ಉಡುಪಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು. ಕರಾವಳಿಯ ಒಂದು ಕ್ಷೇತ್ರವನ್ನು ಆಯ್ಕೆ ಮಾಡಬೇಕು. ಉಡುಪಿ ಜಿಲ್ಲೆಯಿಂದಲೇ ಕಣಕ್ಕಿಳೀರಿ ಸರ್ ಎಂಬ ಒತ್ತಾಯ ಶುರುವಾಗಿದೆ. ಸಂಘಟನೆಯ ಒತ್ತಾಸೆಗೆ ಮಣಿದು ಗುರು ಶಿಷ್ಯನ ನಡುವೆ ಸಮರ ಏರ್ಪಡುತ್ತಾ ಎಂಬ ಕುತೂಹಲ ಜೋರಾಗಿದೆ.
Advertisement
ಮುತಾಲಿಕ್ ಅಂದ್ರೆ ಹಿಂದೂ ಫೈರ್ ಬ್ರ್ಯಾಂಡ್. ಹಿಂದುತ್ವ ರಾಷ್ಟ್ರವಾದಿ ವಿಚಾರದಲ್ಲಿ ಪ್ರಮೋದ್ ಮುತಾಲಿಕ್ ದೇಶದಲ್ಲಿ ಮುಂಚೂಣಿ ಹೆಸರು. ರಾಜ್ಯದಲ್ಲಿ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಪ್ರಮೋದ್ ಮುತಾಲಿಕ್ ಮುಂದಿನ ವಿಧಾನಸಭಾ ಚುನಾವಣೆ (VidhanaSabha Election)ಗೆ ಸ್ಪರ್ಧಿಸಬೇಕು ಎಂದು ಕರಾವಳಿಯ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಮಂಡ್ಯದಲ್ಲಿ ಕಾಣಿಸಿಕೊಂಡಿತು ಸಾವರ್ಕರ್ ಫೋಟೋ
Advertisement
Advertisement
ನವರಾತ್ರಿ ಸಂದರ್ಭದಲ್ಲಿ ಉಡುಪಿ (Udupi) ಪ್ರವಾಸ ಮಾಡಿದ್ದ ಮುತಾಲಿಕ್‍ಗೆ ಉಡುಪಿ ಜಿಲ್ಲೆಯಲ್ಲೇ ಸ್ಪರ್ಧಿಸಿ ಎಂದು ಕಾರ್ಯಕರ್ತರು ದುಂಬಾಲು ಬಿದ್ದಿದ್ದಾರೆ. ಕರ್ನಾಟಕದ ಯೋಗಿ ವಿಧಾನಸೌಧದಲ್ಲಿ ಇರಬೇಕು ಎನ್ನುತ್ತಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಎಂದು ಕಾರ್ಯಕರ್ತರು ಬೆನ್ನು ಬಿದ್ದಿದ್ದಾರೆ.
Advertisement
ಕಾರ್ಕಳ ವಿಧಾನಸಭಾ ಕ್ಷೇತ್ರ (karkala vidhanasabha constituency) ದಲ್ಲಿ ನವರಾತ್ರಿ ಸಂದರ್ಭ ಪ್ರಮೋದ್ ಮುತಾಲಿಕ್ ಎರಡು ದಿನ ಹತ್ತಕ್ಕೂ ಹೆಚ್ಚು ಕಡೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭ ಹಿಂದೂಪರ ಸಂಘಟನೆಗಳು ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯ ಭದ್ರಕೋಟೆ ಕಾರ್ಕಳ, ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಮತಕ್ಷೇತ್ರ. ಸುಮಾರು ಅರ್ಧ ಲಕ್ಷ ಅಂತರದಲ್ಲಿ ಗೆದ್ದಿರುವ ಸುನಿಲ್ ಕುಮಾರ್ ಅವರಿಗೆ ಭಜರಂಗದಳದ ಗುರು ಮುತಾಲಿಕ್ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ.
2014ರಲ್ಲಿ ಪಕ್ಷಕ್ಕೆ ಸೇರಿಸಿದ್ದ ಬಿಜೆಪಿ (BJP) 24 ಗಂಟೆಯ ಒಳಗೆ ಸದಸ್ಯತ್ವ ರದ್ಧು ಮಾಡಿತ್ತು. ಆ ಬೆಳವಣಿಗೆಯಿಂದ ಇವತ್ತಿನ ತನಕ ಮುತಾಲಿಕ್ ಬಿಜೆಪಿಗೆ ಬಿಸಿ ತುಪ್ಪ. ಕಮಿಷನ್ ಮತ್ತು ಹಿಂದುತ್ವದ ವಿಚಾರದಲ್ಲಿ ರಾಜ್ಯ ಬಿಜೆಪಿ ಮೇಲೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದು ಮುತಾಲಿಕ್ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವಾಗಲಿದ್ದಾರಾ? ರಾಜಕೀಯ ಪಡಸಾಲೆಯಲ್ಲಿ ಏನೆಲ್ಲ ನಡೆಯುತ್ತೆ ಎಂಬ ಕುತೂಹಲ ಜನಕ್ಕೆ ಇದೆ.