ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ `ಒಂದು ರಾಷ್ಟ್ರ, ಒಂದು ಚುನಾವಣೆ’ (One Nation One Election) ಪರಿಕಲ್ಪನೆಗೆ ಐಎನ್‌ಡಿಐಎ (INDIA) ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಡುವೆ ಚುನಾವಣಾ ಚಾಣಕ್ಯ, ರಾಜಕೀಯ ತಂತ್ರಗಾರ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ (Prashant Kishor) ಈ ಪರಿಕಲ್ಪನೆಯ ಉದ್ದೇಶ ಒಳ್ಳೆಯದಾಗಿದ್ದರೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
#WATCH | On ‘One Nation, One Election’, Prashant Kishor says, “If this is done with the correct intentions and there be a transition phase of 4-5 years, then it is in the interest of the country. This was once in effect in the country for 17-18 years. Secondly, in a country as… pic.twitter.com/beTAZqf0Gl
— ANI (@ANI) September 4, 2023
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಈ ಹಿಂದೆಯೂ ಇಂತಹ ಚುನಾವಣಾ ಪದ್ಧತಿ ದೇಶದಲ್ಲಿ ಜಾರಿಯಲ್ಲಿತ್ತು. ಏಕಕಾಲದಲ್ಲಿ ಚುನಾವಣೆ ನಡೆದರೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಜೊತೆಗೆ 5 ವರ್ಷದ ಅಧಿಕಾರವಧಿಯಲ್ಲಿ ಸರ್ಕಾರ ಪದೇ-ಪದೇ ಚುನಾವಣೆಗಳನ್ನ (Elections) ಎದುರಿಸುವ ಗೋಜಲು ತಪ್ಪಿಸಬಹುದು ಎಂದು ಸಲಹೆ ಕೊಟ್ಟಿದ್ದಾರೆ.
Advertisement
Advertisement
ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆ ಭಾರತದಂತಹ ದೊಡ್ಡ ದೇಶದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಎಂಬುದನ್ನ ಗಮನಿಸಬೇಕು. ಏಕೆಂದರೆ ದೇಶದಲ್ಲಿ ಪ್ರತಿ ವರ್ಷ 25% ಜನರು ಚುನಾವಣೆಯಲ್ಲಿ ಮತದಾನ ಮಾಡುತ್ತಲೇ ಇರುತ್ತಾರೆ. ಸರ್ಕಾರಗಳು ಕೂಡ 5 ವರ್ಷದಲ್ಲಿ ಹಲವು ಬಾರಿ ಚುನಾವಣೆಗಳನ್ನ ಎದುರಿಸುತ್ತವೆ. ಇದರ ಬದಲಿಗೆ 1 ಅಥವಾ 2 ಬಾರಿ ಚುನಾವಣೆ ನಡೆಸಿದರೆ ಉತ್ತಮ. ಇದು ವೆಚ್ಚ ತಗ್ಗಿಸುವುದರ ಜೊತೆಗೆ ಜನರು ಒಂದೇ ಬಾರಿಗೆ ಯಾವ ಸರ್ಕಾರ ಬೇಕೆಂಬುದನ್ನು ನಿರ್ಧರಿಸಲು ಅವಕಾಶ ಸಿಗಲಿದೆ. ಈ ಪರಿಕಲ್ಪನೆ ಒಳ್ಳೆಯ ಉದ್ದೇಶ ಹೊಂದಿದ್ದರೆ ಅಥವಾ 4-5 ವರ್ಷಗಳ ಪರಿವರ್ತನೆಯ ಹಂತವಿದ್ದರೆ ಅದು ದೇಶಕ್ಕೆ ಹಿತಾಸಕ್ತಿಯಾಗುತ್ತದೆ. ಈ ಬಗ್ಗೆ ಜನರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾತ್ರೋ ರಾತ್ರಿ ಬದಲಾವಣೆ ತರಲು ಪ್ರಯತ್ನಿಸಿದರೆ ಸಮಸ್ಯೆಗಳೂ ಉಂಟಾಗುತ್ತವೆ ಎಂದು ಎಚ್ಚರಿಸಿದ್ದಾರೆ.
