ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿದ್ದ ನಟಿ ಪ್ರಣಿತಾ ಸುಭಾಷ್ (Pranitha Subhash) ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡರು. ಇದೀಗ ಸದ್ಯಕ್ಕೆ ಚಿತ್ರರಂಗಕ್ಕೆ ಬ್ರೇಕ್ ಹಾಕಿ, ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹೆರಿಗೆಯ ನಂತರ ಮತ್ತಷ್ಟು ಸ್ಲಿಮ್ ಮತ್ತು ಫಿಟ್ ಆಗಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮೂಲಕ ಪ್ರಣಿತಾ, ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.
View this post on Instagram
ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕಳೆದ ವರ್ಷ ಉದ್ಯಮಿ ನಿತಿನ್ ಜೊತೆ ಹಸೆಮಣೆ ಏರಿದ್ದರು. ಇತ್ತೀಚೆಗೆ ಮುದ್ದು ಮಗಳು `ಅರ್ನಾ'(Arna) ಆಗಮನದಿಂದ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮದುವೆ ಮತ್ತು ಮಗಳ ಎಂಟ್ರಿಯ ನಂತರ ಪ್ರಣಿತಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಇತ್ತೀಚೆಗೆ ಚೆಂದದ ಫೋಟೋಶೂಟ್ ಮಾಡಿಸಿ, ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮೆರೂನ್ ಕಲರ್ ಡ್ರೆಸ್ನಲ್ಲಿ ಮಿಂಚಿರುವ ಪ್ರಣಿತಾ ಅವರನ್ನ ನೋಡಿ ಫ್ಯಾನ್ಸ್ `ಸಂತೂರ್ ಮಮ್ಮಿ’ ಅಂತಾ ಕರೆದಿದ್ದಾರೆ.
View this post on Instagram
ನಟಿ ಪ್ರಣಿತಾ ತಮ್ಮ ಹೆರಿಗೆಯ ಬಳಿಕ ಸಖತ್ ಚೇಂಜ್ ಆಗಿದ್ದಾರೆ. ಬಳಕುವ ಬಳ್ಳಿಯಂತೆ ಮತ್ತಷ್ಟು ಫಿಟ್ ಆಗಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಹಾಗಾಗಿ ಇತ್ತೀಚಿಗಿನ ಪ್ರಣಿತಾ ಅವರ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಚಿತ್ರರಂಗಕ್ಕೆ ವಾಪಾಸ್ ಬನ್ನಿ ಎಂದು ಫ್ಯಾನ್ಸ್ ಮನವಿ ಮಾಡ್ತಿದ್ದಾರೆ. ಇದನ್ನೂ ಓದಿ:ಎಕ್ಸ್ಬಾಯ್ಫ್ರೆಂಡ್ಗೆ ಮತ್ತೆ ಲವ್ ಯೂ ಎಂದ ಜಾನ್ವಿ ಕಪೂರ್
View this post on Instagram
ಇನ್ನೂ ಪ್ರಣಿತಾ ಸುಭಾಷ್, ಮದುವೆ ಮುನ್ನ ನಟಿಸಿದ್ದ `ರಾಮನ ಅವತಾರ’ (Ramana Avatara) ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.