ಯಾದಗಿರಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಜಾರಿಯಾಗಬೇಕು. ಇಲ್ಲ ಅಂದ್ರೆ ಜ.1 ರಿಂದ ಉಗ್ರವಾದ ಹೋರಾಟ ಮಾಡ್ತೆವೆ ಅಂತ ಸರ್ಕಾರಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಯಾದಗಿರಿ ನಗರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರದ ಬಳಿಕ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕಿತ್ತು, ಕೋಟ್ಯಂತರ ಜನರನ್ನ ಮತಾಂತರ ಮಾಡುವಂತ ಕೆಲಸ ಆಗಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಜಾರಿಗೆ ತಂದಿಲ್ಲ. ಬೈಬಲ್ ನಲ್ಲಿ ಏನಿದೆ..? ಬರಿ ಕ್ರೌರ್ಯ ತುಂಬಿದೆ. ಬ್ಲಾಕ್ ಮ್ಯಾಜಿಕ್, ಬೇರೆ ಬೇರೆ ತಂತ್ರಗಳಿಂದ ಮತಾಂತರ ಮಾಡಲಾಗುತ್ತೆ. ಇಲ್ಲಿಗೆ ಮತಾಂತರ ಮಾಡೋದು ನಿಲ್ಲಿಸದೆ ಇದ್ರೆ ಕ್ರಿಶ್ಚಿಯನ್ ಸಮುದಾಯದ ಜನರಿಗೆ ಹಿಂದೂ ಕಾರ್ಯಕರ್ತರು ಒದೆಯಬೇಕಾಗುತ್ತೆ ಅಂತ ಗುಡುಗಿದರು. ಇದನ್ನೂ ಓದಿ: ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್
Advertisement
Advertisement
ಮಸೀದಿಯಲ್ಲಿ ಸೌಂಡ್ ಮಾಡುವ ಮೈಕ್ ನಿಂದ ಜನರಿಗೆ ಕಿರಿಕಿರಿ ಆಗ್ತಾಯಿದೆ. ಆಸ್ಪತ್ರೆಗಳ ಪಕ್ಕದಲ್ಲಿರುವ ಮಸೀದಿಗಳಿಂದ ರೋಗಿಗಳಿಗೆ ಎಷ್ಟು ತೊಂದರೆಯಾಗುತ್ತೆ. ಕೋರ್ಟ್ ಹೇಳುತ್ತೆ ಮೈಕ್ ತೆಗೆಯಲು ಆದ್ರೆ ಸರ್ಕಾರ, ಪೊಲೀಸರು ಮುಂದಾಗಲ್ಲ. ನಿಮ್ಮ ಕೈಯಿಂದ ಆಗಲ್ಲ ಅಂದ್ರೆ ಹೇಳಿ ನಾವು ಮಾಡಿ ತೋರಿಸುತ್ತೆವೆ ಅಂತ ಸವಾಲಾಕಿದರು.
Advertisement
ಕೃಷಿ ಕಾಯ್ದೆ ಹಿಂಪಡೆದ ಬಗ್ಗೆ ಮಾತನಾಡಿದ ಮುತಾಲಿಕ್ ಕೇಂದ್ರ ಸರ್ಕಾರ ರೈತರ ಮುಂದೆ ಶರಣಾಗಿದೆ,ತಾವು ತಪ್ಪು ಮಾಡಿದ್ದಿವಿ ಅಂತ ಒಪ್ಪಿಕೊಂಡಂತಾಯ್ತು ಎಂದರು.