರಿಗೆ ವಿಚಾರ ಗೊತ್ತಿದ್ರೆ ಇಂತಿಂಥ ಶಾಸಕರು, ಪರಿಷತ್ ಸದಸ್ಯರು ಮುಡಾ ಸೈಟ್ ಪಡೆದಿದ್ದಾರೆ ಎಂದು ಹೆಸರು ಹೇಳಲಿ. ಸೋಮಶೇಖರ್ ಅವರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜನಿವಾರ ತೆಗೆಸಿರುವುದು ಜನರ ನಂಬಿಕೆ ಮೇಲೆ ಪ್ರಹಾರ: ಪ್ರಹ್ಲಾದ್ ಜೋಶಿ
ಎಸ್.ಟಿ.ಸೋಮಶೇಖರ್ ನಮ್ಮ ಪಕ್ಷದ ಚಿಹ್ನೆಯಲ್ಲೇ ಗೆದ್ದವರು. ಅವರು ಚನ್ನಪಟ್ಟಣದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ ವೇದಿಕೆಗೆ ಹೋಗಿದ್ದರು. ರಾಜ್ಯಸಭೆ, ಎಂಎಲ್‌ಸಿ ಎಲೆಕ್ಷನ್ ನಡೆದರೆ ಕಾಂಗ್ರೆಸ್ ಕಡೆ ಕೈ ಎತ್ತುತ್ತಾರೆ. ಈ ರೀತಿ ಸೋಮಶೇಖರ್ ನೈತಿಕ ಅಧಃಪತನದತ್ತ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.