– ಮೂರು ತಿಂಗಳಲ್ಲಿ 100ಕ್ಕೂ ಅಧಿಕ ಮಕ್ಕಳು ಶಾಲೆಗೆ ಸೇರ್ಪಡೆ
ಮಡಿಕೇರಿ: ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಪೆರೆಜೆ ಗ್ರಾಮದ (Peraje Village) ಸರ್ಕಾರಿ ಶಾಲೆಯೊಂದು ಮಕ್ಕಳ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು. ಪೆರೆಜೆ ಗ್ರಾಮದ ಸೇರಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಆ ಶಾಲೆಯೇ ಆಸರೆಯಾಗಿತ್ತು. ಒಂದು ಕಾಲದಲ್ಲಿ ಸಾವಿರಾರು ಮಕ್ಕಳಿಂದ ತುಂಬಿ ತುಳುತ್ತಿದ್ದ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಮಕ್ಕಳನ್ನು ಆ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದರು. ಖಾಸಗಿ ಶಾಲೆಗಳನ್ನ (Private School) ಪೋಷಕರು ಮುಖ ಮಾಡಿದ್ರು. ಕ್ರಮೇಣ ದಾಖಲಾತಿ ಕೊರತೆಯಿಂದ ಆ ಶಾಲೆಯೇ ಮುಚ್ಚುವ ಹಂತಕ್ಕೆ ತಲುಪಿತ್ತು. ಇಂತಹ ಪರಿಸ್ಥಿತಿಯಲ್ಲಿ ʻನಿಮ್ಮ ಪಬ್ಲಿಕ್ ಟಿವಿʼಯ (Public TV) ಒಂದೇ ಒಂದು ಕರೆಯಿಂದ ಶಾಲೆಗೆ ಮರುಜೀವ ಸಿಕ್ಕಿದೆ. ಹೌದು ʻಪಬ್ಲಿಕ್ ಟಿವಿʼಯು ಗಡಿಭಾಗದ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂದು ಪ್ರಣವ್ ಫೌಂಡೇಶನ್ ಸದಸ್ಯರ ಬಳಿ ಕೇಳಿಕೊಂಡಿತ್ತು. ಇಂದು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಪೆರಜೆ ಸರ್ಕಾರಿ ಶಾಲೆ ಬೆಳೆದು ನಿಂತಿದೆ.
ಹೌದು. ಪೆರಜೆ ಗ್ರಾಮದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಕ್ಕಳಿಗೆ 1982 ರಿಂದ 2000 ಇಸವಿ ವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಈ ಶಾಲೆ ಜ್ಞಾನಾರ್ಜನೆ ನೀಡಿತ್ತು. ಕಾಲಕ್ರಮೇಣ ಈ ಶಾಲೆಯ ಹಿರಿಯ ಶಿಕ್ಷಕರು ನಿವೃತ್ತಿ ಹೊಂದಿದರು. ಇದರಿಂದ ಹೊಸ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಮೂಲ ಸೌಕರ್ಯಗಳಿಲ್ಲ ಎನ್ನುವ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾದರು. ಇದರಿಂದ ಇಡೀ ಶಾಲೆಯೇ ವಿದ್ಯಾರ್ಥಿಗಳಿಲ್ಲದೇ ಬಣಗುಡುತ್ತಿತ್ತು. ಶಿಕ್ಷಣ ಇಲಾಖೆ ಕೂಡ ಶಾಲೆಯನ್ನು ಮುಚ್ಚುವಂತೆ ಆದೇಶ ನೀಡಿತ್ತು. ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ – ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ
ಇದಾದ ಬಳಿಕ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ನಮ್ಮ ಮಡಿಕೇರಿಯ ʻಪಬ್ಲಿಕ್ ಟಿವಿʼ ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ್ ಅವರಿಗೆ ಕರೆ ಮಾಡಿ ಶಾಲೆಯನ್ನ ಉಳಿಸಿಕೊಂಡುವಂತೆ ಮನವಿ ಮಾಡಿದ್ರು. ಬಳಿಕ ʻಪಬ್ಲಿಕ್ ಟಿವಿʼ ಪ್ರಣವ್ ಫೌಂಡೇಶನ್‌ಗೆ ಸಸ್ಯರಿಗೆ ಕರೆ ಮಾಡಿ ಪರಿಸ್ಥಿತಿಯನ್ನ ಮನವರಿಕೆ ಮಾಡಿಕೊಟ್ಟಿತ್ತು. ನಂತರ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರಣವ್ ಫೌಂಡೇಶನ್‌ನ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮೂರೇ ತಿಂಗಳ ಅವಧಿಯಲ್ಲಿ ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಶಾಲೆಯ ವಾತಾವರಣವನ್ನ ಬದಲಾಯಿಸಿದ್ದಾರೆ. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ – ಟಾಪರ್‌ಗಳು ಯಾರು?
