ನವದೆಹಲಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಯೋಗ ಮೋದಿ ಪರವಾಗಿ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಯೋಗದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.
ಎನ್‍ಡಿ ಟಿವಿಯ ಸಂಪಾದಕೀಯ ನಿರ್ದೇಶಕಿ ಸೋನಿಯಾ ಸಿಂಗ್ ಅವರು ಬರೆದಿದ್ದ “ಡಿಫೈನಿಂಗ್ ಇಂಡಿಯಾ ಥ್ರೂ ದೇರ್ ಐಸ್” ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯು ಚುನಾವಣಾ ಆಯೋಗದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಮ್ಮ ಸಂಸ್ಥೆಗಳು ಉತ್ತಮವಾಗಿದೆ. ಈ ಸಂಸ್ಥೆಗಳು ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ನನ್ನ ಪ್ರಕಾರ ಕಳಪೆ ಕೆಲಸಗಾರ ಮಾತ್ರ ತನ್ನ ಸಲಕರಣೆಗಳನ್ನು ದೂಷಿಸುತ್ತಾನೆ. ಉತ್ತಮ ಕೆಲಸಗಾರ ಈ ಸಲಕರಣೆಗಳನ್ನು ಹೇಗೆ ಬಳಕೆ ಮಾಡುವುದು ಎಂದು ಯೋಚನೆ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರಿಂದ ಹಿಡಿದು ಇಂದಿನ ಆಯುಕ್ತರವರೆಗೆ ಆಯೋಗ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇವತ್ತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಈ ಸಂಸ್ಥೆಗಳೇ ಕಾರಣ. ಆ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ಉತ್ತಮವಾಗಿ ಕೆಲಸ ಮಾಡಿದೆ. ಈ ಕೆಲಸವನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement
From Electoral Bonds & EVMs to manipulating the election schedule, NaMo TV, “Modi’s Army” & now the drama in Kedarnath; the Election Commission’s capitulation before Mr Modi & his gang is obvious to all Indians.
The EC used to be feared & respected. Not anymore.
— Rahul Gandhi (@RahulGandhi) May 19, 2019
ಲೋಕಸಭಾ ಚುನಾವಣೆಯ ಕೊನೆಯ ಸುತ್ತು ಮಗಿದ ಬಳಿಕ ರಾಹುಲ್ ಗಾಂಧಿ, “ಚುನಾವಣೆ ವೇಳಾಪಟ್ಟಿ, ನಮೋ ಟಿವಿ, ಮೋದಿ ಸೈನ್ಯ ಮತ್ತು ಈಗ ಕೇದಾರನಾಥದಲ್ಲಿ ಮೋದಿ ನಾಟಕ ಈ ಇಲ್ಲಾ ವಿಚಾರದಲ್ಲೂ ಚುನಾವಣಾ ಆಯೋಗ ಮೋದಿಗೆ ಬೆಂಬಲ ನೀಡಿದೆ ಎಂದು ಭಾರತೀಯರಿಗೆ ಸ್ಪಷ್ಟವಾಗಿದೆ” ಎಂದು ಟ್ಟೀಟ್ ಮಾಡಿ ಚುನಾವಣಾ ಆಯೋಗದ ಮೇಲೆ ಕಿಡಿಕಾರಿದ್ದರು.