ಕನ್ನಡಪರ ಹೋರಾಟಗಾರರಿಗೆ ಕ್ಷಮೆ ಕೇಳಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ

Public TV
1 Min Read
FotoJet 28

ಬಿಗ್ ಬಾಸ್ (Big Boss) ಮನೆಗೆ ಹೋದಾಗಿನಿಂದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಒಂದೊಂದು ಸಾರಿ ಈ ಗುದ್ದಾಟ ಅತಿರೇಕಕ್ಕೂ ಹೋಗಿದ್ದು ಇದೆ. ಇಬ್ಬರೂ ಒಬ್ಬರಿಗೊಬ್ಬರಿಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ರೂಢಿ ಮಾಡಿಕೊಂಡಿದ್ದರು. ಹಾಗಾಗಿ ಮನೆಯಲ್ಲಿ ವೈಯಕ್ತಿಕವಾಗಿ ಜಗಳ ಆಗುತ್ತಲೇ ಇತ್ತು. ಈ ಜಗಳವು ಕನ್ನಡಪರ (Kannada) ಸಂಘಟನೆಯ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.

prashanth sambargi 1 2

ರೂಪೇಶ್ ರಾಜಣ್ಣ (Rupesh Rajanna) ಅವರ ಕನ್ನಡಪರ ಹೋರಾಟಗಳನ್ನು ಟೀಕಿಸುತ್ತಲೇ ಬಂದಿದ್ದ ಪ್ರಶಾಂತ್ ಸಂಬರ್ಗಿ (Prashant Sambargi), ಏಕಾಏಕಿ ಇತರ ಹೋರಾಟಗಾರರನ್ನು ನಿಂದಿಸಿದ್ದರು. ಯಾವ ಹೋರಾಟಗಾರರನ್ನು ಹೇಗೆ ಹತ್ತಿಕ್ಕಬೇಕು, ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ. ಎಷ್ಟೋ ಜನರನ್ನು ಮೂಲೆಗುಂಪು ಮಾಡಿದ್ದೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಸಂಬರ್ಗಿ ಅವರ ಈ ಮಾತು ಕನ್ನಡಪರ ಹೋರಾಟಗಾರರನ್ನು ಕೆರಳಿಸಿತ್ತು. ಹೀಗಾಗಿಯೇ ಅನೇಕರು ವಾಹಿನಿಯ ಮುಂದೆ ಮತ್ತು ಬಿಗ್ ಬಾಸ್ ಶೂಟಿಂಗ್ ನಡೆಯುವ ಸ್ಥಳಕ್ಕೂ ಹೋಗಿ ಪ್ರತಿಭಟನೆ ಮಾಡಿದ್ದರು. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

prashanth sambargi

ಹೋರಾಟಗಾರರ ಪ್ರತಿಭಟನೆ ತಾರಕಕ್ಕೇ ಏರುತ್ತಿದ್ದಂತೆಯೇ ವಾಹಿನಿ ಕೂಡ ಎಚ್ಚೆತ್ತುಕೊಂಡಿದೆ. ಬಿಗ್ ಬಾಸ್ ಮನೆಯಿಂದ ಸಂಬರ್ಗಿಯನ್ನು ಆಚೆ ಕರೆತರದಿದ್ದರೆ, ಅವರನ್ನು ಹೇಗೆ ಆಚೆ ಕರೆದುಕೊಂಡು ಬರಬೇಕು ಎನ್ನುವುದು ನಮಗೂ ಗೊತ್ತಿದೆ ಎಂದು ಹೋರಾಟಗಾರರು ಎಚ್ಚರಿಕೆಯನ್ನು ಕೊಟ್ಟಿದ್ದರು. ಈ ವಿಷಯವನ್ನು ಬಿಗ್ ಬಾಸ್ ಮನೆಯಲ್ಲಿರುವ ಸಂಬರ್ಗಿಗೆ ಮುಟ್ಟಿಸಲಾಗಿದೆ. ಹೀಗಾಗಿಯೇ ಸಂಬರ್ಗಿ ಕ್ಷಮೆ ಕೇಳಿದ್ದಾರೆ.

prashanth sambargi

ಬಿಗ್ ಬಾಸ್ ಕನ್ಪೆಷನ್ ರೂಂಗೆ ಸಂಬರ್ಗಿ ಕರೆಯಿಸಿಕೊಂಡು ಅಸಲಿ ವಿಚಾರವನ್ನು ಮುಂದಿಟ್ಟರು. ಅದನ್ನು ಕೇಳುತ್ತಿದ್ದಂತೆಯೇ ನಾನು ಆ ರೀತಿಯಲ್ಲಿ ಮಾತನಾಡಿಲ್ಲ, ಯಾರಿಗೂ ಅವಮಾನಿಸಿಲ್ಲ. ಹಾಗೆನಿಸಿದ್ದರೆ ಕ್ಷಮಿಸಿ ಎಂದು ಕಣ್ಣಿರಿಡುತ್ತಾ ಹೇಳಿದರು. ಆಡಿದ ಅಷ್ಟೂ ಮಾತುಗಳನ್ನು ನಾನು ಹಿಂಪಡೆಯುತ್ತೇನೆ. ಯಾವುದೇ ಕಾರಣಕ್ಕೂ ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article