5 ದಶಕಗಳನ್ನು ಪೂರೈಸಿದ ಪೆರೆಜೆ ಗ್ರಾಮದ ಜ್ಯೋತಿ ಪ್ರೌಢಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಸುಣ್ಣ-ಬಣ್ಣ ಕಾಣದೇ ಅದೆಷ್ಟೋ ವರ್ಷಗಳಾಗಿತ್ತು. ಈ ಶಾಲೆಯನ್ನ ಮೇಲ್ದರ್ಜೆಗೆ ತೆಗೆದುಕೊಂಡು ಹೋಗಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಶಾಲೆಯನ್ನು ದತ್ತು ಪಡೆದ ಪ್ರಣವ್ ಫೌಂಡೇಶನ್‌ನ ಸದಸ್ಯರು ಆಧುನಿಕ ಸ್ಪರ್ಶ ನೀಡಿದ್ದಾರೆ. ಈ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಶೈಕ್ಷಣಿಕ ಪ್ರವಾಸ, ಉಚಿತ ಕಲಿಕಾ ಸಾಮಗ್ರಿ, ಕಂಪ್ಯೂಟರ್ ಡಿಜಿಟಲ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯ, ಸ್ಪೋಕನ್ ಕ್ಲಾಸ್, ಪೌಷ್ಠಿಕ ಆಹಾರ ಸೌಲಭ್ಯ ಕಲ್ಪಿಸಿರುವುದಲ್ಲದೇ, ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯ ಸಹ ಕಲ್ಪಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವಕಳೆ – ರೈತರ ಮೊಗದಲ್ಲಿ ಮಂದಹಾಸ
ಇನ್ನೂ ಈ ಶಾಲೆಗೆ ಶಿಕ್ಷಕರು ಇಲ್ಲದೇ ಶಾಲೆಗಳಿಗೆ ಮಕ್ಕಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂದು ಅರಿತ ಸದಸ್ಯರು ಶಾಲೆಗೆ ಸುತ್ತಮುತ್ತಲಿನಲ್ಲಿ ಇರುವಂತಹ ಅತೀ ಹೆಚ್ಚು ಓದಿರುವ ಯುವತಿಯರನ್ನೇ ಅತಿಥಿ ಶಿಕ್ಷಕನಾಗಿ ನೇಮಕ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಇಲ್ಲಿರುವ ಸುಮಾರು 5-6 ಶಿಕ್ಷಕರಿಗೆ ಪ್ರಣವ್ ಫೌಂಡೇಶನ್‌ನ ಸದಸ್ಯರೇ ದಾನಿಗಳ ನೆರವಿನಿಂದ ಪ್ರತಿ ತಿಂಗಳು ತಲಾ ಒಬ್ಬ ಶಿಕ್ಷಕರಿಗೆ 12,000 ರಿಂದ 60,0000 ರೂ.ವರೆಗೆ ವೇತನ ನೀಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದಕ್ಕೆ ʻಪಬ್ಲಿಕ್ ಟಿವಿʼಯ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಸರ್ ಪ್ರೇರಣೆ ಎನ್ನುತ್ತಾರೆ ಪ್ರಣವ್ ಫೌಂಡೇಶನ್‌ನ ಸದಸ್ಯರು.