Advertisement
ಏಕಾಏಕಿ ಪರಿವರ್ತನೆ ತರಲು ಸಾಧ್ಯವಿಲ್ಲ. ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ಸರ್ಕಾರ ಒಂದೇ ಬಾರಿಗೆ ಚುನಾವಣೆ ನಡೆಸುವ ಮಸೂದೆ ತರುತ್ತಿದೆ. ಅದು ಮೊದಲು ಜಾರಿಗೆ ಬರಲಿ. ಇದನ್ನು ಸರ್ಕಾರ ಒಳ್ಳೆಯ ಉದ್ದೇಶದಿಂದ ತಂದಿದ್ದೇ ಆದಲ್ಲಿ, ದೇಶಕ್ಕೆ ಒಳಿತಾಗುತ್ತದೆ ಎಂದರೆ ಬೆಂಬಲ ನೀಡೋಣ. ಆದರೆ ಸರ್ಕಾರವು ಯಾವ ಉದ್ದೇಶದಿಂದ ಅದನ್ನ ತರುತ್ತಿದೆ ಎಂಬುದರ ಮೇಲೆ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
ಒಂದು ರಾಷ್ಟ್ರ-ಒಂದು ಚುನಾವಣೆ ಪರಿಕಲ್ಪನೆಗೆ ಐಎನ್‌ಡಿಐಎ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಹಲವು ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ನಡುವೆ ಪ್ರಶಾಂತ್ ಕಿಶೋರ್ ಅವರ ಹೇಳಿಕೆಯು ಅಚ್ಚರಿ ಉಂಟುಮಾಡಿದೆ.
ಏನಿದು ಒನ್ ನೇಷನ್, ಒನ್ ಎಲೆಕ್ಷನ್?
ಹಲವಾರು ಅಚ್ಚರಿ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಈಗ ‘ಒಂದು ದೇಶ, ಒಂದು ಚುನಾವಣೆ’ ನಡೆಸಲು ಮುಂದಾಗಿದೆ ಎಂಬ ಪ್ರಶ್ನೆ ಎದ್ದಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ದೇಶಾದ್ಯಂತ ಏಕಕಾಲದಲ್ಲಿ ನಡೆಸುವುದಕ್ಕೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂದು ಕರೆಯಲಾಗುತ್ತದೆ. ಇದು 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯ ಭಾಗವಾಗಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನದ ಬಗ್ಗೆ ನಿರೀಕ್ಷೆ ಈಗ ಹೆಚ್ಚಾಗಿದೆ.
1967 ರವರೆಗೆ ಭಾರತದಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿತ್ತು. ನಾಲ್ಕು ಚುನಾವಣೆಗಳು ಈ ರೀತಿ ನಡೆದಿದ್ದವು. 1968-69ರಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಅಕಾಲಿಕವಾಗಿ ವಿಸರ್ಜಿಸಲ್ಪಟ್ಟ ನಂತರ ಈ ಪದ್ಧತಿ ಸ್ಥಗಿತವಾಗಿದೆ. ಲೋಕಸಭೆಯು ಮೊದಲ ಬಾರಿಗೆ 1970 ರಲ್ಲಿ ನಿಗದಿತ ಅವಧಿಗಿಂತ ಒಂದು ವರ್ಷ ಮುಂಚಿತವಾಗಿ ವಿಸರ್ಜನೆಯಾಗಿತ್ತು ಮತ್ತು 1971 ರಲ್ಲಿ ಮಧ್ಯಂತರ ಚುನಾವಣೆಗಳು ನಡೆದಿತ್ತು. ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಸಾಕಾರಗೊಳಿಸಲು ಸಾಂವಿಧಾನಿಕ ತಿದ್ದುಪಡಿ ಮತ್ತು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮೂರನೇ ಎರಡರಷ್ಟು ಸದಸ್ಯರ ಬೆಂಬಲದ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.
Web Stories