-ದೇವಸ್ಥಾನಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿ
-ದೇವಸ್ಥಾನದಲ್ಲಿ ವಿಗ್ರಹವಿದೆ ಚರ್ಚ್ ಮಸೀದಿಗಳಲ್ಲಿ ಇಲ್ಲ
ಮೈಸೂರು: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ. ಕಳ್ಳರು ಬರುವ ರೀತಿ ಬೆಳಗಿನ ಜಾವ ಬಂದು ದೇವಸ್ಥಾನ ಹೊಡೆದು ಹಾಕುತ್ತಿದ್ದಾರೆ. ಬರೀ ದೇವಸ್ಥಾನ ತೆರವು ಯಾಕೆ? ಮಸೀದಿ, ಚರ್ಚ್‍ಗಳು ಕಣ್ಣಿಗೆ ಕಾಣವುದಿಲ್ಲವೇ ಎಂದು ಜಿಲ್ಲಾಡಳಿತ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ದೇವಸ್ಥಾನವನ್ನು ಜಿಲ್ಲಾಡಳಿತ ಏಕಾಏಕಿ ಧ್ವಂಸ ಮಾಡುತ್ತದೆ. ಆದರೆ ಫುಟ್‍ಪಾತ್‍ನಲ್ಲಿ ಇರುವ ಗೋರಿ, ಚರ್ಚ್‍ಗಳು ನಿಮ್ಮ ಕಣ್ಣಿಗೆ ಕಾಣಲ್ವಾ. ಜಿಲ್ಲಾಡಳಿತ ಕಳ್ಳರು ಬಂದ ಹಾಗೆ ಬಂದು, ಬರುವ ವೇಳೆ ಕಾರ್ಯಚಾರಣೆಗೆ ಜೆಸಿಬಿ ತೆಗೆದು ಕೊಂಡು ಬರುತ್ತಾರೆ. ಕ್ಯಾತಮಾರನಹಳ್ಳಿ, ನರಸಿಂಹರಾಜ ರಸ್ತೆಗಳಲ್ಲಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ಲವೇ? ಜನವಸತಿ ಪ್ರದೇಶದಲ್ಲಿ ಎನ್.ಆರ್. ಕ್ಷೇತ್ರದಲ್ಲಿ ಅನಧಿಕೃತ ಮಸೀದಿ, ಚರ್ಚ್ ಕಟ್ಟಲು ನೀವೆ ಬಿಟ್ಟಿದ್ದಿರಿ? ಇದು ಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು
Advertisement
Advertisement
ದೇವಾಲಯಗಳಿಗೆ ಎದುರಾಗಿರೋ ಕಂಟಕ ನಿವಾರಣೆ ಮಾಡು ಎಂದು ಗಣಪತಿಯಲ್ಲಿ ಬೇಡಿದ್ದೇನೆ. ಈ ದೇವಸ್ಥಾನದ ಮೇಲೆ ಅಪರಿಮಿತಿ ನಂಬಿಕೆ ಈ ದೇವಸ್ಥಾನದ ಮೇಲಿದೆ. ವಿಶ್ವಾಸದ ಈಡುಗಂಟು ಈ ದೇವಸ್ಥಾನದಲ್ಲಿ ಜನ ಇಟ್ಟಿದ್ದಾರೆ. ದೇವಸ್ಥಾನದ ನೆಲ ಸಮ ಮಾಡಲು ಜಿಲ್ಲಾಡಳಿತ ನೋಟಿಸ್ ನೋಡಿದೆ. 1955 ರಲ್ಲಿ ದೇವಸ್ಥಾನ ಆರಂಭವಾಗಿದೆ. 90ಕ್ಕಿಂತ ಹೆಚ್ಚು ದೇವಸ್ಥಾನ ನೆಲ ಸಮ ಮಾಡಲು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಇದಕ್ಕೆ ಜನಸಾಮಾನ್ಯರಿಂದ ಪ್ರತಿರೋಧ ವ್ಯಕ್ತವಾಗಿದೆ. ಜನರ ಜೊತೆ ಚರ್ಚೆ ಮಾಡದೆ ನೆಲಸಮಮಾಡುವ ಕ್ರಮ ಸರಿಯಲ್ಲ. ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ ಎಂದು 2009ರ ಸುಪ್ರೀಂಕೋರ್ಟ್ ಆದೇಶವನ್ನು ಸಂಸದರು ಓದಿ ತಿಳಿಸದರು. 2009 ಕ್ಕಿಂತಾ ಮುಂಚೆ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಸ್ಥಳಗಳು ನಿರ್ಮಾಣವಾಗಿದ್ದರೆ ಏನೂ ಮಾಡಬೇಕು ಎಂಬುದು ಆದೇಶದಲ್ಲಿ ವಿವರಿಸಲಾಗಿದೆ. 2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಅವಕಾಶ ಕೊಟ್ಟಿಲ್ವಾ? ಎಂದು ಜಿಲ್ಲಾಡಳಿತ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ದೇವಸ್ಥಾನದಲ್ಲಿ ವಿಗ್ರಹಗಳಿವೆ ಆದರೆ ಮಸೀದಿ, ಚರ್ಚ್‍ನಲ್ಲಿ ವಿಗ್ರಗಳಿಲ್ಲ. ದೇವಸ್ಥಾನದ ಮೇಲೆ ವಿಶೇಷವಾದ ನಂಬಿಕೆ ಇದೆ ಮಸೀದಿ, ಚರ್ಚ್‍ಗಳಲ್ಲಿ ಕೇವಲ ಪ್ರಾರ್ಥನೆ ಮಾತ್ರ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಹಾಗಲ್ಲ ಭಕ್ತರು ನಂಬಿಕೆ ಇಟ್ಟಿರುತ್ತಾರೆ. ದೇವಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಇಲ್ವಾ? ಅದನ್ನು ಮಾಡಿ ಎಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಜನ ಸಾಮಾನ್ಯರ ಸಿಎಂ ಬೊಮ್ಮಾಯಿ: ಡಾ.ಕೆ ಸುಧಾಕರ್