Bengaluru City
ಕಮಲಹಾಸನ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ದೂರು

ಬೆಂಗಳೂರು: ಮಹಾಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನಟ ಕಮಲಹಾಸನ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ದೂರು ನಿಡಿದ್ದಾರೆ.
ನಟರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸ್ವಾಮೀಜಿ ಕಮಲಹಾಸನ್ ವಿರುದ್ದ ಎಫ್‍ಐಆರ್ ದಾಖಲು ಮಾಡದಿದ್ರೆ ತೀವ್ರ ಪ್ರತಿಭಟನೆ ಮಾಡೊದಾಗಿ ಎಚ್ಚರಿಕೆ ನೀಡಿದ್ದಾರೆ.
ಆರೋಪ ಏನು?: ಹೆಣ್ಣನ್ನ ಮುಂದಿಟ್ಕೊಂಡು ಇಡೀ ಕಥೆ ಹೇಳಿದ್ರು. ಅದೇನ್ ಮಹಾಗ್ರಂಥ ಅಂತ ನಾವ್ ನಂಬಬೇಕಾ ಎಂದು ನಟ ಕಮಲಹಾಸನ್ ಮಾ.12ರಂದು ಖಾಸಗಿ ಚಾನಲ್ ವೊಂದಕ್ಕೆ ಮಹಾಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು.
