ಬಿಹಾರ ಸುಧಾರಣೆಗೆ 3,000 ಕಿ.ಮೀ. ಪಾದಯಾತ್ರೆ: ಪ್ರಶಾಂತ್‌ ಕಿಶೋರ್‌ ಘೋಷಣೆ

Public TV
1 Min Read
prashanth kishore 1

ನಹವದೆಹಲಿ: ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರು, ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತವರು ಬಿಹಾರ್‌ಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಅಕ್ಟೋಬರ್‌ 2ರಿಂದ 3,000 ಕಿ.ಮೀ.ವರೆಗೆ ಪಾದಯಾತ್ರೆ ಆರಂಭಿಸಲಿದ್ದೇನೆ. ಬಿಹಾರ್‌ನ ಹಲವು ಭಾಗಗಳಲ್ಲಿ ಪಾದಯಾತ್ರೆ ನಡೆಸಲಿದ್ದು, ಕಚೇರಿಗಳು ಹಾಗೂ ಮನೆಗಳಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಸಮಸ್ಯೆ ಆಲಿಸಲಿದ್ದೇನೆ ಎಂದು ಪ್ರಶಾಂತ್‌ ಕಿಶೋರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಉಸ್ಮಾನಿಯಾ ವಿವಿಯಲ್ಲಿ ರಾಹುಲ್ ಸಂವಾದಕ್ಕೆ ಬ್ರೇಕ್ – ಹೈಕೋರ್ಟ್‍ನಿಂದ ಅರ್ಜಿ ವಜಾ

prashanth kishore 8

ನಾನು ಶೂನ್ಯದಿಂದ ಪ್ರಾರಂಭಿಸಲು ಬಯಸುತ್ತೇನೆ. ನಾನು ಮುಂದಿನ ಮೂರು-ನಾಲ್ಕು ವರ್ಷಗಳನ್ನು ಜನ್-ಸೂರಜ್ (ಸಾರ್ವಜನಿಕ ಉತ್ತಮ ಆಡಳಿತ) ಕಲ್ಪನೆಯೊಂದಿಗೆ ಜನರನ್ನು ತಲುಪುತ್ತೇನೆ ಎಂದು ಹೇಳಿದ್ದಾರೆ.

ನಾನು ಯಾವುದೇ ರಾಜಕೀಯ ಪಕ್ಷವನ್ನು ಘೋಷಿಸಲು ಬಯಸುವುದಿಲ್ಲ. ಬಿಹಾರದಲ್ಲಿ ಸುಧಾರಣೆ ಬಯಸುವ ಎಲ್ಲರನ್ನೂ ಒಟ್ಟುಗೂಡಿಸಲು ನಾನು ಉದ್ದೇಶಿಸಿದ್ದೇನೆ. ಒಂದು ವೇಳೆ ಭವಿಷ್ಯದಲ್ಲಿ ರಾಜಕೀಯ ಪಕ್ಷ ಮಾಡಲು ನಿರ್ಧರಿಸಿದರೆ ಅದು ಪ್ರಶಾಂತ್‌ ಕಿಶೋರ್‌ ಪಕ್ಷವಾಗಿರುವುದಿಲ್ಲ ಬದಲಿಗೆ ಜನರ ಪಕ್ಷವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಮಮತಾ ಬ್ಯಾನರ್ಜಿ ಏಜೆಂಟ್‌, ಇಲ್ಲಿಂದ ತೊಲಗಿ: ಚಿದಂಬರಂ ವಿರುದ್ಧ ಕಾಂಗ್ರೆಸ್‌ ಮುಖಂಡರು, ವಕೀಲರ ಆಕ್ರೋಶ

prashanth kishore 6

ಪಕ್ಷವನ್ನು ಸೇರಿ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಾಂಗ್ರೆಸ್ ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿರುವುದಾಗಿ ಪ್ರಶಾಂತ್‌ ಕಿಶೋರ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *