ಬೆಂಗಳೂರು: ಗೌರಿ ಹತ್ಯೆ ಪ್ರಕರಣದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಪಾತ್ರವಿದ್ದು, ಮೊದಲು ಅವರನ್ನು ತನಿಖೆಗೆ ಒಳಪಡಿಸಬೇಕು ಅಂತಾ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿರುವ ಮುತಾಲಿಕ್, ಸಿಎಂ ಇಬ್ರಾಹಿಂ ಐಎಸ್‍ಐ ಏಜೆಂಟ್ ಎಂದು ಆರೋಪಿಸಿದರೆ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮುತಾಲಿಕ್, ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಿಎಂ ಇಬ್ರಾಹಿಂ ನೀವು ಕೂಡ ಐಎಸ್‍ಐ ಏಜೆಂಟ್, ಪಾಕಿಸ್ತಾನದ ಸಂಪರ್ಕ ಹೊಂದಿರುವ ವ್ಯಕ್ತಿ ಎಂದು ನಾನು ಹೇಳಿದ್ರೆ ಹೇಗಿರುತ್ತೆ? ನಮ್ಮ ವಿರುದ್ಧ ಸಾಕ್ಷಿ ಇದ್ದರೆ ಎಸ್‍ಐಟಿಗೆ ಕೊಡಿ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಿ. ನಮ್ಮ ಸಂಘಟನೆ ಶ್ರೀ ರಾಮಸೇನೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಕೊಲೆ, ಸುಲಿಗೆ ಮಾಡುವ ಸೈನ್ಯ ಅಲ್ಲ. ರಾಜಕೀಯದವರ ತರ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
Advertisement
ಇದೇ ವೇಳೆ ಗೌರಿ ಪ್ರಕರಣದಲ್ಲಿ ಬಂಧಿತವಾಗಿರುವ ಪರಶುರಾಮ ವಾಗ್ಮೋರೆ ನಮ್ಮ ಸಂಘಟನೆಯ ವ್ಯಕ್ತಿ ಅಲ್ಲ. ಆತ ಯಾರೂ ಎಂದು ನನಗೆ ಗೊತ್ತಿಲ್ಲ. ಅದರ ವಿಷಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಪರಶುರಾಮ ತಪ್ಪು ಮಾಡಿದರೆ ಶಿಕ್ಷೆ ಆಗಲಿ. ಗೌರಿ ಲಂಕೇಶ್ ಗೆ ನಿರಂತರ ನಕ್ಸಲ್ ಜೊತೆ ಸಂಪರ್ಕ ಹೊಂದಿದ್ದರು. ಗೌರಿ ಲಂಕೇಶ್ ಪತ್ರಿಕೆಯಲ್ಲಿಯೂ ನಕ್ಸಲ್ ಬಗ್ಗೆ ಬರೆದಿದ್ದರೂ. ಅ ಗುಂಪಿನವರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.