‘ಇವತ್ತು ನಾನು ಕೆಜಿಎಫ್ 2 ಸಿನಿಮಾದ ಮುಖವಾಣಿ ಆಗಿರಬಹುದು. ಆದರೆ, ಅದರ ಹಿಂದೆ ಅದ್ಭುತವಾದ ತಂಡದ ಶ್ರಮವಿದೆ. ಅದರಲ್ಲೂ ನಮ್ಮ ನಿರ್ದೇಶಕ ಪ್ರಶಾಂತ್ ನೀಲ್ ನಮ್ಮ ಕರ್ನಾಟಕದ ಹೆಮ್ಮೆ ಮತ್ತು ಆಸ್ತಿ’ ಎಂದಿದ್ದಾರೆ ನಟ ಯಶ್. ಪಬ್ಲಿಕ್ ಟಿವಿ ಎಕ್ಸಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ತಂಡದ ಪರಿಶ್ರಮದ ಕುರಿತು ವಿವರವನ್ನು ಹಂಚಿಕೊಂಡರು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
‘ಕರ್ನಾಟಕದಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆಯಿಲ್ಲ. ಒಂದು ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ನಿಲ್ಲಿಸುವುದು ಕಷ್ಟವಲ್ಲ ಎನ್ನುವುದನ್ನು ನಮ್ಮ ಆ ಟೀಮ್ ತೋರಿಸಿದೆ. ಪ್ರಶಾಂತ್ ನೀಲ್ ಊಟ ತಿಂಡಿ ಬಿಟ್ಟು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಸಿನಿಮಾಟೋಗ್ರಾಫರ್ ಭುವನ್ ಮೈ ಜುಮ್ ಎನ್ನುವಂತ ವಿಷ್ಯುವಲ್ ಕಟ್ಟಿಕೊಟ್ಟಿದ್ದಾರೆ. ಮೂಲ ಬೇರಿಗೆ ಹೋಗಿ ಸ್ಟುಡಿಯೋ ಮಾಡಿರುವ ರವಿ ಬಸ್ರೂರು ಶ್ರಮ ದೊಡ್ಡದಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರು ಅಷ್ಟು ದೊಡ್ಡ ಮಟ್ಟಕ್ಕೆ ಸಿನಿಮಾ ತಗೆದುಕೊಂಡು ಹೋಗಿದ್ದಾರೆ. ಈ ಶ್ರಮವೇ ಕೆಜಿಎಫ್ 2 ಆಗಿದೆ’ ಎಂದಿದ್ದಾರೆ ಯಶ್. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್
ಪ್ರಶಾಂತ್ ನೀಲ್ ಮತ್ತು ತಂಡವು ಕೆಜಿಎಫ್ ಚಿತ್ರಕ್ಕಾಗಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದೆ. ಇವತ್ತು ಕನ್ನಡ ಸಿನಿಮಾ ರಂಗವನ್ನು ಭಾರತೀಯ ಸಿನಿಮಾ ರಂಗವನ್ನಾಗಿ ಬದಲಾಯಿಸಿದೆ. ವಿಶ್ವದಾದ್ಯಂತ ಕನ್ನಡ ಸಿನಿಮಾದ ಹವಾ ಕ್ರಿಯೇಟ್ ಆಗಿದೆ. ಇದಕ್ಕೆಲ್ಲ ಕಾರಣ ಕಜಿಎಫ್ ಚಿತ್ರತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾವೊಂದು ಹತ್ತಾರು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಕೂಡ ಹೆಮ್ಮೆಯ ಸಂಗತಿ ಆಗಿದೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ಏಪ್ರಿಲ್ 14 ರಂದು ವಿಶ್ವದ್ಯಾಂತ ಎಂಟು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿದೆ. ಹಲವು ಕಡೆ ವಾರಪೂರ್ತಿ ಟಿಕೆಟ್ ಮಾರಾಟವಾಗಿದೆ. ಅಲ್ಲದೇ, ವಿದೇಶಗಳಲ್ಲೂ ಕೂಡ ದಾಖಲೆಯ ರೀತಿಯಲ್ಲಿ ಮುಂಗಡ ಬುಕ್ಕಿಂಗ್ ಆಗುತ್ತಿರುವುದು ಕನ್ನಡ ಸಿನಿಮಾಗಳಿಗೆ ಮತ್ತಷ್ಟು ಬಲ ಬಂದಿದೆ.