ಜಿಲ್ಲೆಯ ವಿವಿಧ ಕಡೆಯಲ್ಲಿ ಇಂದು (ಆಗಸ್ಟ್ 21) ನಾಗರ ಪಂಚಮಿ ಹಬ್ಬವನ್ನ (Nagara Panchami) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಸುಭಾಷ್ (Pranitha Subhash) ಕೂಡ ನಾಗರಪಂಚಮಿ ಹಬ್ಬವನ್ನು ಆಚರಿಸಿದ್ದಾರೆ. ನಾಗದೇವರ ಆಚರಣೆಯ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಟಿ ಪ್ರಣೀತಾಗೆ ಹಿಂದೂ ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ವಿಶೇಷ ಒಲವಿದೆ. ಇದೀಗ ನಾಗರಪಂಚಮಿ ಹಬ್ಬವನ್ನ ಕುಟುಂಬದ ಜೊತೆ ಆಚರಿಸಿದ್ದಾರೆ. ನಾಗದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಅತ್ತೆಯೊಂದಿಗೆ ಪ್ರಣೀತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಮದುವೆಯಾದ ಮೇಲೆ ನಟಿ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಮಾಲಿವುಡ್ ಸಿನಿಮಾ ಮೂಲಕ ನಟಿ ಕಮ್ ಬ್ಯಾಕ್ ಆಗಿದ್ದಾರೆ. ನಟ ದಿಲೀಪ್‌ಗೆ ಪ್ರಣೀತಾ ನಾಯಕಿಯಾಗಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನ ನಟಿ ಕೇರಳದಲ್ಲಿ ಮುಗಿಸಿಕೊಟ್ಟಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ
ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜು (Nithin Raju) ಜೊತೆ ಹಸೆಮಣೆ ಏರಿದ್ದ ಚೆಲುವೆ ಪ್ರಣಿತಾ ಈಗ ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ಕೂಡ ಮಾಡ್ತಿದ್ದಾರೆ.