ಬೆಂಗಳೂರು: ಹಲಾಲ್ ಮಾಂಸವನ್ನು ಖರೀದಿಸದಂತೆ ಹಿಂದೂ ಸಂಘಟನೆಗಳು ಅಭಿಯಾನ ಮಾಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಗೆ ಪತ್ರ ಬರೆದಿದ್ದಾರೆ.
ಬಹುಸಂಖ್ಯಾತ ಜನರು ಹಲಾಲ್ ಆಚರಣೆಯ ಅನುಯಾಯಿಗಳಲ್ಲದ ಕಾರಣ, ಇದು ಗ್ರಾಹಕರ ಹಕ್ಕುಗಳ ಉದ್ದೇಶಪೂರ್ವಕ ಉಲ್ಲಂಘನೆ ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಮಾಂಸ ಖರೀದಿಯ ಆಯ್ಕೆಯನ್ನು ಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
Advertisement
ಪತ್ರದಲ್ಲಿ ಏನಿದೆ?
ಹಲಾಲ್ ಅಥವಾ ಶರಿಯಾ ಉತ್ಪನ್ನಗಳ ಹೆಸರಿನಲ್ಲಿ ಸಾಮಾನ್ಯ ಗ್ರಾಹಕರ ಮೇಲೆ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಬಲವಂತವಾಗಿ ಹೇರುವ ಪ್ರವೃತ್ತಿಯನ್ನು ನಾವು ಗಮನಿಸುತ್ತಿರುವುದು ಆತಂಕ ಮತ್ತು ಕಾಳಜಿಯ ವಿಷಯ. ಯಾವುದೇ ಸ್ಥಳೀಯ, ರಾಜ್ಯ ಅಥವಾ ರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವನ್ನು ಹೊಂದಿರದ ‘ಹಲಾಲ್’ ಪ್ರಮಾಣೀಕರಣ ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಆಚರಣೆಯಾಗಿದೆ. ಆದಾಗ್ಯೂ, ರೆಸ್ಟೋರೆಂಟ್‌ಗಳು, ಪ್ಯಾಕ್ ಮಾಡಿದ ಆಹಾರ ಮತ್ತು ಸೌಂದರ್ಯವರ್ಧಕಗಳಲ್ಲಿಯೂ ಕೂಡ ಈ ಧಾರ್ಮಿಕ ಆಚರಣೆಯನ್ನು ಹೇರಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಅಲ್ಲಾಹ್‍ನಿಗೆ ಅರ್ಪಿಸಿದ ಕೋಳಿ ಹಿಂದೂಗಳಿಗೆ ಯಾಕೆ?, ಮುಸ್ಲಿಮರು ವರ್ತನೆ ಸರಿಮಾಡಿಕೊಳ್ಳಬೇಕು: ರಘುಪತಿ ಭಟ್
Advertisement
Advertisement
ಇದು ಧಾರ್ಮಿಕ ಪ್ರಚಾರದ ಹೊರತಾಗಿ, ಬಹುಪಾಲು ಜನಸಂಖ್ಯೆಯ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮತ್ತೆ ಹೇಳಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಮಾಂಸ ಮತ್ತು ಇತರೇ ವಸ್ತುಗಳನ್ನು ಪೂರೈಕೆದಾರರಲ್ಲಿ ಈ ಹಲಾಲಿಕರಣ ಹೆಚ್ಚುತ್ತಿದೆ. ಮಾಂಸ ಮತ್ತು ಮಾಂಸಾಹಾರಿ ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ವಿತರಿಸುವ ವೆಬ್‌ಸೈಟ್‌ಗಳು ನಿರ್ದಿಷ್ಟವಾಗಿ ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತವೆ. ಆದರೆ ಗ್ರಾಹಕರು ಧಾರ್ಮಿಕೇತರ ಉತ್ಪನ್ನಗಳು ಅಥವಾ ಸರ್ಕಾರದ ಪ್ರಮಾಣೀಕರಣವನ್ನು ಅನುಸರಿಸುವ ಉತ್ಪನ್ನಗಳನ್ನು ಸೇವಿಸುವ ಆಯ್ಕೆಯನ್ನು ನೀಡುವುದಿಲ್ಲ.
Advertisement
ಬಹುಸಂಖ್ಯಾತ ಜನರು ಹಲಾಲ್ ಆಚರಣೆಯ ಅನುಯಾಯಿಗಳಲ್ಲದ ಕಾರಣ, ಇದು ಗ್ರಾಹಕರ ಹಕ್ಕುಗಳ ಉದ್ದೇಶಪೂರ್ವಕ ಉಲ್ಲಂಘನೆ ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ. ಆನ್‌ಲೈನ್ ಮಾರಾಟಗಾರರು ಗ್ರಾಹಕ ಸಂರಕ್ಷಣಾ ಕಾಯ್ದೆಯ ಹಲವು ನಿಬಂಧನೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ. ಗ್ರಾಹಕರಿಗೆ ಇತರ ಆಯ್ಕೆಗಳಿಲ್ಲದ ಹಲಾಲ್ ಪ್ರಮಾಣೀಕರಣವು ‘unfair trade practice,'(ಅನ್‌ಫೇರ್ ಟ್ರೇಡ್ ಪ್ರ್ಯಾಕ್ಟೀಸ್) ಮತ್ತು ‘ಸೇವೆಯ ಕೊರತೆ’ ಎಂದು ನಾನು ನಿಮ್ಮ ಗಮನಸೆಳೆಯಲು ಬಯಸುತ್ತೇನೆ. ಇದನ್ನೂ ಓದಿ: ಅಕ್ರಮ ವೇಶ್ಯಾವಾಟಿಕೆಗೆ ಕುಮ್ಮಕ್ಕು – ಸಿಪಿಐ ಉದಯರವಿ ವಿರುದ್ಧ ಗೃಹ ಸಚಿವರಿಗೆ ದೂರು
ಆದ್ದರಿಂದ ವೆಬ್‌ಸೈಟ್‌ಗಳಲ್ಲಿ ಹಲಾಲ್ ಅಲ್ಲದ ಮಾಂಸ/ಉತ್ಪನ್ನಗಳ ಪ್ರತ್ಯೇಕ ಆಯ್ಕೆಯನ್ನು ಹೊಂದಲು ಕಟ್ಟುನಿಟ್ಟಾದ ಆದೇಶಗಳನ್ನು ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಬೆಂಗಳೂರಿನಲ್ಲಿ ಹಲಾಲ್ ಅಲ್ಲದ ಉತ್ಪನ್ನಗಳನ್ನು ಹೊಂದಿರದ ವೆಬ್‌ಸೈಟ್‌ಗಳ ಭಾಗಶಃ ಪಟ್ಟಿ ಇಲ್ಲಿದೆ. Freshtohome.com, Licious.in, Zappfresh.com, Bigbasket.com, TenderCuts.com, hibachi.com
ನೀವು ಈ ಸಮಸ್ಯೆಯನ್ನು ಪರಿಹರಿಸುತ್ತೀರಿ ಮತ್ತು ಬಹುಸಂಖ್ಯಾತ ಹಿಂದೂ ನಾಗರಿಕರಿಗೆ ಸಹಾಯ ಮಾಡುತ್ತೀರಿ ಮತ್ತು ಆನ್‌ಲೈನ್‌ನಲ್ಲಿ ಮಾಂಸ ಖರೀದಿಯ ಆಯ್ಕೆಯನ್ನು ಹೊಂದಲು ಅವರಿಗೆ ಸಹಾಯ ಮಾಡುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ.