ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೆರಿಗೆಯ ನಂತರ ಮೊದಲ ಬಾರಿಗೆ ಮಗುವಿನ ಜತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಪ್ರಣಿತಾ ಭೇಟಿ ನೀಡಿದ್ದಾರೆ.
View this post on Instagram
`ಪೊರ್ಕಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಪ್ರಣಿತಾ, ಬಳಿಕ ಬಹುಭಾಷಾ ನಾಯಕಿಯಾಗಿ ಮಿಂಚಿದ್ದರು. ಕಳೆದ ಲಾಕ್‌ಡೌನ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ನಿತಿನ್ ಜತೆ ಹಸೆಮಣೆ ಏರಿದ್ದರು. ಕೆಲ ದಿನಗಳ ಹಿಂದೆ ಹೆಣ್ಣು ಮಗುವಿಗೆ ತಾಯಿಯಾಗಿ ಗುಡ್ ನ್ಯೂಸ್ ಕೊಟ್ರು. ಇದೀಗ ಹೆರಿಗೆಯ ನಂತರ ಮೊದಲ ಬಾರಿಗೆ ಅತ್ತೆ ಮತ್ತು ಮಗುವಿನ ಜತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಪ್ರಣಿತಾ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಾಲಿವುಡ್ ಗೆ ನಿರ್ದೇಶಕ ಹರಿಸಂತು ಎಂಟ್ರಿ : ಜುಲೈನಿಂದ ಲಂಡನ್ ನಲ್ಲಿ ಶೂಟಿಂಗ್
View this post on Instagram
ಸದ್ಯ ಪ್ರಣಿತಾ ನಟನೆಯ `ರಾಮನ ಅವತಾರ’ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.ಸದ್ಯದಲ್ಲೇ ಸಿನಿಮಾ ತೆರೆ ಕಾಣಲಿದೆ. ಹೊಸ ಬಗೆಯ ಪಾತ್ರಗಳು ಚಂದನವನಕ್ಕೆ ಪ್ರಣಿತಾ ಸುಭಾಷ್ ಕಂಬ್ಯಾಕ್ ಆಗಲಿದ್ದಾರೆ.
Live Tv