ನವದೆಹಲಿ: ಜೂನ್ 7 ರಂದು ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಹೋಗದಂತೆ ಹಲವಾರು ಕಾಂಗ್ರೆಸ್ ನಾಯಕರುಗಳಿಂದ ಪತ್ರಗಳು ಫೋನ್ ಕರೆಗಳು ಬಂದಿದೆ ಎಂದು ತಿಳಿಸಿದ ಅವರು ನಾಗ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಏನು ಹೇಳಬೇಕೋ ಅದನ್ನು ಅಲ್ಲೇ ಹೇಳುತ್ತೇನೆ ಖಡಕ್ ಆಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
Advertisement
ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡಲು ಹೊರಟಿರುವ ಆರ್‍ಎಸ್‍ಎಸ್ ಸಿದ್ದಾಂತ ಬೇರೆ ಕಾಂಗ್ರೆಸ್ ಸಿದ್ದಾಂತ ಬೇರೆ ಎಂದು ಕೇರಳ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ಚೆನ್ನಿತ್ತಲ ಅವರು ಪ್ರಣಬ್ ಮುಖರ್ಜಿ ಭಾಗವಹಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಜೀವನ ಪೂರ್ತಿ ನಮಗೆ ಮಾರ್ಗದರ್ಶಕರಾಗಿದ್ದ ಪ್ರಣಬ್ ಮುಖರ್ಜಿ ಅವರು ಈಗ ಯಾಕೆ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್‍ಎಸ್‍ಎಸ್ ಸಿದ್ದಾಂತದಲ್ಲಿರುವ ತಪ್ಪುಗಳನ್ನು ಮಾತನಾಡಬೇಕು ಎಂದು ಪಿ ಚಿದಂಬರಂ ಹೇಳಿದ್ದಾರೆ.
Advertisement
ಕೈ ನಾಯಕರ ಟೀಕೆಗೆ ಆರ್‍ಎಸ್‍ಎಸ್ ಒಂದು ರಾಷ್ಟ್ರೀಯವಾದಿಗಳ ಸಂಘವೇ ಹೊರತು ಐಎಸ್‍ಐ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ.
Advertisement
ಪ್ರಣಬ್ ಅವರು ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಮುಖರ್ಜಿ ಅವರು ಕಾಂಗ್ರೆಸ್ ಪದವಿ ಬಳಿಕ ರಾಜಕೀಯ ತೊರೆದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರ ವೈಯಕ್ತಿಕ ನಂಬಿಕೆ, ನಿಲುವಿಗೆ ಸಂಬಂಧಿಸಿದೆ. ಅವರು ಕಳೆದ 50 ವರ್ಷಗಳಿಂದ ತಮ್ಮ ರಾಜಕೀಯ ಜೀವನದ ತತ್ವ ಸಿದ್ಧಾಂತಗಳು ಹಾಗೂ ಸದ್ಯದ ಹೇಳಿಕೆಗಳಿಗೂ ಹೋಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಯಾರು, ಏನು ಹೇಳಿದ್ರು?
ಈ ಕುರಿತು ಪ್ರಣಬ್ ಅವರಿಗೆ ಪಾತ್ರ ಬರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಕೆ ಜಾಫರ್ ಷರೀಫ್ ಅವರು, ದಶಕಗಳ ಕಾಲದ ಜಾತ್ಯತೀತ ರಾಜಕಾರಣ ಬಳಿಕ ತಾವು ತೆಗೆದುಕೊಂಡಿರುವ ನಿರ್ಧಾರ ಅಚ್ಚರಿಯನ್ನು ಉಂಟು ಮಾಡಿದ್ದು, ಲೋಕಸಭಾ ಚುನಾವಣೆ ವೇಳೆಯಲ್ಲಿ ಆರ್‍ಎಸ್‍ಎಸ್ ಆಹ್ವಾನ ಮನ್ನಿಸಿರುವುದು ಉತ್ತಮ ಎನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಜೂನ್ 7ರಂದು ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್‍ಎಸ್‍ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.