CinemaKarnatakaLatestMain PostSandalwoodSouth cinema

ಸಲಾರ್ ಸಿನಿಮಾದಲ್ಲಿ ‘ಕಾಂತಾರ’ ನಟನಿಗೆ ಅವಕಾಶ ನೀಡಿದ ಪ್ರಶಾಂತ್ ನೀಲ್

ತೆಲುಗಿನ ಸಲಾರ್ ಸಿನಿಮಾದಲ್ಲಿ ನಟಿಸುವಂತಹ ಅವಕಾಶವನ್ನು ಮೊನ್ನೆಯಷ್ಟೇ ಪ್ರಮೋದ್ ಪಡೆದುಕೊಂಡಿರುವ ಸುದ್ದಿಯನ್ನು ಓದಿದ್ದೀರಿ. ಇದೀಗ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಕಾಂತಾರ ಸಿನಿಮಾದಲ್ಲಿ ನಟಿಸಿರುವ ನಟರೊಬ್ಬರಿಗೆ ಇದೇ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಾರಂತೆ ನಿರ್ದೇಶಕ ಪ್ರಶಾಂತ್ ನೀಲ್. ಅವರು ಇನ್ನೂ ಚಿತ್ರೀಕರಣದಲ್ಲಿ ಭಾಗಿ ಆಗಿಲ್ಲವಾದರೂ, ಸದ್ಯದಲ್ಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರಂತೆ.

ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂಡೇಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೂ ಮುನ್ನ ಪ್ರಶಾಂತ್ ನೀಲ್ ಅವರೇ ಬರೆದ ಬಘೀರ್ ಸಿನಿಮಾದಲ್ಲೂ ಬೊಂಡೇಲ್ ನಟಿಸಿದ್ದಾರಂತೆ. ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಂಡು, ಸಲಾರ್ ಶೂಟಿಂಗ್ ಗೆ ಹೊರಡಲು ರೆಡಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದನ್ನೂ ಓದಿ:400 ಕೋಟಿ ಕ್ಲಬ್ ಸೇರಿ ದಾಖಲೆ ಬರೆದ ‘ಕಾಂತಾರ’ ಸಿನಿಮಾ

ಐವತ್ತು ದಿನಗಳನ್ನು ಪೂರೈಸಿ, ಯಶಸ್ಸಿಯಾಗಿ ಮುನ್ನುಗ್ಗುತ್ತಿರುವ ‘ಕಾಂತಾರ’ ಸಿನಿಮಾ ಈವರೆಗೂ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕವೊಂದರಲ್ಲೇ 170 ಕೋಟಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ ಎಂದು ಹೇಳಲಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ವಿದೇಶದಿಂದ ಬಂದ ಹಣವನ್ನು ಒಟ್ಟಾಗಿಸಿದರೆ ಸಿನಿಮಾದ ಒಟ್ಟು ಗಳಿಕೆ 400 ಕೋಟಿ ಎಂದು ಅಂದಾಜಿಸಲಾಗಿದೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾ ಈ ಪ್ರಮಾಣದಲ್ಲಿ ಗಳಿಕೆ ಮಾಡಿದ್ದು ಒಂದು ರೀತಿಯಲ್ಲಿ ದಾಖಲೆ ಎಂದೇ ಬಣ್ಣಿಸಲಾಗುತ್ತಿದೆ.

Live Tv

Leave a Reply

Your email address will not be published. Required fields are marked *

Back to top button