ಕೃಷ್ಣ ಜನ್ಮಾಷ್ಮಮಿ ಎಂದರೆ ಅದೊಂದು ಸಡಗರ. ಮನೆಯಲ್ಲಿ ಮಕ್ಕಳಿದ್ದರಂತೂ ಆ ಸಂಭ್ರಮ ಹೇಳತೀರದು. ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಹಾಕಿ, ಸಿಂಗರಿಸಿ ಅದರ ಸೊಬಗು ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಖುಷಿ. ಇದೀಗ ನಟಿ ಪ್ರಣಿತಾ ಸುಭಾಷ್ ಸಹ ತಮ್ಮ ಮಗಳು ಆರ್ನಾಗೆ ಕೃಷ್ಣನ ವೇಷ ತೊಡಿಸಿದ್ದಾರೆ.
Advertisement
ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಾಯಕಿ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಣಿತಾ ಸುಭಾಷ್, ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮಗಳು ಆರ್ನಾಗೆ ಕೃಷ್ಣನ ವೇಷ ಹಾಕಿದ್ದಾರೆ. ಆದರೆ, ಎಲ್ಲಿಯೂ ಮಗುವಿನ ಮುಖವನ್ನು ಮಾತ್ರ ರಿವೀಲ್ ಮಾಡಿಲ್ಲ. ಎರಡು ತಿಂಗಳ ಹೆಣ್ಣು ಮಗುವಿಗೆ ಸರಳವಾದ ಕೃಷ್ಣನ ಅಲಂಕಾರ ಮಾಡಿದ್ದಾರೆ. ಪಂಚೆ, ಕೈಯಲ್ಲಿ ಕೊಳಲು, ಹಣೆಗೆ ನಾಮವಿಟ್ಟು ಆಚರಿಸಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ
Advertisement
Advertisement
ಮಗಳ ಕೃಷ್ಣಾಲಂಕಾರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಟಿ, ಈ ಮೂಲಕ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ.