ನವದೆಹಲಿ: SC – ST ಸಮುದಾಯಗಳಿಗೆ ಮೀಸಲಾತಿ (Reservation) ಹೆಚ್ಚಿಸುವ ಸರ್ಕಾರದ ನಿರ್ಧಾರ ಕೇವಲ ರಾಜಕೀಯ ಗಿಮಿಕ್ ಎಂದು ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ಆದೇಶ ಸುಪ್ರೀಂಕೋರ್ಟ್ (Supreme Court) ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ಎಸ್ಸಿ – ಎಸ್ಟಿ ಮೀಸಲಾತಿ ಹೆಚ್ಚಳ ಸರ್ಕಾರದ ನಿರ್ಧಾರ, ಅದು ಏನೇ ಇರಲಿ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಈ ಸಮಯದಲ್ಲಿ ಈಡೀಗ, ಬಿಲ್ಲವ ಸಮುದಾಯದ ಬಗ್ಗೆಯೂ ಸರ್ಕಾರ ಯೋಚನೆ ಮಾಡಬೇಕು. ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಿಎಂ ಎಸ್ಟಿ ಎಸ್ಸಿಗೆ ಹೊಸ ಮೀಸಲಾತಿ ಘೋಷಣೆ ಮಾಡಿದ್ದಾರೆ. ಸಂಪುಟದಲ್ಲಿ ಅನುಮತಿಯೂ ಸಿಕ್ಕಿದೆ ಹೊಸ 7% ಮೀಸಲಾತಿ ಎಲ್ಲಿಂದ ತರುತ್ತೀರಿ. ಈ ನಿರ್ಧಾರ ಸುಪ್ರೀಂಕೋರ್ಟ್ ಆದೇಶದಂತೆ 50% ಕ್ಯಾಪ್ ಮೀರಿದೆ 2Aಯಿಂದ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ಇದು ಚುನಾವಣೆಗಾಗಿ (Election) ಕೈಗೊಂಡ ನಿರ್ಧಾರವಾಗಿದೆ ಎಂದರು.
ಈಡೀಗ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡುತ್ತಿದೆ. ಪ್ರವರ್ಗ 1 ಸೇರಿಸಲು ಮನವಿ ಮಾಡಿದೆ. ಕುಲಕಸಬು ಮುಂದುವರಿಸಲು ಅನುಮತಿ ಕೊಡಲು ಕೇಳಿದೆ. ನಾರಾಯಣ ಗುರು ನಿಗಮ ಮಂಡಳಿ ಮಾಡಲೂ ಮನವಿ ಮಾಡಿದ್ದೇವು. ಈವರೆಗೂ ಸರ್ಕಾರ ಯಾವ ಕೆಲಸ ಮಾಡಿಲ್ಲ. ಈ ಮೂಲಕ ಸರ್ಕಾರ ನಮಗೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.
ಮೊನ್ನೆ ವಾಲ್ಮೀಕಿ ಜಯಂತಿ ಸರ್ಕಾರ ಮಾಡಿತು. ಯಾಕೆ ನಾರಾಯಣ ಗುರುಗಳ ಜಯಂತಿ ಮಾಡಿಲ್ಲ, ಸಚಿವ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ ಇದಕ್ಕೆ ನೇರ ಹೊಣೆ, ಡಿ.ಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಮಾಡಿದರು. ಆದರೆ ಆ ಕಾರ್ಯಕ್ರಮಕ್ಕೆ ಡಿಸಿ ಕೂಡಾ ಬರಲಿಲ್ಲ. ನಮ್ಮ ಸಮುದಾಯದ 7 ಜನ ಶಾಸಕರು ಇದ್ದಾರೆ. ಆದರೆ ಯಾರು ಕೂಡಾ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.
ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಮೇಲೂ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಇದನ್ನು ಸಮುದಾಯ ಗಮನಿಸುತ್ತಿದೆ. ನಮ್ಮನ್ನು ಪ್ರವರ್ಗ 1 ಸೇರಬೇಕು, ಮಂಡಳಿ ಘೋಷಣೆ ಮಾಡಬೇಕು ಇಲ್ಲವಾದರೇ ಜ. 6ರಿಂದ ಕುದ್ರೊಳಿ ಗೋಕರ್ಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಫೆ. 15ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ. ಬಳಿಕ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ. ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡು ಕೈಬಿಡಲಾಗುತ್ತದೆ. ಸಿಎಂ ಬೊಮ್ಮಾಯಿ, ಬಿಎಸ್‍ವೈಗೂ ಮನವಿ ಮಾಡಿದೆ. ಸಮುದಾಯದ ಏಳು ಜನ ಶಾಸಕರಿಗೂ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ದಕ್ಷಿಣ ಕನ್ನಡ (Dakshina Kannada) ಸೇರಿ ಹಲವು ಕಡೆ ನಮ್ಮ ಸಮುದಾಯ ಹೆಚ್ಚಿದೆ. ರಾಜಕೀಯ ಪ್ರಾತಿನಿಧ್ಯ ಕೊಡದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಕಾಂಗ್ರೆಸ್ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಇನ್ನು ಕೆಲವು ದಿನಗಳಲ್ಲಿ ಇದು ಪ್ರಣಾಳಿಕೆ ಸೇರಲಿದೆ. ಒಂದು ವೇಳೆ ಬಿಜೆಪಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೇ ನಾವು ಕಾಂಗ್ರೆಸ್ (Congress) ಜೊತೆಗೆ ರಾಜಕೀಯವಾಗಿ ಕೈಜೋಡಿಸಬೇಕಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಹಿಂದುಳಿದ ವರ್ಗಗಳಿಗೆ ಬಿಜೆಪಿ (BJP) ಸರ್ಕಾರದಲ್ಲಿ ನ್ಯಾಯ ಸಿಕ್ಕಲ್ಲ, ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಇಡೀ ಮೀಸಲಾತಿ ವ್ಯವಸ್ಥೆ ಪರಿಷ್ಕರಣೆಯಾಗಬೇಕು. ಎಲ್ಲ ಸಮುದಾಯ ಮುಖಂಡರ ಜೊತೆ ಮಾತನಾಡಿಕೊಂಡು ನಿರ್ಧಾರ ಮಾಡಬೇಕು. ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಬದಲಾವಣೆಯಾಗಬೇಕು. ಈ ಬಗ್ಗೆ ದೆಹಲಿಯಲ್ಲಿ ಕೆಲವು ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆಯೂ ಮಾಡಲಿದ್ದೇನೆ ಎಂದರು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು