ಬಿಗ್ ಬಾಸ್ ಮನೆಯ(Bigg Boss House) ಕಿಡಿ ಇದೀಗ ಮನೆಯ ಹೊರಗೂ ಹತ್ತಿಕೊಂಡಿದೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಜಗಳ ದೊಡ್ಡ ಮಟ್ಟ ಸ್ಪರೂಪ ಪಡೆದುಕೊಂಡಿದೆ. ರೂಪೇಶ್ ರಾಜಣ್ಣ ಜೊತೆ ಜಗಳ ಮಾಡುವಾಗ ಕನ್ನಡ ಪರ ಹೋರಾಟಗಾರರನ್ನ ಅವಹೇಳನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಸಂಬರ್ಗಿಯನ್ನು ಹೊರಗೆ ಕಳುಹಿಸಿ ಎಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.
Advertisement
ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ ಆದರೆ ಹೊರಗಿನ ವ್ಯಕ್ತಿ, ಸಂಸ್ಥೆಯ ಬಗ್ಗೆ ಸ್ಪರ್ಧಿಗಳು ಆಕ್ಷೇಪಾರ್ಹವಾಗಿ ಮಾತನಾಡಿದಾಗ ಮನೆಯ ಆಚೆಗೂ ವಿವಾದದ ಕಿಡಿ ಹೊತ್ತಿಕೊಳ್ಳುತ್ತದೆ. ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರಾಜಣ್ಣ ಅವರು ಈ ಬಾರಿಯ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಸಂಬರ್ಗಿ ಟಾರ್ಗೆಟ್ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಯಾರೂ ಕಿರಿಕ್ ಮಾಡುತ್ತಿರಲಿಲ್ಲ. ಆದರೆ ಎಲ್ಲ ಕನ್ನಡಪರ ಹೋರಾಟಗಾರರ ಕುರಿತು ಮಾತನಾಡುವಾಗ ಸಂಬರ್ಗಿ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ.
Advertisement
Advertisement
ಪ್ರಶಾಂತ್ ಸಂಬರ್ಗಿ(Prashanth Sambargi) ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹೊರಗೆ ಕಳಿಸದೇ ಇದ್ದರೆ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬಿಗ್ ಬಾಸ್ ಸಿಬ್ಬಂದಿ ಜೊತೆಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಾತನಾಡಿದ್ದಾರೆ. ಈ ಹೋರಾಟದ ಪರವಾಗಿ ಟಿ.ರಮೇಶಗೌಡ ರಾಜ್ಯಾಧ್ಯಕ್ಷರು ಕರಸೇ ಕೂಡ ಸಾಥ್ ನೀಡಿದ್ದಾರೆ. ಈ ಕುರಿತು ತಮ್ಮ ಖಾತೆಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಚಿಲ್ಲರೆ, ಮಾನಗೆಟ್ಟವನೇ ಎಂದು ರೂಪೇಶ್ ರಾಜಣ್ಣಗೆ ಸಂಬರ್ಗಿ ಕ್ಲಾಸ್
Advertisement
ಸಂಬರಗಿ ವಿರುದ್ಧ ಸಿಡಿದೆದ್ದಿರುವ ಕನ್ನಡ ಪರ ಹೋರಾಟಗಾರರು ಬಿಗ್ ಬಾಸ್ ಮನೆಯಿರುವ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂದೆ ಜಮಾಯಿಸಿದ್ದಾರೆ. ಪ್ರಶಾಂತ್ ಸಂಬರಗಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. `ಬಿಗ್ ಬಾಸ್’ ಮನೆಯಿಂದ ಪ್ರಶಾಂತ್ ಸಂಬರಗಿ ಔಟ್ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.