– ನಿಮ್ಮ ವೋಟ್ ಬ್ಯಾಂಕ್‍ಗಾಗಿ ಟೆರರಿಸ್ಟ್‍ಗಳನ್ನು ಬೆಳೆಸಬೇಡಿ
ಬಾಗಲಕೋಟೆ: ಕುಂಕುಮ ಬಳೆ, ವಿಭೂತಿ ನಮ್ಮ ಸಂಸ್ಕೃತಿ ಪರಂಪರೆ. ಈ ಬಗ್ಗೆ ಮಾತನಾಡಿದ್ರೆ ನಾಲಿಗೆ ಸೀಳ್ತೀವಿ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪ್ರಚೋದನಕಾರಿ ಹೇಳಿಕೆ ನಿಡಿರುವ ಮುತಾಲಿಕ್, ಹಿಜಾಬ್ ವಿವಾದ ಸಂಬಂಧ ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇಂದು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ದಾಷ್ಟ್ರ್ಯ ಬೆಳೆದಿದೆ. ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋ ಅಲ್ಲ, ಪ್ಯಾಷನ್ ಅಲ್ಲ, ಅಲಂಕಾರವಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ. ಈ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಬಿಡುತ್ತೇವೆ ಹುಷಾರಾಗಿರಿ. ಅವು ಸಮವಸ್ತ್ರದ ಭಾಗಗಳಲ್ಲ. ಸಮವಸ್ತ್ರ ಅಂದರೆ ಬರೀ ಬಟ್ಟೆ. ಬಟ್ಟೆ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ, ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!
Advertisement
Advertisement
ಹಿಜಬ್ ಹಿಂದೆ ಇಸ್ಲಾಮೀಕರಣ ಇದೆ. ಬರೀ ಹಿಜಬ್ ಅಷ್ಟೇ ಅಲ್ಲ, ಈಗ ನೇರವಾಗಿ ಬುರ್ಕಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜ್ ಮಾಡೋಕೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಮ್ ಇತಿಹಾಸ ಹೇಳುತ್ತದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು.
Advertisement
ಇದೇ ವೇಳೆ ಮುಸ್ಲಿಂ ಸಂಘಟನೆಗಳ ನಿಷೇಧ ಮಾಡಲು ಮುಂದಾಗದ ಬಿಜೆಪಿ ವಿರುದ್ಧವೂ ಮುತಾಲಿಕ್ ಕಿಡಿಕಾರಿದರು. ಈ ಬಗ್ಗೆ ನಮಗೆ ಬಹಳ ದುಃಖ ಆಗುತ್ತೆ, ನೋವಾಗುತ್ತೆ, ಸಿಟ್ಟು ಬರುತ್ತದೆ. ಮುಸ್ಲಿಂ ವೋಟ್ ಒಡೆಯುತ್ತಾರೆ ಅಂತ ಪಿಎಫ್‍ಐ, ಸಿಎಫ್.ಎಮ್ ಐಎಮ್ ಅಂತ ರಾಕ್ಷಸರನ್ನು ಬಿಜೆಪಿಯವರು ಬೆಳೆಸುತ್ತಿದ್ದಾರೆ. ಬಿಜೆಪಿಯವರೇ ಈ ಎಲ್ಲ ಸಂಘಟನೆಗಳನ್ನು ಸಾಕುತ್ತಿದ್ದಾರೆ. ಕಾಂಗ್ರೆಸ್ ಈ ಸಂಘಟನೆಗಳನ್ನು ಬ್ಯಾನ್ ಮಾಡಿ ಅಂತ ಹೇಳುತ್ತಿದೆ. ಕಮ್ಯುನಿಸ್ಟ್ ಪಕ್ಷದವರು ಹೇಳುತ್ತಿದ್ದಾರೆ, ಬಿಜೆಪಿಯವರೇ ನಿಮ್ಮ ವೋಟ್ ಬ್ಯಾಂಕ್‍ಗಾಗಿ ಟೆರರಿಸ್ಟ್ ಗಳನ್ನು ಬೆಳೆಸಬೇಡಿ. ಮುಂದಿನ ದಿನಗಳಲ್ಲಿ ಈ ಎಲ್ಲ ಸಂಘಟನೆಗಳ ವಿರುದ್ಧ ವಿವಿಧ ಹಿಂದೂ ಪರ ಸಂಘಟನೆಗಳು ಸೇರಿ ಹೋರಾಟ ಮಾಡಲಿದ್ದೇವೆ ಎಂದರು. ಇದನ್ನೂ ಓದಿ: ‘ಫಸಲ್ ಭೀಮಾ ಯೋಜನೆ’ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ: ಕೆ.ಸಿ.ನಾರಾಯಣಗೌಡ
Advertisement
ಪಿಎಫ್ ಐ, ಸಿಎಫ್‍ಐ, ಈಗಾಗಲೇ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿವೆ. ಪಿಎಫ್‍ಐ ಬ್ಯಾನ್ ಮಾಡಿ ಅಂತ ಕೇರಳದ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು, ನಾನು ಹೇಳುತ್ತಿಲ್ಲ. ಹಿಂದೆ ಅವರೇ ಪತ್ರವನ್ನು ಬರೆದಿದ್ದರು. ಪಿಎಫ್‍ಐ ದೊಡ್ಡ ರಾಕ್ಷಸಿ ರೂಪವಾಗಿ ದೇಶಕ್ಕೆ ಕಂಟಕವಾಗುತ್ತದೆ. ಕಾಂಗ್ರೆಸ್ ನವರೇ ಇಂದು ಸಿಎಂ ಭೇಟಿಯಾಗಿ ಬ್ಯಾನ್ ಮಾಡಿ ಅಂತ ಹೇಳಿದ್ದಾರೆ. ನಿಮಗೇನಾಗಿದೆ(ಬಿಜೆಪಿ) ಬ್ಯಾನ್ ಮಾಡೋದಕ್ಕೆ, ಎಷ್ಟು ದಾಖಲೆಗಳು ಬೇಕು ಕೊಲೆ ಕೇಸಿನಲ್ಲಿ.. ಪಿಎಫ್‍ಐ ಹೆಸರಲ್ಲಿ 9 ಚಾರ್ಜ್ ಶೀಟ್ ಆಗಿದೆ. ಬ್ಯಾನ್ ಮಾಡುವಂತಹ ಕೆಲಸ ಬಿಜೆಪಿ ಸರ್ಕಾರ ಮಾಡದಿದ್ದರೆ, ಇವು ನಿಮ್ಮನ್ನು ನುಂಗಿ ಹಾಕುತ್ತವೆ ಎಂದು ಎಚ್ಚರಿಕೆ ಕೊಡುತ್ತೇನೆ ಎಂದರು.