ನವದೆಹಲಿ: ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಪುತ್ರಿ ಶರ್ಮಿಷ್ಠ ಮುಖರ್ಜಿ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಣಬ್ ಮುಖರ್ಜಿ ಅವರ ಭೇಟಿಯನ್ನು ಈಗಾಗಲೇ ತಮ್ಮ ಸಿದ್ದಾಂತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಎಸ್‍ಎಸ್ ಹಾಗೂ ಸಂಘ ಪರಿವಾರ ಬಿಂಬಿಸಿದೆ. ಸಮಾರಂಭದಲ್ಲಿನ ಭಾಷಣ ಬಹುಬೇಗ ಮರೆತು ಹೋಗುತ್ತದೆ. ಆದರೆ ಈ ದೃಶ್ಯಗಳು ಮಾಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
Hope @CitiznMukherjee now realises from todays’ incident, how BJP dirty tricks dept operates. Even RSS wouldn’t believe that u r going 2 endorse its views in ur speech. But the speech will be forgotten, visuals will remain & those will be circulated with fake statements. 1/2
— Sharmistha Mukherjee (@Sharmistha_GK) June 6, 2018
Advertisement
ಮತ್ತೊಂದು ಟ್ವೀಟ್ ನಲ್ಲಿ ನಾಗಪುರದ ಈ ಭೇಟಿ ಹಲವು ಸುಳ್ಳು, ವದಂತಿಗಳನ್ನು ಹರಡುವುದಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಡೆ ಹೆಚ್ಚು ಕಾಲ ಪರಿಣಾಮ ಬೀರಲಿದ್ದು, ಇದು ಆರಂಭ ಮಾತ್ರ ಎಂದು ಟ್ವೀಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Advertisement
ಇಂದು ನಡೆಯಲಿರುವ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಅವರು ಈಗಾಗಲೇ ನಾಗಪುರಕ್ಕೆ ಆಗಮಿಸಿದ್ದಾರೆ. ಆದರೆ ಪ್ರಣಬ್ ಅವರ ಈ ನಿರ್ಧಾರಕ್ಕೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದರು.
Advertisement
.@CitiznMukherjee By going 2 Nagpur, u r giving BJP/RSS full handle 2 plant false stories, spread falls rumours as 2day & making it somewhat believable. And this is just d beginning! 2/2
— Sharmistha Mukherjee (@Sharmistha_GK) June 6, 2018
ಪ್ರಣಬ್ ಅವರ ನಿರ್ಧಾರ ಕುರಿತು ಸೋನಿಯಾ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಸಹ ಟ್ವೀಟ್ ಮಾಡಿ ಪ್ರಣಬ್ ದಾ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವುಗಳ ನಡುವೆಯೂ ಮಾಜಿ ರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾವಹಿಸುತ್ತಿದ್ದು, ಸಮಾರಂಭದಲ್ಲಿ ಅವರು ಮಾಡುವ ಭಾಷಣ ಕುತೂಹಲಕ್ಕೆ ಕಾರಣವಾಗಿದೆ.
#WATCH RSS members welcome Former President of India Dr. Pranab Mukherjee on his arrival at Nagpur airport. He is the chief guest at a Rashtriya Swayamsevak Sangh (RSS) program tomorrow (Earlier visuals) pic.twitter.com/vmLg23M7ni
— ANI (@ANI) June 6, 2018
ಕಥಕ್ ನೃತ್ಯಪಟು ಆಗಿರುವ ಶರ್ಮಿಷ್ಠಾ ಮುಖರ್ಜಿ 2014ರಲ್ಲಿ ಕಾಂಗ್ರೆಸ್ ಸೇರಿದ್ದು, 2015ರಲ್ಲಿ ದೆಹಲಿಯ ಗ್ರೇಟರ್ ಕೈಲಾಸ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಪ್ ಅಭ್ಯರ್ಥಿ ವಿರುದ್ಧ ಸೋತು ಮೂರನೇ ಸ್ಥಾನ ಪಡೆದಿದ್ದರು. ಪ್ರಸ್ತುತ ದೆಹಲಿಯ ಕಾಂಗ್ರೆಸ್ಸಿನ ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್ ಎಸ್‍ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.
#Maharashtra: Visuals of preparation for the concluding function of 'Tritiya Varsh Varg' (third-year course) at RSS Headquarters in Nagpur. Former President Pranab Mukherjee will also participate in the event as the chief guest & address the workers today. pic.twitter.com/lYbQQWIQlk
— ANI (@ANI) June 7, 2018