ಬೆಂಗಳೂರು: ಭಾರತೀಯರ ಬಹುದಿನದ ಕನಸು ಅಯೋಧ್ಯೆ(Ayodhya) ರಾಮ ಮಂದಿರ(Ram Mandir) ಮೊದಲ ಹಂತದ ನಿರ್ಮಾಣ ಕಾರ್ಯ 2024ರಲ್ಲಿ ಮುಕ್ತಾಯವಾಗಲಿದೆ. ಜನವರಿ 2024 ಸಂಕ್ರಾಂತಿ(Makar Sankranti) ವೇಳೆಗೆ ಬಾಲ ರಾಮನ ಪ್ರತಿಷ್ಠಾಪನೆ ಆಗಲಿದೆ ಎಂದು ಕನ್ನಡಿಗ ರಾಮ ಮಂದಿರ ನಿರ್ಮಾಣ ಸಮಿತಿ ಸದಸ್ಯ ಗೋಪಾಲ್ ಜೀ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭರದಿಂದ ರಾಮ ಮಂದಿರ ನಿರ್ಮಾಣ ಕೆಲಸ ಸಾಗುತ್ತಿದೆ. ಭೂಮಿಯಿಂದ 20 ಅಡಿ ಮೇಲಿನವರೆಗೂ ನಿರ್ಮಾಣದ ಕೆಲಸ ಪೂರ್ಣವಾಗಿದೆ. 2024 ಸಂಕ್ರಾಂತಿಗೆ ರಾಮನ ಪ್ರಾಣ ಪ್ರತಿಷ್ಠಾಪನೆ(Pran Pratishtha) ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ ಕರ್ನಾಟಕದಿಂದ 200 ಕೋಟಿ ನಿಧಿ ಸಂಗ್ರಹ
Advertisement
Advertisement
ಗೋಪಾಲ್ ಜೀ ತಿಳಿಸಿದ್ದೇನು?
ಸದ್ಯ ರಾಮ ಮಂದಿರಕ್ಕೆ ಬುನಾದಿ ಹಾಕುವ ಕೆಲಸ ಸಂಪೂರ್ಣವಾಗಿ ಮುಗಿದಿದೆ. ಭೂಮಿಯ 45 ಅಡಿ ಆಡಿ ಆಳದಲ್ಲಿ ಸಿಮೆಂಟ್ ಕಾಂಕ್ರೀಟ್ ಕೆಲಸ ಆಗಿದೆ. ಈಗ ಅದರ ಮೇಲೆ ಬೆಂಗಳೂರಿನ 1700 ಗ್ರಾನೈಟ್ ಕಲ್ಲು ಇಡುವ ಕಾರ್ಯ ಬಹುತೇಕ ಮುಗಿದಿದೆ.
Advertisement
ಇನ್ನೊಂದು ವಾರದಲ್ಲಿ ಈ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ. ಮುಂದೆ ಅದರ ಮೇಲೆ ರಾಜಸ್ಥಾನದ ಭರತ್ ಪುರ ಜಿಲ್ಲೆಯ ಗುಲಾಬಿ ಬಣ್ಣದ ಕಲ್ಲು ಕೆತ್ತನೆಯನ್ನು ಇಡಲಾಗುತ್ತದೆ. 1 ಲಕ್ಷ ಕಲ್ಲುಗಳು ಕೆತ್ತನೆಯಾಗಿ ಅಯೋಧ್ಯೆಗೆ ಬಂದಿದೆ. ಈಗಾಗಲೇ ಕೆಲಸ ಪ್ರಾರಂಭ ಆಗಿದ್ದು, 600 ಕಲ್ಲು ಇಡಲಾಗಿದೆ. ಈಗ ನೆಲದಿಂದ 20 ಅಡಿ ಮೇಲಿನ ಮಟ್ಟದವರೆಗೂ ರಾಮಮಂದಿರ ಕೆಲಸ ಪೂರ್ಣವಾಗಿದೆ. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್
Advertisement
2024 ಜನವರಿ ಸಂಕ್ರಾಂತಿಯ ಉತ್ತಮ ಮುಹೂರ್ತದಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆ ಅ ಸಮಯದಲ್ಲಿ ನಡೆಯಲಿದೆ. ಒಂದು ಮಹಡಿಯ ಕಾರ್ಯ 2024 ಜನವರಿ ವೇಳೆ ಮುಗಿಯಲಿದೆ. ಇನ್ನೊಂದು ಮಹಡಿಗೆ 6-8 ತಿಂಗಳು ಮತ್ತೆ ಸಮಯ ಬೇಕಾಗುತ್ತದೆ. ಇಂದಿನಿಂದ 2 ವರ್ಷಗಳ ಒಳಗೆ ರಾಮಮಂದಿರ ಕೆಲಸ ಸಂಪೂರ್ಣವಾಗಲಿದೆ. ಇದನ್ನೂ ಓದಿ: ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು
ಮಂದಿರ ಹೊರಗೆ ಪ್ರಕಾರದ ನಿರ್ಮಾಣ ಮಾಡಲಾಗುತ್ತದೆ. ಇದು ದೇವಸ್ಥಾನದಷ್ಟು ದೊಡ್ಡದು ಇರಲಿದೆ. ಇದಕ್ಕೆ ಬೇಕಾದ ಕೆಲಸವೂ ರಾಮ ಮಂದಿರದ ಜೊತೆ ಜೊತೆಗೆ ನಡೆಯಲಿದೆ. ರಾಮ ಮಂದಿರದಲ್ಲಿ ದರ್ಶನ ಮಾಡುವವರಿಗೆ ಪೆನ್ನು, ಮೊಬೈಲ್ ಫೋನ್, ಸೇರಿದಂತೆ ಎಲೆಕ್ಟ್ರಿಕ್ ವಸ್ತುಗಳು, ಇನ್ನಿತರ ವಸ್ತುಗಳು ನಿಷೇಧ ಇರಲಿದೆ. ಭಕ್ತರಿಗೆ ಇದೆಲ್ಲವನ್ನೂ ಇಡಲು ಪ್ರಾಥಮಿಕ ಕೆಲಸಗಳಿಗಾಗಿ ಯಾತ್ರಿಗಳ ವ್ಯವಸ್ಥೆ ಮಾಡಲಾಗುತ್ತದೆ. ಇದೆಲ್ಲವನ್ನು ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಮಾಡಲಾಗುತ್ತದೆ. 2024ರ ಅಂತ್ಯದ ವೇಳೆಗೆ ಈ ಕಾರ್ಯ ಮುಗಿಯಲಿದೆ ಎಂದು ಗೋಪಾಲ್ ಜೀ ಮಾಹಿತಿ ನೀಡಿದರು.