`ಪೊರ್ಕಿ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಪ್ರಣಿತಾ ಸುಭಾಷ್, ಬಹುಭಾಷಾ ನಟಿಯಾಗಿ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದರು. ಸಿನಿಮಾ ಜತೆಗೆ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆ ಮಾಡುತ್ತಾ ರಿಯಲ್ ಲೈಫ್‌ನಲ್ಲೂ ಅಚ್ಚುಮೆಚ್ಚಿನ ನಾಯಕಿಯಾಗಿ ಮನೆಮಾತಾದ್ರು. ಇನ್ನು ಕಳೆದ ವರ್ಷ ಲಾಕ್‌ಡೌನ್ ವೇಳೆಯಲ್ಲಿ ನಟಿ ಪ್ರಣಿತಾ ಹಸೆಮಣೆ ಏರಿದ್ದರು. ಈಗ ಬೇಬಿ ಬಂಪ್ ಫೋಟೋಶೂಟ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ.
ಇತ್ತೀಚೆಗಷ್ಟೇ ಪತಿ ನಿತಿನ್ ಹುಟ್ಟುಹಬ್ಬದ ದಿನದಂದು ತಾವು ಗರ್ಭಿಣಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಜತೆಗೆ ವಿಶೇಷ ಫೋಟೋಶೂಟ್‌ನಿಂದ ತಮ್ಮ ಅಭಿಮಾನಿಗಳಿಗೆ ಪ್ರಣಿತಾ ಗುಡ್‌ನ್ಯೂಸ್ ಕೊಟ್ಟಿದ್ದರು. ಆ ಪೋಸ್ಟ್ನಲ್ಲಿ ಪ್ರಣಿತಾ ಅವರು ಪತಿ ನಿತಿನ್ ರಾಜ್ ಮೇಲೆ ಕುಳಿತುಕೊಂಡು ತಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದನ್ನೂ ಓದಿ:ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?
View this post on Instagram
ಇದೀಗ ನಟಿ ಪ್ರಣಿತಾ ಮತ್ತೊಂದು ಹೊಸ ಬೇಬಿ ಬಂಪ್ ಫೋಟೋ ಶೇರ್ ಮಾಡಿ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪೂಲ್ ಬದಿಯಲ್ಲಿ ಮತ್ತು ಸನ್‌ಡೇಸ್ಸ್ ಎಂಬರ್ಥದಲ್ಲಿ ಬೇಬಿ ಬಂಪ್ ಫೋಟೋಸ್ ಪೋಸ್ಟ್ ಮಾಡಿದ್ದಾರೆ. ಇದೀಗ ಪ್ರಣೀತಾ ನಿತಿನ್ ದಂಪತಿ ಹೊಸದೊಂದು ಜೀವದ ಆಗಮನದ ಖುಷಿಯಲ್ಲಿದ್ದಾರೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.